ಮೈಸೂರಲ್ಲಿ ಯುವತಿಯರ ಒಳ ಉಡುಪು ಕದಿಯುವ ವಿಕೃತ ಕಾಮಿ ಪ್ರತ್ಯಕ್ಷ…!

ಈ ಸುದ್ದಿಯನ್ನು ಶೇರ್ ಮಾಡಿ

Mysuru-phyco

ಮೈಸೂರು,ಜು.22-ವಿದ್ಯಾರ್ಥಿನಿಯರ ಹಾಸ್ಟೆಲ್‍ಗಳಿಗೆ ನುಗ್ಗಿದ ಸೈಕೋ ಕಳ್ಳನೊಬ್ಬ ಯುವತಿಯರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ನಡೆದಿದೆ. ನಗರದ ಕೆ.ಆರ್. ಆಸ್ಪತ್ರೆಯ ಮೂರನೇ ಹಂತಸ್ತಿನ ನರ್ಸಿಂಗ್ ವಿದ್ಯಾರ್ಥಿನಿಯರ ಹಾಸ್ಟೆಲ್‍ಗೆ ನುಗ್ಗಿದ ಸೈಕೊ ಕಳ್ಳನೊಬ್ಬ ಯುವತಿಯರು ಒಣ ಹಾಕಿರುವ ಬಟ್ಟೆಗಳನ್ನು ಎತ್ತಿಕೊಂಡು ಹೋಗುತ್ತಿದ್ದನು.

ಇದನ್ನು ಕಂಡ ವಿದ್ಯಾರ್ಥಿನಿಯೊಬ್ಬಳು ಕಿರುಚಿಕೊಂಡಿದ್ದಾಳೆ. ತಕ್ಷಣವೇ ಕೊಠಡಿಯಲ್ಲಿದ್ದ ಎಲ್ಲ ವಿದ್ಯಾರ್ಥಿನಿಯರು ಹೊರಬಂದಿದ್ದಾರೆ. ಈ ವೇಳೆ ಸೈಕೋ ಕಳ್ಳನು ವಿದ್ಯಾರ್ಥಿನಿಯ ಕತ್ತು ಹಿಸುಕಿ ಹಲ್ಲೆ ನಡೆಸಿದ್ದಾನೆ. ಅಲ್ಲದೆ ಕೊಠಡಿಯಲ್ಲಿದ್ದ ವಿದ್ಯಾರ್ಥಿನಿಯ ಮೊಬೈಲ್‍ನ್ನು ಕದ್ದು ಪರಾರಿಯಾಗಿದ್ದಾನೆ.  ಯುವತಿಯರ ಬಟ್ಟೆ ಕದಿಯುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಖಾಕಿ ಬಟ್ಟೆ ಧರಿಸಿದ್ದ ಈತ ಸೆಕ್ಯುರಿಟಿ ಗಾರ್ಡ್‍ನ ಟೋಪಿಯನ್ನು ಹಾಕಿಕೊಂಡಿದ್ದು , ಕಾಂಪೌಂಡ್ ಹಾರಿ ಒಳನುಗ್ಗಿರುವುದು ತಿಳಿದುಬಂದಿದೆ. ಈ ಬಗ್ಗೆ ಆಡಳಿತ ಮಂಡಳಿ ದೇವರಾಜ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈತನಿಗಾಗಿ ಹುಡುಗಾಟ ನಡೆಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin