ಪಿಗ್ಗಿ-ನಿಕ್ ಮದುವೇಲಿ ಉಂಡೋನೇ ಶ್ರೀಮಂತ..!

ಈ ಸುದ್ದಿಯನ್ನು ಶೇರ್ ಮಾಡಿ

Priyanak--01

ಜೋಧ್‍ಪುರ್, ಡಿ.1-ಬಾಲಿವುಡ್-ಹಾಲಿವುಡ್ ಖ್ಯಾತ ಅಭಿನೇತ್ರಿ, ಮಾಜಿ ಭುವನ ಸುಂದರಿ ಪ್ರಿಯಾಂಕಾ ಚೋಪ್ರಾ ಮತ್ತು ಇಂಟರ್‍ನ್ಯಾಷನಲ್ ಮ್ಯೂಸಿಕ್ ಸೆನ್ಷೆಷನ್ ನಿಕ್ ಜೋನ್ಸ್ ಅವರ ವಿಜೃಂಭಣೆಯ ವಿವಾಹ ಮಹೋತ್ಸವಕ್ಕೆ ರಾಜಸ್ತಾನದ ಐತಿಹಾಸಿಕ ಜೋಧ್‍ಪುರ್ ಸಜ್ಜಾಗಿದೆ. ಚಾರಿತ್ರಿಕ್ ತಾಜ್ ಉಮೈದ್  ಭವನ್ ಪ್ಯಾಲೆಸ್‍ನಲ್ಲಿ ನಾಳೆ ಮತ್ತು ನಾಡಿದ್ದು ನಿಕ್‍ಯಾಂಕಾ ಅವರ ವೈಭವೋಪೇತ ಸ್ವಯಂವರಕ್ಕೆ ಕ್ಷಣಗಣನೆ ಆರಂಭವಾಗಿದೆ. ಬಾಲಿವುಡ್ ಸೂಪರ್‍ಸ್ಟಾರ್‍ಗಳು ಹಾಗೂ ದೇಶ ವಿದೇಶಗಳ ಖ್ಯಾತನಾಮರು ಜೋಧ್‍ಪುರ್‍ನತ್ತ ಪ್ರಯಾಣ ಬೆಳೆಸಿದ್ದಾರೆ. ನವೆಂಬರ್ 29ರಿಂದ ಆರಂಭವಾಗಿರುವ ಈ ತಾರಾ ಜೋಡಿಯ ಅದ್ಧೂರಿ ಮದುವೆ ಸಮಾರಂಭ ಡಿ.3ರವರೆಗೂ ನಡೆಯಲಿದೆ.

ಮೆಹಂದಿ, ಹಲ್ಚಿ, ಗೀತ್-ಸಂಗೀತ್ ಕಾರ್ಯಕ್ರಮಗಳು ಈಗಾಗಲೇ ಮೆಹರಾನ್‍ಗಢ್ ಕೋಟೆಯಲ್ಲಿ ಅದ್ದೂರಿಯಾಗಿ ನಡೆದು ಗಮನಸೆಳೆದಿವೆ ನ.29 ರಿಂದ ಡಿ.1ರ ವರೆಗೆ ಈ ಕೋಟೆಯನ್ನು ಬುಕ್ ಮಾಡಲಾಗಿದೆ. ಈ ಮೂರು ದಿನಗಳ ಕಾಲ ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿದೆ.

ಡಿಸೆಂಬರ್ 2ರಂದು ಪಂಜಾಬಿ ಶೈಲಿಯಲ್ಲಿ ಹಾಗೂ ಡಿಸೆಂಬರ್ 3ರಂದು ಕ್ರಿಶ್ಚಿಯಲ್ ಶೈಲಿಯಲ್ಲಿ ವಿವಾಹ ನೆರವೇರಿಸಲು ವೇದಿಕೆಗಳು ಸಜ್ಜಾಗಿದೆ. ನಿಕ್‍ಯಾಂಕ್ ಕುಟುಂಬದವರು ಮೂರು ದಿನಗಳ ಮೊದಲೇ ಅಲ್ಲಿದ್ದಾರೆ. ಪ್ರಿಯಾಂಕಾರ ಪರಮಾಪ್ತ ಗೆಳತಿಯರಾದ ಅಲಿಯಾ ಭಟ್, ಜೋ ಜೋನಾಸ್, ಸೋಫಿ ಟರ್ನರ್, ರಕ್ತ ಸಂಬಂಧಿ ಪರಿಣೀತಿ ಚೋಪ್ರಾ ಮೊದಲಾದವರು ಹಾಗೂ ನಿಕ್ ಬಂಧು-ಮಿತ್ರರು, ಹಿತೈಷಿಗಳು ಈಗಾಗಲೇ ಜೋಧ್‍ಪುರ್‍ನಲ್ಲಿ ವಾಸ್ತವ್ಯ ಹೂಡಿದ್ದಾರೆ. ನಾಳೆ ಮತ್ತು ನಾಡಿದ್ದು ಅತಿಗಣ್ಯರೂ ಸೇರಿದಂತೆ ವಿವಿಧ ಕ್ಷೇತ್ರಗಳ ಖ್ಯಾತನಾಮರು ಭಾಗವಹಿಸಿ ದಂಪತಿಗಳಿಗೆ ಹಾರೈಸಿ ಶುಭ ಕೋರಲಿದ್ದಾರೆ.

ನಿಕ್‍ಯಾಂಕಾ ಮದುವೆ ಸಮಾರಂಭಕ್ಕಾಗಿ ಈ ಸ್ಟಾರ್‍ಕಪಲ್ 4 ಕೋಟಿ ರೂ.ಗಳಿಗೂ ಹೆಚ್ಚು ಹಣ ವೆಚ್ಚ ಮಾಡಿದ್ದಾರೆ. ತಾಜ್ ಉಮೈದ್ ಭವನ್ ಪ್ಯಾಲೇಸ್‍ನಲ್ಲಿ 64 ಕೊಠಡಿಗಳು ಮತ್ತು ಸೂಟ್‍ಗಳು, 22 ಭವ್ಯ ಕೊಠಡಿಗಳು ಹಾಗೂ 42 ಐಷಾರಾಮಿ ಸೂಟ್‍ಗಳಿವೆ (ಇವುಗಳು ನಾಲ್ಕು ವಿಭಾಗಗಳನ್ನು ಒಳಗೊಂಡಿವೆ. 24 ಐಸಿಹಾಸಿಕ ಕೊಠಡಿಗಳು, 10 ರಾಯಲ್ ಸೂಟ್‍ಗಳು, ಆರು ಗ್ರಾಂಡ್ ರಾಯಲ್ ಸೂಟ್‍ಗಳು ಮತ್ತು ಎರಡು ಪ್ರೆಸಿಡೆನ್ಷಿಯಲ್ ಸೂಟ್‍ಗಳಿವೆ)-ಇವೆಲ್ಲವನ್ನೂ ಪಿಗ್ಗಿ-ನಿಕ್ ಬುಕ್ ಮಾಡಿದ್ಧಾರೆ.  ಈ ಜೋಡಿ ಪ್ಯಾಲೆಸ್ ರೂಮ್‍ಗಳಿಗಾಗಿ 47,300, ಐತಿಹಾಸಿಕ ಸೂಟ್‍ಗಳಿಗಾಗಿ 65,300, ರಾಯಲ್ ಸೂಟ್‍ಗಳಿಗಾಗಿ 1.45 ಲಕ್ಷ ರೂ.ಗಳು ಗ್ರಾಂಡ್ ರಾಯಲ್ ಸೂಟ್‍ಗಳಿಗಾಗಿ 2.30 ಲಕ್ಷ ರೂ.ಗಳು ಹಾಗೂ ಪ್ರೆಸಿಡೆನ್ಷಿಯಲ್ ಸೂಟ್‍ಗಳಿಗಾಗಿ 5.04 ಲಕ್ಷ ರೂ.ಗಳನ್ನು ಪಾವತಿಸಿದ್ದಾರೆ.

ಭವ್ಯ ಅರಮನೆಯಂತಿರುವ ಈ ಹೋಟೆಲ್‍ನಲ್ಲಿ ಒಂದು ರಾತ್ರಿಗೆ ಕಾಯ್ದಿರಿಸಲು 64.40 ಲಕ್ಷ ರೂ.ಗಳಾಗುತ್ತದೆ. ನಿಕ್‍ಯಾಂಕ್ ಇದನ್ನು ಐದು ದಿನಗಳಿಗೆ ಬುಕ್ ಮಾಡಿದ್ದಾರೆ. ಹೀಗಾಗಿ ಅತಿಥಿಗಳ ಆತಿಥ್ಯಕ್ಕೆ 3.2 ಕೋಟಿ ರೂ.ಗಳಾಗಿವೆ. ವಿವಾಹಪೂರ್ವ ಕಾರ್ಯಕ್ರಮಗಳಿಗೂ ಪಿಗ್ಗಿ-ನಿಕ್ ಧಾರಾಳವಾಗಿ ಹಣ ಖರ್ಚು ಮಾಡಿದ್ದಾರೆ. ಮೆಹರಾನ್‍ಗಢ್ ಕೋಟೆಯಲ್ಲಿ ನಡೆದ ಮೆಹಂದಿ, ಅರಿಶಿಣ ಶಾಸ್ತ್ರ ಮತ್ತು ಗೀತ್-ಸಂಗೀತ್ ಕಾರ್ಯಕ್ರಮಕ್ಕಾಗಿ ವೇದಿಕೆ, ದೀಪಾಲಂಕಾರ ವಗೈರೆಗಳಿಗಾಗಿ 20 ಲಕ್ಷ ರೂ.ಗಳ ವೆಚ್ಚವಾಗಿದೆ.

# ಒಬ್ಬರ ಊಟ-ತಿಂಡಿ ವೆಚ್ಚ 18,000 ರೂ.ಗಳು : 
ಕೇಟರಿಂಗ್ ವೆಚ್ಚ(ಬೆಳಗಿನ ಉಪರಾಹ, ಮಧ್ಯಾಹ್ನದ ಊಟ, ಸಂಜೆ ಲಘು ಉಪಹಾರ, ಆಗಾಗ ಪೇಯ-ಪಾನೀಯಗಳು, ರಾತ್ರಿ ಭರ್ಜರಿ ಭೋಜನ) ಒಬ್ಬರಿಗೆ 18,000 ರೂ.ಗಳು. ಪಂಜಾಬಿ, ಹೈದರಾಬಾದಿ, ಕಾಂಟಿನೆಂಟರಲ್, ಮೆಕ್ಸಿಕನ್, ಇಟಾಲಿಯನ್ ಮತ್ತು ಮೆಡಿಟರೇನಿಯನ್ ಶೈಲಿಯ ವಿಶಿಷ್ಟ ಭಕ್ಷ್ಯ ಭೋಜನಗಳ ದೊಡ್ಡ ಮೆನು ಇದೆ. ಭಾರತ ಮತ್ತು ವಿದೇಶಗಳ ಶ್ರೇಷ್ಠ ಬಾಣಸಿಗರು ರುಚಿಕರ ಮತ್ತು ಸ್ವಾದಿಷ್ಟ ಆಹಾರ ತಯಾರಿಸಿ ಗಣ್ಯಾತಿಗಣ್ಯರ ಜಿಹ್ವಾ ಚಾಪಲ್ಯ ತಣಿಸಲಿದೆ. ಒಟ್ಟಾರೆ ನಿಕ್‍ಯಾಂಕ್ ವಿವಾಹ ಟಾಕ್ ಆಫ್ ಡಿ ಟೌನ್ ಎನಿಸಿದೆ. ತಾರಾಜೋಡಿಯ ವಿವಾಹ ಮಹೋತ್ಸವಕ್ಕಾಗಿ ವ್ಯಾಪಕ ಭದ್ರತಾ ಏರ್ಪಾಡುಗಳನ್ನು ಮಾಡಲಾಗಿದೆ.

Facebook Comments

Sri Raghav

Admin