ನನ್ನೊಂದಿಗೆ ಮಹಿಳಾ ಪೊಲೀಸರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು ಅಪರಾಧವೇ..?

ಈ ಸುದ್ದಿಯನ್ನು ಶೇರ್ ಮಾಡಿ

ಲಖ್ನೋ,ಅ.22-ನನ್ನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಮಹಿಳಾ ಪೊಲೀಸರ ಮೇಲೆ ಉತ್ತರ ಪ್ರದೇಶ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ. ಮಹಿಳಾ ಪೊಲೀಸರ ಈ ವರ್ತನೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಹೊಟ್ಟೆ ಹುರಿ ತರಿಸಿದೆ.

ಹೀಗಾಗಿ ಅಮಾಯಕ ಮಹಿಳಾ ಪೊಲೀಸರ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ ಎಂದು ಪ್ರಿಯಾಂಕಾ ಟ್ವಿಟ್ ಮಾಡಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದ ದಲಿತ ಪೌರ ಕಾರ್ಮಿಕನ ಕುಟುಂಬದವರನ್ನು ಭೇಟಿಯಾಗಲು ನಾನು ಆಗ್ರಾಗೆ ತೆರಳುತ್ತಿದ್ದಾಗ ಕೆಲ ಮಹಿಳಾ ಪೊಲೀಸರು ನನ್ನ ಜತೆ ಪೊಟೊ ತೆಗೆಸಿಕೊಂಡರು.

ಇದು ಮಹಾಪರಾಧವೇ ಎಂದು ಅವರು ಪೊಲೀಸರೊಂದಿಗೆ ಫೋಟೋ ಟ್ಯಾಗ್ ಮಾಡಿದ್ದಾರೆ. ನನ್ನೊಂದಿಗೆ ಫೋಟೊ ತೆಗೆಸಿಕೊಳ್ಳುವುದು ಅಪರಾಧವಾದರೆ, ನಾನು ಸಹ ಉತ್ತರಪ್ರದೇಶ ಸರ್ಕಾರದ ವಿರುದ್ಧ ಕಾನೂನು ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

Facebook Comments