ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಜಾತಿ ಸೇರ್ಪಡೆಗೆ ವಿರೋಧ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಜ.24- ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿ ವಿಶ್ವವಿದ್ಯಾನಿಲಯ (ಸಿಎಸ್‌ಯು) ತನ್ನ ತಾರತಮ್ಯ ರಹಿತ ನೀತಿಯಲ್ಲಿ ಜಾತಿಯನ್ನು ಸೇರಿಸಿರುವ ಹೊಸ ಘೋಷಣೆಗೆ 80 ಕ್ಕೂ ಹೆಚ್ಚು ಅಧ್ಯಾಪಕರು ವಿರೋಧ ವ್ಯಕ್ತ ಪಡಿಸಿದ್ದಾರೆ. ಸಿ ಎಸ್ಯುಿ ಬೋರ್ಡ್ ಆಫ್ ಟ್ರಸ್ಟಿಗಳಿಗೆ ಅಧ್ಯಾಪಕರು ಬರೆದಿರುವ ಪತ್ರದಲ್ಲಿ, ಹೊಸ ನೀತಿಯು ಅಲ್ಪಸಂಖ್ಯಾತ ಸಮುದಾಯವನ್ನು ಪೋಲೀಸಿಂಗ್ ಮತ್ತು ವಿಭಿನ್ನ ತಾರತಮ್ಯಕ್ಕೆ ಗುರಿಯಾಗಿಸುತ್ತದೆ ಎಂದು ಆತಂಕ ವ್ಯಕ್ತ ಪಡಿಸಿದ್ದಾರೆ.

ಭಾರತೀಯ ಮತ್ತು ದಕ್ಷಿಣ ಏಷ್ಯಾ ಮೂಲದ ಅಧ್ಯಾಪಕರಿಗೆ ಮಾತ್ರ ಅನ್ವಯಿಸುವಂತೆ ಜಾತಿಯನ್ನು ಸೇರಿಸಲಾಗಿದೆ. ಇದು ನಮ್ಮನ್ನು ಪ್ರತ್ಯೇಕವಾಗಿಸುವ ಮಾರ್ಗವಾಗಿದೆ ಎಂದು ಅಕೌಂಟೆನ್ಸಿ ಪ್ರಾಧ್ಯಾಪಕ ಪ್ರವೀಣ್ ಸಿನ್ಹಾ ಹೇಳಿದ್ದಾರೆ.

ಭಾರತೀಯ ಮತ್ತು ದಕ್ಷಿಣ ಏಷ್ಯಾ ಮೂಲದ 600 ಕ್ಕೂ ಹೆಚ್ಚು ಅಧ್ಯಾಪಕರು ವಿಶ್ವವಿದ್ಯಾಲಯದಲ್ಲಿ ಇದ್ದಾರೆ. ವಿವಿಧ ಹಿನ್ನೆಲೆಯ ಅನೇಕ ವಿದ್ಯಾರ್ಥಿಗಳಿಗೆ ತಾರತಮ್ಯವು ದೈನಂದಿನ ವಾಸ್ತವವಾಗಿದೆ. ಅಸ್ತಿತ್ವದಲ್ಲಿರುವ ಕಾನೂನುಗಳು ಮತ್ತು ಸಿಎಸ್‌ಯು ನೀತಿಯ ಅಡಿಯಲ್ಲಿ ಅಂತಹ ಎಲ್ಲಾ ದೂರುಗಳನ್ನು ಪರಿಹರಿಸಲು ದೃಢವಾದ ಕಾರ್ಯವಿಧಾನವಿದೆ ಎಂದು ಇಂಜಿನಿಯರಿಂಗ್ವಿನಭಾಗದ ಪ್ರಾಧ್ಯಾಪಕ ಸುನೀಲ್ ಕುಮಾರ್ ಹೇಳಿದ್ದಾರೆ.

ಹೊಸ ನೀತಿಯೂ ವೈಜ್ಞಾನಿಕವಾಗಿ ವಿಶ್ವಾಸಾರ್ಹ ಪುರಾವೆಗಳನ್ನು ಹೊಂದಿಲ್ಲ. ತಾರತಮ್ಯವನ್ನು ನಿವಾರಿಸುವ ಬದಲು, ಅಸಾಂವಿಧಾನಿಕವಾಗಿ ಪ್ರತ್ಯೇಕಿಸುವ ಮೂಲಕ ತಾರತಮ್ಯವನ್ನು ಉಂಟುಮಾಡುತ್ತದೆ. ಭಾರತೀಯ ಮತ್ತು ದಕ್ಷಿಣ ಏಷ್ಯಾ ಮೂಲದ ಹಿಂದೂ ಅಧ್ಯಾಪಕರನ್ನು ಶಂಕಿತ ವರ್ಗದ ಸದಸ್ಯರನ್ನಾಗಿ ಮಾಡುತ್ತದೆ. ಭಾರತೀಯರು, ಹಿಂದೂಗಳು ಮತ್ತು ಜಾತಿಯ ಬಗ್ಗೆ ಆಳವಾಗಿ ಬೇರೂರಿರುವ, ಸುಳ್ಳುಗಳನ್ನು ಹೆಚ್ಚಿಸುತ್ತದೆ ಎಂದು ಅವರು ಆತಂಕ ವ್ಯಕ್ತ ಪಡಿಸಿದ್ದಾರೆ.

Facebook Comments