ತಮ್ಮ ಸ್ವಂತ ಹಣದಲ್ಲಿ ರೈಲು ಟಿಕೆಟ್ ಕೊಡಿಸಿ ಮಾನವೀಯತೆ ಮೆರೆದ ಪಿಎಸ್‍ಐ ಅನಿತಾ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 3- ಊರಿಗೆ ಹಿಂದಿರುಗಲು ಹಣವಿಲ್ಲದೆ ಪರಿತಪಿಸುತ್ತಿದ್ದ ಒಡಿಶಾ ಮೂಲದ ಸೆಕ್ಯೂರಿಟಿ ಗಾರ್ಡ್ ಮತ್ತು ಅವರ ಪುತ್ರಿಗೆ ತಾವೇ ಹಣ ನೀಡಿ ಟಿಕೆಟ್ ಕೊಡಿಸುವ ಮೂಲಕ ಮಾರತ್ತಹಳ್ಳಿ ಠಾಣೆಯ ಪಿಎಸ್‍ಐ ಅನಿತಾ ಅವರು ಮಾನವೀಯತೆ ಮೆರೆದಿದ್ದಾರೆ.

ಸೆಕ್ಯೂರಿಟಿ ಗಾರ್ಡ್ ಪ್ರತಾಪ್ ಮತ್ತು ಅವರ 12 ವರ್ಷದ ಮಗಳು ಪೂಜಾ ಅವರಿಗೆ ಅನಿತಾ ಅವರು 1600ರೂ. ನೀಡಿ ಇಬ್ಬರಿಗೂ ರೈಲ್ವೆ ಟಿಕೆಟ್ ಕೊಡಿಸಿ ತಮ್ಮ ಕರ್ತವ್ಯದಲ್ಲಿ ಸಾರ್ಥಕತೆಯನ್ನು ಮೆರೆದಿದ್ದಾರೆ.

ತಂದೆ-ಮಗಳಿಬ್ಬರೂ ಹಣವಿಲ್ಲದೆ ಟಿಕೆಟ್ ಪಡೆಯಲು ಸಾಧ್ಯವಾಗದೆ ಸಂಕಷ್ಟದಲ್ಲಿದ್ದರು. ಇದನ್ನು ಅರಿತ ತಕ್ಷಣ ಪಿಎಸ್‍ಐ ಅನಿತಾ ಅವರು ಟಿಕೆಟ್ ವ್ಯವಸ್ಥೆ ಮಾಡಿ ಇಬ್ಬರಿಗೂ ಶುಭ ಕೋರಿ ಬೀಳ್ಕೊಟ್ಟಿದ್ದಾರೆ.

Facebook Comments

Sri Raghav

Admin