ಬಿಜೆಪಿ ಐಟಿ ಸೆಲ್ ಮುಖ್ಯಸ್ಥನಿಗೆ ಪ್ರಿಯಾಂಕ ವಾಸವಿದ್ದ ನಿವಾಸ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜು.6- ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾಸವಿದ್ದ ಬಂಗಲೆಯನ್ನು ಕೇಂದ್ರ ಸರ್ಕಾರವು ಬಿಜೆಪಿ ಐಟಿ ಸೆಲ್ ಮುಖ್ಯಸ್ಥನಿಗೆ ನೀಡಿದೆ.

ಪ್ರಿಯಾಂಕ ಗಾಂಧಿ ವಾಸವಿದ್ದ ಬಂಗಲೆ ತನಗೆ ಬೇಕು ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅನಿಲ್ ಬಾಲುನಿ ಸರ್ಕಾರಕ್ಕೆ ಮನವಿ ಮಾಡಿದ್ದರು. ಅವರ ಬೇಡಿಕೆಯನ್ನು ಪರಿಗಣಿಸಿರುವ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿರುವುದರಿಂದ ಅನಿಲ್ ಇದೀಗ ಈ ಬಂಗಲೆಯನ್ನು ತಮದಾಗಿಸಿಕೊಂಡಿದ್ದಾರೆ.

ಲೋಧಿ ಎಸ್ಟೇಟ್ ನಲ್ಲಿರುವ 35ನೇ ನಂಬರಿನ ಬಂಗಲೆಯನ್ನು ಪ್ರಿಯಾಂಕ ಗಾಂಧಿ ಖಾಲಿ ಮಾಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿತ್ತು. ಹೀಗಾಗಿ ಪ್ರಿಯಾಂಕ ಗಾಂಧಿ ಬಾಕಿ ಉಳಿಸಿಕೊಂಡಿದ್ದ 3,46,677 ರೂ. ಹಣವನ್ನು ಪಾವತಿಸಿ ಬಂಗಲೆ ಖಾಲಿ ಮಾಡಿದ್ದಾರೆ.

ಈಗ ಖಾಲಿಯಿರುವ ಬಂಗಲೆಯನ್ನು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅನಿಲ್‍ಬಾಲುನಿಗೆ ನೀಡಲಾಗಿದೆ.

Facebook Comments