ಅಂಕಪಟ್ಟಿ ವಿಳಂಬ ಖಂಡಿಸಿ ತುಮಕೂರು ವಿವಿ ವಿದ್ಯಾರ್ಥಿಗಳ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಜೂ.13- ಅಂಕಪಟ್ಟಿ ವಿಳಂಬ ಖಂಡಿಸಿ ತುಮಕೂರು ವಿ.ವಿ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ 2018-19ನೇ ಸಾಲಿನ ಬಿ.ಎಸ್ಸಿ, ಬಿ.ಕಾಂ, ಬಿ.ಎ, ಬಿ.ಎಸ್.ಡಬ್ಲ್ಯೂ, ಬಿ.ಸಿ.ಎ ಹಾಗೂ ಇತರೆ ಪದವಿ ವಿದ್ಯಾರ್ಥಿಗಳು ನಾಲ್ಕನೇ ಸೆಮಿಸ್ಟರ್ ಹಾಗೂ ಐದನೇ ಸೆಮಿಸ್ಟರ್ ಅಂಕಪಟ್ಟಿ ವಿತರಿಸುವ ಪ್ರಕ್ರಿಯೆಯಲ್ಲಿ ವಿಳಂಭವಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿ ವಿವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪರೀಕ್ಷೆ ಮುಗಿದು ಒಂದು ವರ್ಷವಾದರೂ ಸಹ ಅಂಕಪಟ್ಟಿ ವಿತರಿಸಿಲ್ಲ, ತುಮಕೂರು ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳ ಜೊತೆ ಚಲ್ಲಾಟವಾಡುತ್ತಿದೆ. ಹತ್ತು ದಿನಗಳಲ್ಲಿ ಅಂಕಪಟ್ಟಿಯನ್ನು ವಿ.ವಿ ವಿತರಿಸಬೇಕು. ಇಲ್ಲದಿದ್ದಲ್ಲಿ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಅಪ್ಪುಪಾಟಿಲ್, ತ್ರಿನೇತ್ರ, ನಂದೀಶ್, ನಂದಿನಿ, ರಾಧಕೃಷ್ಣ, ಕೃಷ್ಣಮೂರ್ತಿ,ರಾಮೇಗೌಡ, ನವೀನ್, ವೀರೇಶ್, ಸುದೀಪ್, ಅಂಜನ್, ಕಾವೇರಿ, ಪ್ರೀತಿ, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Facebook Comments