ಪ್ರೊಕಬ್ಬಡ್ಡಿ ಹರಾಜು : ಇರಾನ್ ಆಟಗಾರರಿಗೆ ಜಾಕ್‍ಪಾಟ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಏ.8- ಐಪಿಎಲ್‍ನಲ್ಲಿ ಕ್ರಿಕೆಟ್ ಪಟುಗಳು ಕೋಟಿ ಕುಲಗಳಾದಂತೆ ಪಿಕೆಎಲ್‍ನಲ್ಲಿ ಕಬ್ಬಡ್ಡಿ ಪಟುಗಳು ಕೂಡ ಲಕ್ಷಾಧಿಪತಿಗಳು, ಕೋಟ್ಯಾಧಿಪತಿಗಳಾಗಿ ಹೊರಹೊಮ್ಮಿದ್ದಾರೆ. ಇಂದಿಲ್ಲಿ ನಡೆದ ಪ್ರೊ ಕಬ್ಬಡ್ಡಿಯ ಹರಾಜು ಪ್ರಕ್ರಿಯೆಯಲ್ಲಿ ದೇಶಿಯ ಆಟಗಾರರಿಗಿಂತ ವಿದೇಶಿ ಆಟಗಾರರನ್ನು ಬಿಕರಿ ಮಾಡಿಕೊಳ್ಳಲು ಫ್ರಾಂಚೈಸಿಗಳು ಉತ್ಸುಕತೆ ತೋರಿದ್ದಾರೆ.

ಇರಾನ್‍ನ ಅಲ್‍ರೌಂಡರ್ ಆಟಗಾರ ಇಸ್‍ಮಾಯಿಲ್ ನಬಿಬಾಕ್ಷ್ 10 ಲಕ್ಷ ಮೂಲಬೆಲೆಯಿಂದ ಬಿಡ್ ಆರಂಭವಾಗಿ ಪಾಟ್ನಾ ಪೈರೇಟ್ಸ್ 60 ಲಕ್ಷ, ತೆಲುಗು ಟೈಟಾನ್ಸ್ 61.75 ಲಕ್ಷಕ್ಕೆ , ಯು ಮುಂಬಾ 70 ಲಕ್ಷಕ್ಕೆ ಹರಾಜು, ಪಟ್ನಾ ಪೈರೇಟ್ಸ್ 77 ಲಕ್ಷಕ್ಕೆ ಕೂಗಿದರೂ ಕೊನೆ ಘಳಿಗೆಯಲ್ಲಿ ಬೆಂಗಾಳ್ ವಾರಿಯರ್ಸ್ ತಂಡವು 77.75 ಲಕ್ಷ ನೀಡುವ ಮೂಲಕ ನಬಿಬಾಕ್ಷ್‍ನನ್ನು ಬಿಕರಿ ಮಾಡಿಕೊಂಡರು.

ಅಟ್ರಾಚಲಿ ನಂತರ ಭಾರೀ ಮೊತ್ತಕ್ಕೆ ಬಿಕರಿಯಾದ ವಿದೇಶಿ ಆಟಗಾರನಾಗಿ ನಬಿಬಾಕ್ಷ್ ಗುರುತಿಸಿಕೊಂಡರು. ಇರಾನ್ ದೇಶದ ಡಿಫರೆಂಡರ್ ಅಬೋಜರ್ ಮಿಗಾನಿ 75 ಲಕ್ಷಕ್ಕೆ ಪಟ್ನಾ ಪೆರೇಟ್ಸ್ ತಂಡದ ಪಾಲಾದರಾದರೂ ತೆಲುಗು ಟೈಟನ್ಸ್ ಅವರು ಮ್ಯಾರ್ಚ್ ಕಾರ್ಡ್ ಬಳಸಿ ತಮ್ಮಲ್ಲೇ ಉಳಿಸಿಕೊಂಡರು.

ಮಿಗಾನಿ 30 ಲಕ್ಷ ಮೂಲ ಬೆಲೆ ನಿಗದಿಪಡಿಸಿದ್ದು ದಾಬಂಗ್ ಡೆಲ್ಲಿ, ಬೆಂಗಾಲ್ ವಾರಿಯರ್ಸ್, ಯು ಮುಂಬಾ, ಹರಿಯಾಣ ಸ್ಟೀಲರ್ಸ್ ತಂಡಗಳು ಭಾರೀ ಪೈಪೋಟಿ ನಡೆಸಿದರೂ ಮಿಗಾನಿ ಹಿಂದಿನ ಋತುವಿನಲ್ಲಿ ತಾವು ಪ್ರತಿನಿಧಿಸಿದ ತೆಲುಗು ಟೈಟಾನ್ಸ್‍ನಲ್ಲಿ ಉಳಿದುಕೊಂಡರು.

ಕೊರಿಯಾದ ಡಿಫೆಂಡರ್ ಜಾಂಗ್ ಕುಂಗ್ ಲೀ 40 ಲಕ್ಷಕ್ಕೆ ಪಾಟ್ನಾ ಪೆರೇಟ್ಸ್ ತಂಡದ ಪಾಲಾದರೆ, ಮೋಸೆನ್ 21 ಲಕ್ಷಕ್ಕೆ ಯುಪಿ ಯೋಧಾಕ್ಕೆ ಬಿಕರಿಯಾದರು. ಹಾದಿ ಹೋಸ್ಟಾರಾಕ್ 16 ಲಕ್ಷವನ್ನು ಜೇಬಿಗಿಳಿಸಿಕೊಳ್ಳುವ ಮೂಲಕ ಪಾಟ್ನಾ ಪೆರೇಟ್ಸ್ ತಂಡವನ್ನು ಕೂಡಿಕೊಂಡರು.

# ಯಾವ ಆಟಗಾರರು ಯಾರ ಪಾಲು:
ಯಂಗ್‍ಚಂಗ್‍ಕೋ- ಯುಮುಂಬಾ-10 ಲಕ್ಷ
ಆದಿ ತಾಜಿಕ್- ಪುಣೇರಿ ಪಲ್ಟಾನ್-10 ಲಕ್ಷ
ಸಿ.ಮಿಲಾತ್‍ಸೈಬಾಕ್-ತಮಿಳ್ ವಾರಿಯರ್ಸ್- 10 ಲಕ್ಷ
ಸಂಜಯ್ ಶ್ರೇಷ್ಠ- ಬೆಂಗಳೂರು ಬುಲ್ಸ್-10 ಲಕ್ಷ
ಸೈಹೀದ್ ಜಪ್ಫಾರೀ-ದಾಬಂಗ್ ಡೆಲ್ಲಿ-16.5 ಲಕ್ಷ
ಡಾಂಗ್ ಗು ಕಿಮ್-ಜೈಪುರ್ ಪಿಂಕ್ ಪ್ಯಾಂಥರ್ಸ್-10 ಲಕ್ಷ
ಡೆವಿತ್ ಜೆನ್ನಿಂಗ್ಸ್- ತೆಲುಗು ಟೈಟಾನ್ಸ್-10 ಲಕ್ಷ
ಡಾಂಗ್‍ಗೋನ್‍ಲೀ-ಯುಮುಂಬಾ-25 ಲಕ್ಷ
ಮುಹಮದ್ ಮಾಗ್‍ಸೋದೋಲು-ಪಾಟ್ನಾ ಪೈರೇಟ್ಸ್-35 ಲಕ್ಷ
ಅಮೀರ್ ಹುಸ್ಸೇನ್-ಹರಿಯಾಣ ಸ್ಟೀಲರ್ಸ್-12.5 ಲಕ್ಷ
ಲಾಲ್ ಮನೋಹರ್ ಯಾದವ್-ಬೆಂಗಳೂರು ಬುಲ್ಸ್-10ಲಕ್ಷ

Facebook Comments

Sri Raghav

Admin