ಚಾಮುಂಡೇಶ್ವರಿ ತನ್ನ ವಾಹನ ‘ಸಿಂಹ’ವನ್ನು ಕೈಬಿಡಲ್ಲ : ಪ್ರತಾಪ್‍ಸಿಂಹ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಮೇ 23-ಮೊದಲ ಬಾರಿಗೆ ಸ್ಪರ್ಧಿಸಿದಾಗಲೂ ಕೂಡ ತಾಯಿ ಚಾಮುಂಡೇಶ್ವರಿ ತನ್ನ ವಾಹನವಾದ ಸಿಂಹವನ್ನು ಕೈಬಿಟ್ಟಿರಲಿಲ್ಲ. ಆಗಲೂ ಆಶೀರ್ವಾದ ಮಾಡಿದ್ದಳು.

ಈಗಲೂ ಕೈ ಹಿಡಿಯಲಿದ್ದಾಳೆ ಎಂದು ಬಿಜೆಪಿ ಅಭ್ಯರ್ಥಿ ಪ್ರತಾಪ್‍ಸಿಂಹ ಆತ್ಮವಿಶ್ವಾಸದಿಂದ ನುಡಿದರು. ಈಬಾರಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್‍ಸಿಂಹ ಇಂದು ನಡೆಯುತ್ತಿರುವ ಮತ ಎಣಿಕೆ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಚಾಮುಂಡಿಬೆಟ್ಟಕ್ಕೆ ತೆರಳಿ ದೇವಿಗೆ ಪೂಜೆ ಸಲ್ಲಿಸಿ ನಂತರ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದರು.

ಈಗ ತಾನೇ ದೇವಿಗೆ ಪೂಜೆ ಸಲ್ಲಿಸಿ ಬಂದಿದ್ದೇನೆ. ಕಳೆದ 5 ವರ್ಷಗಳಲ್ಲಿ ಮೈಸೂರು-ಕೊಡಗು ಸಂಸದರ ನಿಧಿಯಲ್ಲಿ ಅತಿ ಹೆಚ್ಚಿನ ಅನುದಾನವನ್ನು ತಂದಿದ್ದೇನೆ.

ಸಂಸದರ ನಿಧಿ ಬಳಕೆಯಲ್ಲಿ ರಾಜ್ಯದಲ್ಲೇ ನಂ.1 ಹೆಗ್ಗಳಿಕೆ ನಮ್ಮದು. ಹಾಗಾಗಿ ದೇವಿಯ ಅನುಗ್ರಹದೊಂದಿಗೆ ಕ್ಷೇತ್ರದ ಜನರ ಕೃಪೆಯೂ ಇದೆ ಎಂದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin