ಡಿ.3ರಂದು ಕ್ರಿಶ್ಚಿಯನ್ ಶೈಲಿಯಲ್ಲಿ ನಿಕ್‍-ಪಿಗ್ಗಿ ಮದುವೆ

ಈ ಸುದ್ದಿಯನ್ನು ಶೇರ್ ಮಾಡಿ

pryankaಜೋಧಪುರ್, ನ.21-ಈಗ ಬಾಲಿವುಡ್‍ನಲ್ಲಿ ವೆಡ್ಡಿಂಗ್ ಸೀಸನ್. ಬಿಟೌನ್ ಸೂಪರ್‍ ಸ್ಟಾರ್‍ ಗಳಾದ ದೀಪಿಕಾ ಪಡುಕೋಣೆ ಮತ್ತು ರಣವೀರ್‍ ಸಿಂಗ್ ಇಟಲಿಯ ಐತಿಹಾಸಿಕ. ಲೇಕ್ ಕೋಮೊದಲ್ಲಿ ನ.14ರಂದು ವಿವಾಹವಾಗಿದ್ದಾರೆ ಇದೀಗ ಪ್ರಿಯಾಂಕಾ ಸರದಿ. ಈಗ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಮತ್ತು ಅಂತಾರಾಷ್ಟ್ರೀಯ ಮ್ಯೂಸಿಕ್ ಸೆನ್‍ಸೇಷನ್ ನಿಕ್ ಜೋನ್ಸ್ ವಿವಾಹಕ್ಕೆ ರಾಜಸ್ಥಾನದ ಜೋಧಪುರ ಸಜ್ಜಾಗಿದೆ.

ದೀಪ್ವೀರ್ ವಿವಾಹವು ಕರ್ನಾಟಕ ಮತ್ತು ಸಿಂಧಿ ಶೈಲಿಯಲ್ಲಿ ನಡೆದಿತ್ತು. ಈಗ ನಿಕ್‍ಯಾಂಕಾ ವಿವಾಹ ಕೂಡ ಹಿಂದೂ ಮತ್ತು ಕ್ರಿಶ್ಚಿಯನ್‍ಶೈಲಿಯಲ್ಲಿ ನಡೆಯುತ್ತಿರುವುದು ವಿಶೇಷ. ಡಿ.2 ರಂದು ಜೋಧಪುರದ ಉಮೈದ್ ಭವನದಲ್ಲಿ ಹಿಂದೂ ಶೈಲಿಯಲ್ಲಿ ಪಿಗ್ಗಿ-ನಿಕ್ ವಿವಾಹ ನೆರವೇರಲಿದೆ. ನಂತರ ಅಂದರೆ ಮರುದಿನ ಡಿ.3 ರಂದು ಈ ಜೋಡಿ ಕ್ರೈಸ್ತ ಸಂಪ್ರದಾಯದಂತೆ ಕಪಲ್‍ಗಳಾಗಲಿದ್ದಾರೆ.

ಪ್ರಿಯಾಂಕಾ ವಿವಾಹಕ್ಕಾಗಿ ಅದ್ಧೂರಿ ವಸ್ತ್ರ ಧರಿಸಲಿದ್ದಾರೆ. ಹಿಂದೂ ಶೈಲಿಯ ವಿವಾಹಕ್ಕಾಗಿ ಅಬುಜಾನಿ-ಸಂದೀಪ್ ಕೋಸ್ಲಾ ವಿಶೇಷವಾಗಿ ವಿನ್ಯಾಸಗೊಳಿಸಿರುವ ವಸ್ತ್ರ ಧರಿಸಲಿದ್ದಾರೆ. ಕ್ರಿಶ್ಚಿಯನ್ ಸ್ಟೈಲ್ ಮ್ಯಾರೇಜ್‍ಗಾಗಿ ರಾಲ್ಫ್ ಲವ್ ಮ್ಯಾನ್ ಡಿಸೈನ್ ಮಾಡಿರುವ ದುಬಾರಿ ಗೌನ್ ಧರಿಸಲಿದ್ದಾರೆ. ಇದಕ್ಕೂ ಮುನ್ನ ನ.29 ಮತ್ತು 30 ರಂದು ಜೋಧಪುರದಲ್ಲಿ ಸಂಗೀತ್ ಮತ್ತು ಮೆಹಂದಿ ಕಾರ್ಯಕ್ರಮ ನಡೆಯಲಿದೆ. ಖ್ಯಾತ ನೃತ್ಯ ನಿರ್ದೇಶಕ ಗಣೇಶ್ ಹೆಗಡೆ ಈ ಎರಡೂ ಕಾರ್ಯಕ್ರಮಗಳಿಗಾಗಿ ವಿಶೇಷ ರೀತಿಯ ನೃತ್ಯ ಸಂಯೋಜನೆ ಮಾಡಲಿದ್ದಾರೆ.

Facebook Comments