ಜೂ.5ರಿಂದ ಪಿಎಸ್‍ಎಲ್ ಚುಟುಕು ಪಂದ್ಯಾವಳಿ

ಈ ಸುದ್ದಿಯನ್ನು ಶೇರ್ ಮಾಡಿ

ಕರಾಚಿ,ಮೇ.22-ಭಾರತದಲ್ಲಿ ಐಪಿಎಲ್ ಪಂದ್ಯವನ್ನು ಮಧ್ಯದಲ್ಲೇ ಮೊಟಕುಗೊಳಿಸಿರುವ ಬೆನ್ನಲ್ಲೆ ಪಾಕಿಸ್ತಾನ ಜೂ.5 ರಿಂದ ದೂರದ ಅಬುಧಾಬಿಯಲ್ಲಿ ಪಿಎಸ್‍ಎಲ್ ಚುಟುಕು ಪಂದ್ಯ ನಡೆಸಲು ತೀರ್ಮಾನಿಸಿದೆ.

ಪಿಎಸ್‍ಎಲ್-6 ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಎಲ್ಲಾ ಆಟಗಾರರು 10 ದಿನಗಳ ಕಡ್ಡಾಯ ಕ್ವಾರಂಟೈನ್‍ನಲ್ಲಿರಬೇಕಾಗುತ್ತದೆ. ಪಂದ್ಯಾವಳಿ ನಡೆಸುವ ನಿಯಮ ಕುರಿತಂತೆ ಪಾಕ್ ಕ್ರಿಕೆಟ್ ಮಂಡಳಿ ಯುಎಇ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.

ಎಲ್ಲ ಆಟಗಾರರು 10 ದಿನಗಳ ಕ್ವಾರಂಟೈನ್‍ನಲ್ಲಿರಬೇಕು. ಹಾಗೂ ಪಂದ್ಯ ನಡೆಯುವ ಸಂದರ್ಭದಲ್ಲೂ ಆಟಗಾರರಿಗೆ ಕೊರೊನಾ ತಪಾಸಣೆ ನಡೆಸಲಾಗುವುದು ಎಂದು ಕರಾಚಿ ಕಿಂಗ್ಸ್ ತಂಡದ ಮಾಲೀಕ ಸಲ್ಮಾನ್ ಇಕ್ಬಾಲ್ ತಿಳಿಸಿದ್ದಾರೆ.

ಜೂ.5 ರಿಂದ ಟೂರ್ನಿ ಆರಂಭವಾಗುವುದರಿಂದ ಮೇ.25ರಂದೇ ಎಲ್ಲಾ ಆಟಗಾರರನ್ನು ಅಬುಧಾಬಿಗೆ ಕಳುಹಿಸಿದರೆ 10 ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿ ಪಂದ್ಯ ಆರಂಭಿಸಲು ಅನುಕೂಲಕರವಾಗಲಿದೆ ಹೀಗಾಗಿ ಎಲ್ಲಾ ಆಟಗಾರರನ್ನು 25 ರೊಳಗೆ ಅಬುಧಾಬಿ ಕಳುಹಿಸಲಾಗುತ್ತಿದೆ.

ಅಬುಧಾಬಿಗೆ ವಿಮಾನ ಹತ್ತುವ ಮುನ್ನ ಎಲ್ಲಾ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಆಟಗಾರರು ಹಾಗೂ ಸಿಬ್ಬಂದಿಗಳು ಪಾಕಿಸ್ತಾನದಲ್ಲಿ ಮೂರು ದಿನಗಳ ಕಾಲ ಕ್ವಾರಂಟೈನ್‍ಗೆ ಒಳಗಾಗಲಿದ್ದಾರೆ.

Facebook Comments

Sri Raghav

Admin