ಯೋಗಿ ಆದಿತ್ಯನಾಥ್ ರಾಮರಾಜ್ಯದ ಬದಲಿಗೆ ಗೂಂಡಾರಾಜ್ಯ ನಿರ್ಮಾಣ ಮಾಡಿದ್ದಾರೆ : ರಾಹುಲ್

ಈ ಸುದ್ದಿಯನ್ನು ಶೇರ್ ಮಾಡಿ

ಲಖ್ನೋ,ಜು.22-ಸೋದರಸಂಬಂಧಿ ಯುವತಿಯನ್ನು ಚುಡಾಯಿಸಿದಕ್ಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದ ಪತ್ರಕರ್ತನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆಯನ್ನು ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿ ತೀವ್ರವಾಗಿ ಖಂಡಿಸಿ, ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ರಾಜ್ಯದಲ್ಲಿ ರಾಮರಾಜ್ಯನೀಡುವುದಾಗಿ ವಾಗ್ವಾದನ ಮಾಡಿದ್ದ ಬಿಜೆಪಿ ಸರ್ಕಾರ ಈಗ ಗೂಂಡಾ ರಾಜ್ಯವನ್ನು ನಿರ್ಮಾಣ ಮಾಡಿದೆ ಎಂದು ಆರೋಪಿಸಿದ್ದಾರೆ.

ಸ್ಥಳೀಯ ದಿನಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ವಿಕ್ರಮ್ ಜೋಷಿ ಅವರ ಸೋದರಸಂಬಂಧಿಯಾಗಿದ್ದ ಯುವತಿಯನ್ನು ಕೆಲವರು ಚುಡಾಯಿಸಿ ದೌರ್ಜನ್ಯ ನಡೆಸಿದ್ದರು. ಈ ವಿರುದ್ದ ಪತ್ರಕರ್ತರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಇದೇ ದ್ವೇಷದಲ್ಲಿ ದುಷ್ಕರ್ಮಿಗಳು ಗಾಜಿಯಾಬಾದ್‍ನ ವಿಜಯ್ ನಗರ್ ಮನೆ ಬಳಿಯೇ ಪತ್ರಕರ್ತರ ಮೇಲೆ ಹಲ್ಲೆ ನಡೆಸಿ ತಲೆಗೆ ರಿವಾಲ್ವರ್‍ನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಇಂದು ಮುಂಜಾನೆ 4 ಸಮಯದಲ್ಲಿ ವಿಕ್ರಮ್ ಕೊನೆಯುಸಿರೆಳೆದಿದ್ದಾರೆ.

ಘಟನೆಗೆ ಟ್ವೀಟ್ ಮೂಲಕ ವಿಷಾದ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ, ಕುಟುಂಬದವರಿಗೆ ಸಾಂತ್ವಾನ ಹೇಳಿ, ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ರಾಮರಾಜ್ಯದ ಬದಲಿಗೆ ಗೂಂಡಾರಾಜ್ಯ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Facebook Comments

Sri Raghav

Admin