ದೇಶದ ಆರ್ಥಿಕತೆ ಪ್ರಪಾತಕ್ಕೆ ಬೀಳುತ್ತಿದೆ : ಪ್ರಿಯಾಂಕಾ ಗಾಂಧಿ ಕಳವಳ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಸೆ.10- ದೇಶದ ಆರ್ಥಿಕತೆಯು ಆಳವಾದ ಪ್ರಪಾತಕ್ಕೆ ಬೀಳುತ್ತಿದೆ. ಲಕ್ಷಾಂತರ ಭಾರತೀ ಯರ ಜೀವ ನೋ ಪಾಯದ ಮೇಲೆ ಆತಂಕದ ತೂಗು ಕತ್ತಿ ನೇತಾಡುತ್ತಿದೆ ಎಂದು ಪ್ರಿಯಾಂಕಾ ಗಾಂಧಿ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ದೇಶದ ಆರ್ಥಿಕತೆಯು ಆಳವಾದ ಪ್ರಪಾತಕ್ಕೆ ಇಳಿದಿದೆ. ಯಾವಾಗ ಈ ಬಗ್ಗೆ ಕಣ್ಣು ತೆರೆಯುವಿರಿ ಎಂದು ಮೋದಿ ಅವರನ್ನು ಪ್ರಶ್ನಿಸಿದ್ದಾರೆ.

ಆಟೋಮೊಬೈಲ್ ವಲಯ ಸೇರಿದಂತೆ ವಿವಿಧ ವಲಯಗಳಲ್ಲಿ ಆರ್ಥಿಕ ಕುಸಿತವು ಮಾರುಕಟ್ಟೆಯ ವಿಶ್ವಾಸ ಕುಸಿಯುತ್ತಿರುವ ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಸರ್ಕಾರ ಯಾವಾಗ ಕಣ್ಣು ತೆರೆಯುತ್ತದೆ ಎಂದು ಪ್ರಿಯಾಂಕ ವಾದ್ರಾ ಟ್ವೀಟ್‍ನಲ್ಲಿ ಪ್ರಶ್ನಿಸಿದ್ದಾರೆ.

Facebook Comments