ಸಾರ್ವಜನಿಕ ಗಣೇಶೋತ್ಸವಕ್ಕೆ ಸರ್ಕಾರ ಗ್ರೀನ್ ಸಿಗ್ನಲ್, ಆದರೆ ಕಂಡಿಷನ್ಸ್ ಅಪ್ಲೈ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.18- ಸಾರ್ವಜನಿಕರು ಹಾಗೂ ಹಿಂದೂಪರ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಗಣೇಶೋತ್ಸವಕ್ಕೆ ನಿರ್ಬಂಸಿದ್ದ ನಿಯಮಗಳನ್ನು ಪರಿಷ್ಕರಣೆಗೊಳಿಸಿ ಆದೇಶ ಹೊರಡಿಸಿದೆ.

ಇದರಿಂದಾಗಿ ವಿಘ್ನನಿವಾರಕ ವಿಘ್ನೇಶನ ಆಚರಣೆಗೆ ಎದುರಾಗಿದ್ದ ಕಂಟಕಗಳು ನಿವಾರಣೆಯಾಗಿದ್ದು, ಕೆಲವು ಷರತ್ತಿನೊಂದಿಗೆ ಆಚರಣೆ ಮಾಡಬಹುದಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಚೇರಿಯಿಂದ ಟ್ವಿಟ್ ಮಾಡಲಾಗಿದ್ದು, ಈ ಹಿಂದೆ ವಿಸಲಾಗಿದ್ದ ನಿಯಮಗಳನ್ನು ಸಡಿಲಿಕೆ ಮಾಡಲಾಗಿದೆ.

ಸಾರ್ವಜನಿಕ ವಲಯ, ಬಯಲು ಪ್ರದೇಶಗಳಲ್ಲಿ ಗಣೇಶ ನನ್ನು ಪ್ರತಿಷ್ಠಾಪನೆ ಮಾಡ ಬಹುದಾಗಿದೆ. ಸಾರ್ವಜನಿಕ ಸ್ಥಳದಲ್ಲಿ 4 ಅಡಿ ಹಾಗೂ ಮನೆಗಳಲ್ಲಿ 2 ಅಡಿ ಎತ್ತರದ ಗಣೇಶ ಮೂರ್ತಿಯನ್ನು ಸ್ಥಾಪನೆ ಮಾಡಬಹುದಾಗಿದೆ.

ನಗರದ ಪ್ರದೇಶಗಳಲ್ಲಿ ವಾರ್ಡ್‍ಗೆ ಒಂದು ಹಾಗೂ ಗ್ರಾಮಕ್ಕೆ ಒಂದೇ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಬೇಕು, ಎಲ್ಲೇ ಗಣಪತಿ ಮೂರ್ತಿಯನ್ನು ಸ್ಥಾಪನೆ ಮಾಡಿದರೂ ಸ್ಥಳೀಯ ಆಡಳಿತದ ಪೂರ್ವಾನುಮತಿಯನ್ನು ಕಡ್ಡಾಯವಾಗಿ ಪಡೆಯಲೇಬೇಕೆಂದು ಷರತ್ತು ವಿಸಲಾಗಿದೆ.

ಗಣೇಶ ಮೂರ್ತಿ ಪ್ರತಿಷ್ಠಾಪನೆ ಇಲ್ಲವೇ, ವಿಸರ್ಜನೆ ಮಾಡುವ ಸಂದರ್ಭದಲ್ಲಿ ಸಾಂಸ್ಕøತಿಕ ಮನರಂಜನೆ ಸೇರಿದಂತೆ ಯಾವುದೇ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ. ಅಲ್ಲದೆ ಪೂಜೆ ಸಂದರ್ಭದಲ್ಲೂ 20ಕ್ಕೂ ಹೆಚ್ಚು ಜನರು ಸೇರದೆ ಇಲ್ಲಿಯೂ ಕೂಡ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಲೇಬೇಕು.

ವಿಸರ್ಜನೆ ಸಂದರ್ಭದಲ್ಲಿ (ವಿಶೇಷವಾಗಿ ನಗರ ಪ್ರದೇಶಗಳಲ್ಲಿ) ಮೊಬೈಲ್ ಟ್ಯಾಂಕರ್‍ಗಳನ್ನು ಬಳಸಬೇಕು. ಗ್ರಾಮೀಣ ಭಾಗದಲ್ಲಿ ಕೆರೆಗಳಲ್ಲಿ ಸುರಕ್ಷಿತವಾಗಿ ವಿಸರ್ಜನೆ ಮಾಡಬೇಕು. ಯಾವುದೇ ಕಾರಣಕ್ಕೂ ಸ್ಥಳೀಯ ಪೂರ್ವಾನುಮತಿ ಇಲ್ಲದೆ ಗಣಪತಿಯನ್ನು ಪ್ರತಿಷ್ಠಾಪಿಸಲು ಅವಕಾಶ ಕೊಡಬಾರದು ಎಂದು ಸೂಚಿಸಲಾಗಿದೆ.

Facebook Comments

Sri Raghav

Admin