ಪ್ರೊ ಕಬಡ್ಡಿ: ನಂಬರ್ 1ನತ್ತ ಪವನ್ ಪಡೆ ಕಣ್ಣು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.13- ಯುಪಿ ಯೋಧಾ ವಿರುದ್ಧ ಸೋಲು ಕಂಡರೂ ಧೂಳು ಕೊಡವಿಕೊಂಡು ಎದ್ದು ಬಂದು ಬಲಿಷ್ಠ ದಬಾಂಗ್ ಡೆಲ್ಲಿ ವಿರುದ್ಧ 39 ಪಾಯಿಂಟ್ಸ್ ಅಂತರಗಳಿಂದ ಗೆದ್ದು ಅಂಕಪಟ್ಟಿಯಲ್ಲಿ 2ನೆ ಸ್ಥಾನವನ್ನು ಅಲಂಕರಿಸಿರುವ ಪವನ್ ಶೆರಾವತ್‍ನಾಯಕತ್ವದ ಬೆಂಗಳೂರು ಬುಲ್ಸ್ ತಂಡವು ಇಂದು ನಡೆಯುವ ಗುಜರಾತ್ ಜೈಂಟ್ಸ್ ವಿರುದ್ಧ ವಿರೋಚಿತ ಗೆಲುವು ಸಾಸುವ ಮೂಲಕ ನಂಬರ್ 1 ಸ್ಥಾನದತ್ತ ಚಿತ್ತ ಹರಿಸಿದೆ.

ದಬಾಂಗ್ ಡೆಲ್ಲಿ ವಿರುದ್ಧ 61- 22 ಅಂತರಗಳಿಂದ ಗೆಲುವು ಸಾಸಿರುವ ಬೆಂಗಳೂರು ಬುಲ್ಸ್ ತಂಡವು 39 ಅಂಕಗಳಿಂದ ಗೆದ್ದಿದ್ದು ಇಂದು ಕೂಡ ಅದೇ ಹುಮ್ಮಸ್ಸಿನಲ್ಲಿ ಅಖಾಡಕ್ಕೆ ಇಳಿಯಲಿದ್ದಾರೆ.

ದಬಾಂಗ್ ಡೆಲ್ಲಿ ವಿರುದ್ಧ ಉತ್ತಮ ಆಟ ಪ್ರದರ್ಶಿಸಿದ ಬೆಂಗಳೂರು ಬುಲ್ಸ್ ನಾಯಕ ಪವನ್ ಶೆರಾವತ್ 27 ಅಂಕಗಳನ್ನು ಕಲೆ ಹಾಕುವ ಮೂಲಕ ಅತಿ ಹೆಚ್ಚು ರೈಡಿಂಗ್ ಪಾಯಿಂಟ್ಸ್ ಕಲೆ ಹಾಕಿರುವವರ ಪಟ್ಟಿಯಲ್ಲಿ 2ನೆ ಸ್ಥಾನದಲ್ಲಿದ್ದು ಇಂದು ನಡೆಯುವ ಪಂದ್ಯದಲ್ಲೂ ಕೂಡ ಉತ್ತಮ ಪ್ರದರ್ಶನ ನೀಡುವ ಮೂಲಕ ರೈಡರ್ಸ್ ಪಟ್ಟಿಯಲ್ಲಿ ಟಾಪ್ 1 ಸ್ಥಾನ ಪಡೆಯಲು ಪವನ್ ಶೆರಾವತ್ ಕಾತರರಾಗಿದ್ದಾರೆ.

ಆರಂಭಿಕ ಪಂದ್ಯಗಳಲ್ಲಿ ಎಡವಿದ್ದ ಬೆಂಗಳೂರು ಬುಲ್ಸ್ ಡಿಫೆಂಡರ್‍ಗಳು ಇತ್ತೀಚಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನವನ್ನು ತೋರುತ್ತಿರುವುದು ತಂಡದ ಗೆಲುವಿಗೆ ಸಹಕಾರಿಯಾಗಿದೆ. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ 15 ಟ್ಯಾಕಲ್ ಅಂಕಗಳು ಗಳಿಸಿರುವುದು ಬುಲ್ಸ್‍ಗಳ ಸಮರ್ಥವನ್ನು ತೋರಿಸುವಂತಿದೆ.

ಮತ್ತೊಂದೆಡೆ ಸೋಲಿನ ದವಡೆಗೆ ಸಿಲುಕಿದ್ದ ಗುಜರಾತ್ ಜೈಂಟ್ಸ್ ಪಡೆಯು ತೆಲುಗು ಟೈಟಾನ್ಸ್ ವಿರುದ್ಧ ಪಂದ್ಯದಲ್ಲಿ 40-22 ಭಾರೀ ಅಂತರಗಳಿಂದ ಗೆಲ್ಲುವ ಮೂಲಕ ಜಯದ ಹುಮ್ಮಸ್ಸು ಮೂಡಿಸಿಕೊಂಡಿದ್ದು ಇಂದು ಕೂಡ ಅದೇ ಜೋಶ್‍ನಲ್ಲಿ ಬೆಂಗಳೂರು ಬುಲ್ಸ್ ಅನ್ನು ಸೋಲಿಸಲು ಮುಂದಾಗಿದೆ.

ಪ್ರೊ ಕಬಡ್ಡಿ ಋತುವಿನಲ್ಲಿ ಇದುವರೆಗೂ ಬೆಂಗಳೂರು ಬುಲ್ಸ್ ಹಾಗೂ ಗುಜರಾತ್ ಜೈಂಟ್ಸ್ ಪಡೆಯು ಪರಸ್ಪರ 6 ಬಾರಿ ಮುಖಾಮುಖಿಯಾಗಿದ್ದು 3ರಲ್ಲಿ ಜೈಂಟ್ಸ್ ಗೆದ್ದರೆ, 2ರಲ್ಲಿ ಬುಲ್ಸ್ ಜಯ ಸಾಸಿದ್ದು ಒಂದು ಪಂದ್ಯವು ರೋಚಕ ಟೈನಲ್ಲಿ ಅಂತ್ಯ ಕಂಡಿರುವುದರಿಂದ ಇಂದಿನ ಪಂದ್ಯದಲ್ಲಿ ಎರಡು ತಂಡಗಳ ನಡುವೆ ಜಿದ್ದಾಜಿದ್ದಿನ ಪ್ರದರ್ಶನ ನಡೆಯಲಿದೆ.

ಇಂದಿನ ಪಂದ್ಯಗಳು
ಪಟ್ನಾ ಪೈರೇಟ್ಸ್ v/s ಪಿಂಕ್ ಪ್ಯಾಂಥರ್ಸ್ ಸಮಯ: ರಾತ್ರಿ 7.30
ಗುಜರಾತ್ ಜೈಂಟ್ಸ್ v/s ಬೆಂಗಳೂರು ಬುಲ್ಸ್ ಸಮಯ: ರಾತ್ರಿ 8.30

Facebook Comments