ಅಮೆರಿಕದ 17 ನಗರಗಳಲ್ಲಿ ಭಾರಿ ಹಿಂಸಾಚಾರ, ನೂರಾರು ಕಾರುಗಳು ಭಸ್ಮ, 1,500ಕ್ಕೂ ಹೆಚ್ಚು ಜನರ ಬಂಧನ..!

ಈ ಸುದ್ದಿಯನ್ನು ಶೇರ್ ಮಾಡಿ

ಲಾಸ್‍ಏಂಜೆಲ್ಸ್, ಮೇ 31- ಪೊಲೀಸರ ದೌರ್ಜನ್ಯದಿಂದ ಖೋಟಾ ನೋಟು ಚಲಾವಣೆ ಆರೋಪಿಯೊಬ್ಬ ಮೃತಪಟ್ಟ ಜನರ ಅಮೆರಿಕದಲ್ಲಿ ಭುಗಿಲೆದ್ದ ಕಪ್ಪುಜನರ ಪ್ರತಿಭಟನೆ ಮತ್ತಷ್ಟು ಹಿಂಸಾರೂಪ ಪಡೆದಿದೆ.

ದೇಶದ 17ಕ್ಕೂ ಹೆಚ್ಚು ನಗರಗಳಲ್ಲಿ ಹಿಂಸಾಚಾg ಉಲ್ಬಣಗೊಂಡಿದ್ದು, ಈವರೆಗೆ 1,500ಕ್ಕೂ ಹೆಚ್ಚು ಜನರನ್ನು ಪೊಲೀಸರ ಬಂಸಿದ್ದಾರೆ. ಉದ್ರಿಕ್ತ ಕಪ್ಪುಜನರು ನಡೆಸಿದ ದಾಂಧಲೆಯಿಂದಾಗಿ ಲಕ್ಷಾಂತರ ಡಾಲರ್ ಆಸ್ತಿಪಾಸಿಗೆ ನಷ್ಟವಾಗಿದ್ದು, ಕೆಲವು ಪ್ರದೇಶಗಳು ಹೊತ್ತಿ ಉರಿದಿವೆ. ಗಲಭೆಯಲ್ಲಿ ನೂರಾರು ಕಾರುಗಳು ಧಗಧಗಿಸಿದೆ.

ಹಿಂಸಾಚಾರಕ್ಕೆ ಇಳಿದ ಗುಂಪನ್ನುಚದುರಿಸಲು ಅನೇಕ ಕಡೆ ಪೊಲೀಸರು ಲಾಠಿ ಪ್ರಹಾರ, ಆಶ್ರುವಾಯು ಪ್ರಯೋಗಿಸಿದ್ದಾರೆ. ಘರ್ಷಣೆಯಲ್ಲಿ ಅನೇಕರಿಗೆ ಗಾಯಗಳಾಗಿವೆ. ಹಿಂಸಾಚಾರ ಮತ್ತಷ್ಟು ಪ್ರದೇಶಗಳಿಗೆ ಹಬ್ಬುವ ಆತಂಕ ವಿದ್ದು, ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ.

ಅಮೆರಿಕಇನ್ನೂ ಹಲವು ನಗರಗಳಲ್ಲಿ ಅಶಾಂತಿ ನೆಲೆಸಿದ್ದು, ಕಪ್ಪುಜನರ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಬೂದಿ ಮುಚ್ಚಿಕೆಂಡ ದಂಥ ವಾತಾವರಣವಿದೆ.

ಅಮೆರಿಕದ ಮಿನ್ನೆಸೋಟಾ ನಗರದಲ್ಲಿ ಖೋಟಾ ನೋಟು ಚಲಾವಣೆ ಆರೋಪದ ಮೇಲೆ ಕಪ್ಪುಜನಾಂಗದ ಜಾರ್ಜ್ ಫೈಯ್ಡ್ ಎಂಬಾನನ್ನು ಬಂಸಿದ ಪೊಲೀಸ್‍ಅಕಾರಿ ಆತನ ಕುತ್ತಿಗೆಯನ್ನು ಮಂಡಿಗಳ ಮಧ್ಯೆಎಂಟು ನಿಮಿಷಗಳ ಕಾಲ ಅದುಮಿಟ್ಟಿಟ್ಟರು.

ಉಸಿರುಗಟ್ಟಿ ಜಾರ್ಜ್ ಮೃತಪಟ್ಟ ನಂತರ ಮಿನ್ನೆಸೋಟಾದಲ್ಲಿ ಆರಂಭವಾದ ಕಪ್ಪುಜನರ ಪ್ರತಿಭಟನೆ ಅಮೆರಿಕ 17 ರಾಜ್ಯಗಳಲ್ಲಿ ವ್ಯಾಪಿಸಿ ಭಾರೀ ಹಿಂಸಾಚಾರ ಮತ್ತು ಸಂಘರ್ಷಕ್ಕೆಕಾರಣವಾಗಿದೆ.

ಕಪ್ಪುಜನರ ವಿವಿಧ ಸಂಘಟನೆಗಳು ಅನೇಕ ನಗರಗಳಲ್ಲಿ ಇಂದು ಪ್ರತಿಭಟನಾರ್ಯಾಲಿ ನಡೆಸಲಿದ್ದು, ಹಿಂಸಾಚಾರ ಮತ್ತಷ್ಟು ಭುಗಿಲೆಳುವ ಆತಂಕವಿದ್ದು, ಅಮೆರಿಕದ 50 ರಾಜ್ಯಗಳಲ್ಲಿ ತೀವ್ರಕಟ್ಟೆಚ್ಚರ ವಹಿಸಲಾಗಿದೆ.

Facebook Comments

Sri Raghav

Admin