ಕೊರೋನಾ ಮತ್ತು ಶಿಸ್ತು ಕ್ರಮದ ಅಡಕತ್ತರಿಯಲ್ಲಿ ಸಿಲುಕಿದ ಪಿಯು ಉಪನ್ಯಾಸಕರು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.5- ಗೊತ್ತಿದ್ದು ಮಾಡುತ್ತಾರೋ, ಗೋತ್ತಿಲ್ಲದೆ ಮಾಡತ್ತಾರೋ, ಇದೇನು ಅಮಾಯಕತೆನೋ, ಅಕ ಪ್ರಸಂಗತನನೋ ಯಾವುದು ಅಂತಾ ಗೊತ್ತಾಗುತ್ತಿಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರು ಹಣೆ ಹಣೆ ಚಚ್ಚಿಕೊಳ್ಳುತ್ತಿದ್ದಾರೆ.

ಕಳೆದ ಮಾರ್ಚ್ ತಿಂಗಳಿನಲ್ಲಿ ನಡೆದ ಪಿಯುಸಿ ಪರೀಕ್ಷೆಯ ಮೌಲ್ಯಮಾಪನ ಆರಂಭವಾಗಿದೆ. ಕಲಾ ಮತ್ತು ವಾಣಿಜ್ಯ ವಿಭಾಗದ ವಿಷಯಗಳಲ್ಲಿ ಅರ್ಥಶಾಸ್ತ್ರ ಶೇ.60ರಷ್ಟು, ಇಂಗ್ಲಿಷ್ ಹೊರತು ಪಡಿಸಿ ಉಳಿದ ವಿಷಯಗಳು ಶೇ.20ರಷ್ಟು ಮುಗಿದಿವೆ.

ಈ ಮೊದಲು ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮೌಲ್ಯಮಾಪನ ಮಾಡದೆ ಉಪನ್ಯಾಸಕರು ಪ್ರತಿಭಟನೆ ನಡೆಸುತ್ತಿದ್ದರು. ಈ ಬಾರಿ ಯಾವ ಪ್ರತಿಭಟನೆಯೂ ಇಲ್ಲ, ಜೀವ ಉಳಿಸಿ ಬಿಡಿ ಸಾಕು ನಿಮ್ಮ ದಮ್ಮಯ್ಯ ಎಂದು ಅಂಗಲಾಚುತ್ತಿದ್ದಾರೆ.

ಮËಲ್ಯಮಾಪನಕ್ಕೆ ಹೋದರೆ ಕೊರೊನಾ ಭಯ, ಹೋಗದಿದ್ದರೆ ಶಿಸ್ತು ಕ್ರಮ ಎದುರಿಸಬೇಕಾದ ಭಯಗಳ ನಡುವೆ ಪಿಯು ಉಪನ್ಯಾಸಕರು ಕತ್ತರಿ ಮಧ್ಯೆ ಸಿಕ್ಕಿದ ಅಡಿಕೆಯಾಗಿದ್ದಾರೆ.

ರಾಜ್ಯ ಸರ್ಕರ ಮೌಲ್ಯಮಾಪನ ಕಾರ್ಯಕ್ಕೆ ಉಪನ್ಯಾಸಕನ್ನು ನಿಯೋಜಿಸಿ ಹೊರಡಿಸಿರುವ ಆದೇಶವೇ ಹಾಸ್ಯಾಸ್ಪದವಾಗಿದೆ. ಯಾರನ್ನು ಬಲವಂತ ಮಾಡುವುದಿಲ್ಲ ಇಷ್ಟ ಇದ್ದವರು ಬಂದು ಮೌಲ್ಯಮಾಪನ ಮಾಡಿ, ಇಲ್ಲದಿದ್ದವರು ಬೇಡ ಎಂದು ಶಿಕ್ಷಣ ಇಲಾಖೆ ಅಕಾರಿಗಳು ಮೌಕಿಕವಾಗಿ ಹೇಳುತ್ತಿದ್ದಾರೆ.

ಆದರೆ ಜಿಲ್ಲೆಗಳಲ್ಲಿರುವ ಉಪನಿರ್ದೇಶಕರು ಮೌಲ್ಯಮಾಪನಕ್ಕೆ ಹಾಜರಾಗಿ ಎಂದು ಧಮ್ಕಿ ಮೂಲಕ ಒತ್ತಡ ಹೇರುತ್ತಿದ್ದಾರೆ. ಕೆಲಸ ಹೋದರು ಹೋಗಲಿ ನೀವು ಬೆಂಗಳೂರಿಗೆ ಮಾತ್ರ ಮೌಲ್ಯಮಾಪನಕ್ಕೆ ಹೋಗಬೇಡಿ ಎಂದು ಉಪನ್ಯಾಸಕರನ್ನು ಮನೆಯಲ್ಲಿ ತಡೆಯುತ್ತಿದ್ದಾರೆ.

ಕಲಾ ಮತ್ತು ವಾಣಿಜ್ಯ ವಿಭಾಗದ ವಿಷಯಗಳ ಉತ್ತರ ಪತ್ರಿಕೆಗಳ ಮËಲ್ಯಮಾಪನಕ್ಕೆ ಎಂಟು ಜಿಲ್ಲೆಗಳಲ್ಲಿ 34 ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅದು ಹಾಗೂ ಹೀಗೂ ನಡೆಯುತ್ತಿದೆ. ವಿಜ್ಞಾನ ವಿಷಯದ ಉತ್ತರ ಪತ್ರಿಕೆಗಳ ಮËಲ್ಯಮಾಪನವನ್ನು ಬೆಂಗಳೂರಿಗೆ ಬಂದು ಮಾಡಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಸೂಚಿಸಿದೆ.

ಈ ವರ್ಷ ಸುಮಾರು ಎರಡೂವರೆ ಲಕ್ಷ ವಿದ್ಯಾರ್ಥಿಗಳು ವಿಜ್ಞಾನ ವಿಷಯದ ಪರೀಕ್ಷೆ ಬರೆದಿದ್ದಾರೆ, ಮೌಲ್ಯಮಾಪನಕ್ಕೆ ಕನಿಷ್ಠ ಏಳುಸಾವಿರ ಉಪನ್ಯಾಸಕರ ಅಗತ್ಯ ಇದೆ.

ಹತ್ತು ಸಾವಿರ ಮಂದಿಯನ್ನು ನಿಯೋಜನೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಎಂಟು ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ರಾಜ್ಯದ 29 ಜಿ¯್ಲÉಗಳಿಂದಲೂ ಉಪನ್ಯಾಸಕರು ಬಂದು ಮೌಲ್ಯಮಾಪನ ಮಾಡಬೇಕು ಎಂದು ಸೂಚಿಸಲಾಗಿದೆ.

ಬೆಂಗಳೂರಿನಲ್ಲಿ ಕೋವಿಡ್ ಸೋಂಕಿನ ಹಾವಳಿ ಹೆಚ್ಚಾಗಿರುವುದರಿಂದ ಹೊರ ಜಿಲ್ಲೆಳಿಂದ ಬರಲು ಉಪನ್ಯಾಸಕರು ಹೆದರುತ್ತಿದ್ದಾರೆ. ಉಪನಿರ್ದೇಶಕರ ಧಮ್ಕಿಗೆ ಹೆದರಿ ಬಳ್ಳಾರಿ ಜಿಲ್ಲೆಯಿಂದ ಕೆಲ ಉಪನ್ಯಾಸಕರು ಬೆಂಗಳೂರಿನ ಮಾಗಡಿ ರಸ್ತೆಯ ಮËಲ್ಯಮಾಪನ ಕೇಂದ್ರಕ್ಕೆ ಆಗಮಿಸಿದ್ದಾರೆ.

ರಾತ್ರಿ ತಂಗಲು ವ್ಯವಸ್ಥೆ ಇಲ್ಲದೆ ಯಾವುದೋ ಬಿಲ್ಡಿಂಗ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಜೊತೆ ಪೆಪರ್ ಹಾಸಿಕೊಂಡು ಸೆಲ್ಲರ್‍ನಲ್ಲಿ ಮಲಗಿ ಕಾಲ ಕಳೆದಿದ್ದಾರೆ. ಬೆಳಗ್ಗೆದ್ದು ಗೋಳು ಹೇಳಿಕೊಳ್ಳಲು ಹೋದರೆ ಯಾವ ಅಕಾರಿಯೂ ಕ್ಯಾರೆ ಎಂದಿಲ್ಲ.

ಎಲ್ಲಾ ಹೋಟೆಲ್ ಗಳು ಬಂದ್ ಆಗಿವೆ, ಹುಡುಕಾಡಿ ಊಟ ಪಾರ್ಸೆಲ್ ತೆಗೆದುಕೊಂಡರೂ ಕುಳಿತು ತಿನ್ನಲು ಜಾಗ ಇಲ್ಲ. ವಸತಿ ಗೃಹಗಳನ್ನು ಕ್ವಾರಂಟೈನ್ ಗೆ ಬಳಸಿಕೊಳ್ಳಲಾಗುತ್ತಿದೆ. ಯಾವ ಲಾಡ್ಜ ಗಳು ರೂಂ ಕೊಡುತ್ತಿಲ್ಲ. ಒತ್ತಡಕ್ಕೆ ಮಣಿದು ಬೆಂಗಳೂರಿಗೆ ಬಂದ ದೂರದೂರುಗಳ ಉಪನ್ಯಾಸಕರ ಪಾಡು ನರಕಸದೃಶ್ಯವಾಗಿದೆ.

ಮೌಲ್ಯಮಾಪನಕ್ಕೆ ಬರುವ ಉಪನ್ಯಾಸಕರು ತಂಗಲು ಏಳೆಂಟು ವಸತಿ ಗೃಹಗಳನ್ನು ಕಾಯ್ದಿರಿಸಲಾಗಿದೆ ಎಂದು ಹಿರಿಯ ಅಕಾರಿಗಳು ಹೇಳುತ್ತಿದ್ದಾರೆ, ಇದು ಕಾಗದದ ಮೇಲಷ್ಟೆ ಇದೆ.

ಕಾಯ್ದಿರಿಸಲಾಗಿದೆ ಎಂದು ಹೇಳಲಾದ ವಸತಿ ಗೃಹಗಳ ಬಳಿ ಹೋಗಿ ಜಾಗ ಕೇಳಿದರೆ ಸರ್ಕಾರದಿಂದ ನಮಗೆ ಯಾವ ನಿರ್ದೇಶನವೂ ಇಲ್ಲ, ರೂಂ ಕೊಡುವುದಿಲ್ಲ ಎಂಬ ಉತ್ತರ ಸಿಗುತ್ತಿದೆ.

ಕಲಾ, ವಾಣಿಜ್ಯ ವಿಷಯಗಳಂತೆ ವಿಜ್ಞಾನ ವಿಷಯಗಳ ಉತ್ತರ ಪತ್ರಿಕೆಗಳನ್ನು ಜಿಲ್ಲಾ ಕೇಂದ್ರಗಳಿಗೆ ಕಳುಹಿಸಿಕೊಡಿ ಹತ್ತಿರದ ಜಿಲ್ಲಾ ಕೇಂದ್ರಗಳಿಗೆ ಬಂದು ಮËಲ್ಯಮಾಪನ ಮಾಡಿಕೊಡುತ್ತೇವೆ ಎಂದು ಉಪನ್ಯಾಸಕರು ಅಕಾರಿಗಳಿಗೆ, ಸಚಿವರಿಗೆ ಹಲವು ಬಾರಿ ಮನವಿ ಮಾಡಿದ್ದಾರೆ.

ವೈದ್ಯಕೀಯ, ಇಂಜಿನಿಯರಿಂಗ್ ಶಿಕ್ಷಣದಂತಹ ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ಕೊಡಿಸುವ ವಿಜ್ಞಾನ ವಿಷಯದ ಮೌಲ್ಯಮಾಪನ ಬೆಂಗಳೂರಿನಲ್ಲೇ ನಡೆಯಬೇಕು, ಜಿಲ್ಲಾ ಕೇಂದ್ರಗಳಿಗೆ ಉತ್ತರ ಪತ್ರಿಕೆ ರವಾನಿಸಿದರೆ ಅಕ್ರಮಗಳು ನಡೆಯಬಹುದು ಎಂಬ ಅನೌಪಚಾರಿಕ ಕಾರಣವನ್ನು ಮುಂದಿಟ್ಟುಕೊಂಡು ತಾಂತ್ರಿಕ ಸಮಸ್ಯೆ ಇದೆ.

ಜಿಲ್ಲಾ ಕೇಂದ್ರಗಳಿಗೆ ಉತ್ತರ ಪತ್ರಿಕೆ ಕಳುಹಿಸಲು ಸಾಧ್ಯವಿಲ್ಲ. ಬೆಂಗಳೂರಿಗೆ ಬನ್ನಿ ಎಂದು ಹಿರಿಯ ಅಕಾರಿಗಳು ಹೇಳುತ್ತಿದ್ದಾರೆ.ಜಿಲ್ಲಾ ಕೇಂದ್ರಗಳಿಗೆ ಉತ್ತರ ಪತ್ರಿಕೆಗಳನ್ನು ಕಳುಹಿಸಿದ್ದರು ಕಲಾ ಮತ್ತು ವಾಣಿಜ್ಯ ವಿಭಾಗದ ಶೇ.60ರಷ್ಟು ಉಪನ್ಯಾಸಕರು ಮಾತ್ರ ಹಾಜರಾಗುತ್ತಿದ್ದಾರೆ.

ದೂರದೂರಿನಿಂದ ಬೆಂಗಳೂರಿಗೆ ಹೇಗೆ ಬಂದಾರು ಎಂಬ ಸಾಮಾನ್ಯ ಪ್ರಜ್ಞೆಯನ್ನು ಹಿರಿಯ ಅಕಾರಿಗಳು ಯೋಚಿಸಿಲ್ಲ. ಪ್ರತಿ ಉಪನ್ಯಾಸಕರು ದಿನಕ್ಕೆ 24 ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿ ಕಂಪ್ಯೂಟರ್‍ನಲ್ಲಿ ಅಂಕಗಳನ್ನು ನಮೂದಿಸಬೇಕು.

ಈ ಲೆಕ್ಕಾಚಾರದಲ್ಲಿ ನೋಡಿದರೆ ಹಾಜರಾಗುತ್ತಿರುವ ಉಪನ್ಯಾಸಕರಿಂದ ಕನಿಷ್ಠ ಎರಡು ತಿಂಗಳಾದರೂ ಮೌಲ್ಯಮಾಪನ ಪೂರ್ಣಗೊಳಿಸಲು ಕಷ್ಟ ಸಾಧ್ಯವಿದೆ. ಜುಲೈ 5-6ರಂದು ಸಿಇಟಿ ಪರೀಕ್ಷೆ ಇದೆ. ಅನಂತರ ಪಲಿತಾಂಶ ಪ್ರಕಟಿಸಬೇಕಾದರೆ ಕನಿಷ್ಠ ಶೇ.80ರಷ್ಟಾದರೂ ಮೌಲ್ಯಮಾಪಕರು ಹಾಜರಾಗಬೇಕು. ಸರ್ಕಾರದ ಮೊಂಡುತನದಿಂದ ಹಾಜರಾತಿ ಸಂಖ್ಯೆ ಕಡಿಮೆ ಇದೆ.

# ಉಡಾಫೆ ಆದೇಶ:
ಮೌಲ್ಯಮಾಪನ ಕರ್ತವ್ಯಕ್ಕೆ ಹಾಜರಾಗುವವರು ಆರೋಗ್ಯದ ಹಿತದೃಷ್ಟಿಯಿಂದ ಮುನ್ನೆಚ್ಚರಿಕೆ ವಹಿಸಬೇಕು ಎಂದು 16 ಸೂಚನೆಗಳನ್ನು ಸರ್ಕಾರ ನೀಡಿದೆ. ಅದರಲ್ಲಿ ಎಲ್ಲರೂ ತಮ್ಮ ಖರ್ಚಿನಲ್ಲಿ ಸ್ಯಾನಿಟೈಸರ್, ಮಾಸ್ಕ್, ಪೆನ್ ಗಳನ್ನು ತರಬೇಕು.

ಹೊರಗಿನ ಊಟವನ್ನು ಅವಲಂಭಿಸದೆ ತಮ್ಮ ಮನೆಗಳಲ್ಲಿ ಸ್ವಂತವಾಗಿ ತಯಾರಿಸಿದ ಊಟ ತರಬೇಕು. ಆರೋಗ್ಯ ಸ್ಥಿತಿಯ ಬಗ್ಗೆ ಸ್ವಯಂ ಮೌಲ್ಯಮಾಪನ ಪತ್ರ ನೀಡಬೇಕು. ಕ್ವಾರಂಟೈನ್ ಕುಟುಂಬದ ಸದಸ್ಯರಿಗೆ, ಕಂಟೇನ್ಮೆಟ್ ಪ್ರದೇಶದಲ್ಲಿರುವವರಿಗೆ ಮೌಲ್ಯಮಾಪನ ಕಾರ್ತವ್ಯದಿಂದ ವಿನಾಯಿತಿ ನೀಡಿರುವುದಾಗಿ ತಿಳಿಸಲಾಗಿದೆ.

ಥರ್ಮಲ್ ಸ್ಕ್ಯಾನಿಂಗ್ ಗೆ ಒಳಪಡಬೇಕು, ಸಾಮಾಜಿಕ ಅಂತರ ಕಾಪಾಡಬೇಕು ಎಂಬ ಬಿಟ್ಟಿ ಸಲಹೆಗಳನ್ನು ನೀಡಲಾಗಿದೆ. ದೂರದ ಊರಿನಿಂದ ಬರುವವರು ಪ್ರತಿದಿನ ಮನೆಯಿಂದ ಊಟ ತರಲು ಸಾಧ್ಯವೇ ಎಂಬ ಕನಿಷ್ಠ ಪ್ರಜ್ಞೆಯನ್ನು ಅಕಾರಿಗಳು ಬಳಸಿಲ್ಲ. ಸ್ಯಾನಿಟೈಸರ್ ನ್ನು ಒದಗಿಸಲಾಗದಷ್ಟು ದರಿದ್ರ ಸ್ಥಿತಿ ಸರ್ಕಾರಕ್ಕೆ ಬಂದಿದೆಯೇ ಎಂಬ ಪ್ರಶ್ನೆಯನ್ನು ಉಪನ್ಯಾಸಕರು ಕೇಳುತ್ತಿದ್ದಾರೆ.

# ಇಲಾಖೆಯ ಯಡವಟ್ಟು:
ಶಾಲೆ ಆರಂಭಿಸುವುದು, ಪರೀಕ್ಷೆ ನಡೆಸುವುದು ಸೇರಿದಂತೆ ನಾನಾ ಯಡವಟ್ಟು ನಿರ್ಧಾರಗಳನ್ನು ಸರ್ಕಾರ ಪ್ರಕಟಿಸಿ ಪೇಚಿಗೆ ಸಿಲುಕಿದೆ. ಈಗ ಮತ್ತೊಂದು ಅನಾಹುತಕಾರಿ ನಿರ್ಧಾರಕ್ಕೂ ಕೈ ಹಾಕಿದೆ. ಬಾಕಿ ಇರುವ ಇಂಗ್ಲಿಷ್ ವಿಷಯದ ಪರೀಕ್ಷೆಯನ್ನು ಜೂನ್ 18ರಂದು ನಡೆಸುವುದಾಗಿ ಪ್ರಕಟಿಸಿದೆ.

ಈ ಮೊದಲು ಮಾರ್ಚ್ 23ಕ್ಕೆ ಇಂಗ್ಲಿಷ್ ಪರೀಕ್ಷೆ ನಡೆಯಬೇಕಿತ್ತು. ಆಗ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕೇವಲ ಆರು. ಲಾಕ್ ಡೌನ್ ನೆಪ ಹೇಳಿ ಪರೀಕ್ಷೆಯನ್ನು ಮುಂದೂಡಲಾಯಿತು. ಆರು ಸೋಂಕಿತರಿದ್ದಾಗ ಪರೀಕ್ಷೆ ನಡೆಸದೇ ಸೋಂಕಿತರ ಸಂಖ್ಯೆ ನಾಲ್ಕು ಸಾವಿರಕ್ಕೇರಿದಾಗ ಪರೀಕ್ಷೆ ನಡೆಸಲು ಸರ್ಕಾರ ಮುಂದಾಗಿದೆ. 6,90,153 ಮಂದಿ ವಿದ್ಯಾರ್ಥಿಗಳು ಇಂಗ್ಲಿಷ್ ಪರೀಕ್ಷೆ ಬರೆಯಬೇಕಿದೆ.

ಅಷ್ಟು ಮಂದಿಯ ನಡುವೆ ಹೇಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು. ಸೋಂಕು ಸಮುದಾಯದ ಹರಡುವಿಕೆ ಹಂತಕ್ಕೆ ಹೋಗಿರುವ ಈ ಸಂದರ್ಭದಲ್ಲಿ ಮಕ್ಕಳ ರಕ್ಷಣೆ ಹೇಗೆ. ಈ ಯಾವ ಪ್ರಶ್ನೆಗಳಿಗೂ ಉತ್ತರ ಅಸ್ಪಷ್ಟ. ಸರ್ಕಾರ ಮಾಡುವ ಯಡವಟ್ಟಿಗೆ ವಿದ್ಯಾರ್ಥಿಗಳು, ಪೋಷಕರು, ಉಪನ್ಯಾಸಕರು ಬೆಲೆ ತೆರುವಂತಾಗಿದೆ.

Facebook Comments

Sri Raghav

Admin