ವೇಶ್ಯಾವಾಟಿಕೆ ಜಾಲ: ಮೂವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.19- ಬಾಂಗ್ಲಾ ಹಾಗೂ ಇತರ ದೇಶಗಳಿಂದ ಹಾಗೂ ದೇಶಿಯವಾಗಿ ಬೇರೆ ರಾಜ್ಯಗಳಿಂದ ಮಹಿಳೆಯರನ್ನು ಕಳ್ಳ ಸಾಗಾಣಿಕೆ ಮೂಲಕ ಕರೆತಂದು ಬೆಂಗಳೂರಿ ನಲ್ಲಿ ವೇಶ್ಯಾವಾಟಿಕೆ ಜಾಲ ನಡೆಸುತ್ತಿದ್ದ ಪಶ್ಚಿಮಬಂಗಾಳ ರಾಜ್ಯದ ಮೂವರು ಆರೋಪಿ ಗಳನ್ನು ಸಿಸಿಬಿ ಪೊಲೀಸರು ಬಂಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಸಿಸಿಬಿಯ ಮಹಿಳಾ ಸಂರಕ್ಷಣಾ ದಳದ ಅಕಾರಿಗಳು ಮಹಾದೇವಪುರದ ಲಕ್ಷ್ಮೀಸಾಗರ ಲೇಔಟ್‍ನ ಮನೆಯ ಮೇಲೆ ದಾಳಿ ನಡೆಸಿದ್ದು ಪಶ್ಚಿಮಬಂಗಾಳ ರಾಜ್ಯದ ಮುರ್ಷಿದಬಾದ್ ಜಿಲ್ಲೆಯ ನೌಷದ್ ಅಲಿ ಅಲಿಯಾಸ್ ಅಸ್ಲಾಂ ಮೌಲಾ (55), ಫರಗಣ ಜಿಲ್ಲೆಯ ಸ್ವರೂಪ್ ನಗರದ ರಿಯಾಜುಲ್ ಶೇಖ್ (31), ಬಾರಶಾದ್ ಜಿಲ್ಲೆಯ ಸಮೀರ್ (40) ಅವರನ್ನು ಬಂಸಿದ್ದಾರೆ.

ಆರೋಪಿಗಳು ಬೇರೆ ಕಡೆಗಳಿಂದ ಮಹಿಳೆಯರನ್ನು ಕರೆತಂದು ಮಹಾದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಡಿಗೆ ಮನೆಯಲ್ಲಿಟ್ಟು ವೇಶ್ಯಾವಾಟಿಕೆ ಜಾಲ ನಡೆಸುತ್ತಿದ್ದರು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. ನೌಷಾದ್ ಅಲಿ ವಿದೇಶಗಳಿಂದ ಕಳ್ಳಸಾಗಾಣಿಕೆಯಲ್ಲಿ ಕರೆತರುವ ಮಹಿಳೆಯರಿಗೆ ಸುಳ್ಳು ದಾಖಲೆ ಮೇಲೆ ಆಧಾರಕಾರ್ಡ್ ಹಾಗೂ ಇನ್ನಿತರ ಸ್ಥಳೀಯ ದಾಖಲೆಗಳನ್ನು ಮಾಡಿಸಿಕೊಡುತ್ತಿದ್ದ ಎಂದು ತಿಳಿದುಬಂದಿದೆ.

ಈ ಆರೋಪಿಯಿಂದ 11 ಆಧಾರ್‍ಕಾರ್ಡ್ ಹಾಗು ಗುರುತಿನ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಬ್ಬರು ಬಾಂಗ್ಲಾದೇಶದ ಮಹಿಳೆಯರನ್ನು ರಕ್ಷಿಸಿ ರಾಜ್ಯ ನಿಲಯಕ್ಕೆ ಒಪ್ಪಿಸಲಾಗಿದೆ.

Facebook Comments