ಸರ್ಕಾರಕ್ಕೆ ‌ಬಿಸಿ ಮುಟ್ಟಿಸಲು ಮುಂದಾದ ಖಾಸಗಿ ಶಾಲೆಗಳು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ,21-ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ನಾಳೆ ಬೃಹತ್ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರಕ್ಕೆ ‌ಬಿಸಿ ಮುಟ್ಟಿಸಲು ಖಾಸಗಿ ಶಾಲೆಗಳು ಮುಂದಾಗಿವೆ.

ರುಪ್ಸಾ ಕರ್ನಾಟಕ ಖಾಸಗಿ ಶಾಲೆಗಳ ಒಕ್ಕೂಟ ಹಾಗೂ ಕಲ್ಯಾಣ ಕರ್ನಾಟಕ ಖಾಸಗಿ ಶಾಲೆ ಒಕ್ಕೂಟ ಜಂಟಿ ಪ್ರತಿಭಟನೆ
ಹಮ್ಮಿಕೊಂಡಿವೆ. ಕಲ್ಯಾಣ ಕರ್ನಾಟಕ ಖಾಸಗಿ ಶಾಲೆಗಳ ಪ್ರತಿಭಟನೆಗೆ ರೂಪ್ಸಾ ಒಕ್ಕೂಟ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ ಎಂದು ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ತಿಳಿಸಿದ್ದಾರೆ.ಸುಮಾರು 6 ಸಾವಿರಕ್ಕೂ ಹೆಚ್ಚು ಶಿಕ್ಷಕರು, ಸಿಬ್ಬಂದಿಗಳು ಪ್ರತಿಭಟನೆಯಲ್ಲಿ ‌ಭಾಗವಹಿಸುವ ಸಾಧ್ಯತೆ ಇದೆ.

# ಬೇಡಿಕೆಗಳೇನು?
1995ರ ನಂತರ ಕನ್ನಡ ‌ಮಾಧ್ಯಮ ಶಾಲೆಗಳನ್ನ ಅನುದಾನಕ್ಕೆ ಒಳಪಡಿಸುವುದು,ಕಟ್ಟಡ ಸುರಕ್ಷಾ ವಿಚಾರದಲ್ಲಿ ಅಧಿಕಾರಿಗಳಿಂದ ಕಿರುಕುಳ ತಪ್ಪಿಸಬೇಕು,ಹಾಗೂ ‌ನೇರವಾಗಿ ಇಲಾಖೆ ವೆಬ್ ಸೈಟ್ ಟ್ಯಾಗ್ ಮಾಡುವ ವ್ಯವಸ್ಥೆ ಜಾರಿಗೆ ಬರಬೇಕು, ಬಿಇಒ ಹಾಗೂ ಡಿಡಿಪಿಐ ಅಧಿಕಾರಿಗಳು ಶಾಲೆಗಳ ಮೇಲಿನ ಕಿರುಕುಳಕ್ಕೆ ಕಡಿವಾಣ ಹಾಕಬೇಕು,

ಸ್ಥಗಿತಗೊಂಡಿರುವ ಆರ್.ಟಿ.ಇ ಅನುಷ್ಠಾನ ಮತ್ತೆ ಪುನಾರಂಭಿಸಬೇಕು,ಬಿಸಿಯೂಟ ಯೋಜನೆ ಖಾಸಗಿ ಶಾಲೆಗಳಿಗೆ ವಿಸ್ತರಣೆ ‌ಮಾಡಬೇಕು ಎಂಬ ‌ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಖಾಸಗಿ ಶಾಲೆಗಳ ಒಕ್ಕೂಟ ಪ್ರತಿಭಟನೆ ಹಮ್ಮಿಕೊಂಡಿದೆ.

Facebook Comments

Sri Raghav

Admin