ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟ , ಬಾಲಕಿಯರೇ ಮೇಲುಗೈ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.20-ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.29.91ರಷ್ಟು ಫಲಿತಾಂಶ ಬಂದಿದ್ದು, ಬಾಲಕಿಯರೇ ಹೆಚ್ಚು ತೇರ್ಗಡೆಯಾಗಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.

ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಆಗಸ್ಟ್ -ಸೆಪ್ಟೆಂಬರ್ ನಲ್ಲಿ ನಡೆದ ದ್ವಿತೀಯ ಪಿ.ಯು ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ ಅವರು, ಪರೀಕ್ಷೆಗೆ ಹಾಜರಾಗಿದ್ದ 18,413 ವಿದ್ಯಾರ್ಥಿಗಳಲ್ಲಿ 5507ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, 12906 ವಿದ್ಯಾರ್ಥಿಗಳು ಅನುತೀರ್ಣರಾಗಿದ್ದಾರೆ ಎಂದರು.

ಸ್ಕ್ಯಾನ್ ಮಾಡಿದ ಉತ್ತರ ಪ್ರತಿಕೆ ಪಡೆಯಲು 530ರೂ. ಶುಲ್ಕ ನಿಗದಿ ಪಡಿಸಲಾಗಿದೆ‌. ಅರ್ಜಿ ಸಲ್ಲಿಸಲು ಸೆ.25 ಕಡೇ ದಿನ. ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು 1670 ರೂ. ಶುಲ್ಕ ನಿಗದಿ ಪಡಿದಲಾಗಿದ್ದು, ಸೆ.27ರಿಂದ ಅರ್ಜಿಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅಕ್ಟೋಬರ್ 5 ಕಡೇ ದಿನವಾಗಿದೆ.

ಪರೀಕ್ಷೆಗೆ ಹಾಜರಾದ 592 ಹೊಸ ವಿದ್ಯಾರ್ಥಿಗಳಲ್ಲಿ 556 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, 36 ವಿದ್ಯಾರ್ಥಿಗಳು ಫೇಲಾಗಿದ್ದಾರೆ. ಶೇ. 93.92 ಫಲಿತಾಂಶ ಬಂದಿದೆ ಎಂದು ಹೇಳಿದರು. ಪುನರಾವರ್ತಿತ 351 ವಿದ್ಯಾರ್ಥಿಗಳಲ್ಲಿ 183 ಮಂದಿ ತೇರ್ಗಡೆಯಾಗಿದ್ದು, 168 ಅನುತ್ತೀರ್ಣರಾಗಿದ್ದಾರೆ. ಶೇ.52.29 ರಷ್ಟು ಫಲಿತಾಂಶ ಬಂದಿದೆ.

17470 ಖಾಸಗಿ ಅಭ್ಯರ್ಥಿಗಳಲ್ಲಿ 4768 ಮಂದಿ ತೇರ್ಗಡೆಯಾಗಿದ್ದು, 12,702 ಮಂದಿ ಅನುತ್ತೀರ್ಣರಾಗಿದ್ದಾರೆ. ಶೇ.27.29 ರಷ್ಟು ಫಲಿತಾಂಶ ಬಂದಿದೆ. ವಿಜ್ಞಾನ ವಿಭಾಗದಲ್ಲಿ ಶೇ. 70.83, ಕಲಾ ವಿಭಾಗದಲ್ಲಿ ಶೇ.32.06, ವಾಣಿಜ್ಯ ವಿಭಾಗದಲ್ಲಿ ಶೇ.24.98ರಷ್ಟು ತೇರ್ಗಡೆಯಾಗಿದ್ದಾರೆ.

ಬಾಲಕಿಯರು ಶೇ.36.72 ಬಾಲಕರು ಶೇ.26.02 ರಷ್ಟು ಉತ್ತೀರ್ಣರಾಗಿದ್ದಾರೆ. ನಗರ ಪ್ರದೇಶದಲ್ಲಿ ಶೇ. 28.62, ಗ್ರಾಮಾಂತರ ಪ್ರದೇಶದಲ್ಲಿ ಶೇ.32.59 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಆಂಗ್ಲ ಮಾಧ್ಯಮದ ಶೇ.26.08 ಹಾಗೂ ಕನ್ನಡ ಮಾಧ್ಯಮದಲ್ಲಿ ಶೇ.31.72ರಷ್ಟು ಫಲಿತಾಂಶ ಬಂದಿದೆ ಎಂದು ಹೇಳಿದರು.

580 ಮಂದಿ ಉನ್ನತ ಶ್ರೇಣಿ, 1939 ವಿದ್ಯಾರ್ಥಿಗಳು ಪ್ರಥಮ ದರ್ಜೆ ಪಡೆದಿದ್ದಾರೆ. ಆರುನೂರು ಅಂಕಗಳಿಗೆ ವಿಜ್ಞಾನದಲ್ಲಿ 573, ವಾಣಿಜ್ಯದಲ್ಲಿ 594 ಹಾಗೂ ಕಲಾ ವಿಭಾಗದಲ್ಲಿ 592 ರಷ್ಟು ಅತಿ ಹೆಚ್ಚು ಅಂಕ ಪಡೆಯಲಾಗಿದೆ ಎಂಬ ಮಾಹಿತಿಯನ್ನು ಸಚಿವರು ನೀಡಿದರು. ಪ್ರಾಥಮಿಕ ಪ್ರೌಢ ಶಿಕ್ಷಣ ಇಲಾಖೆ ಪ್ರಧಾನಕಾರ್ಯದರ್ಶಿ ಉಮಾಶಂಕರ್, ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಾದ ಆರ್ ಸ್ನೇಹಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು‌.

Facebook Comments

Sri Raghav

Admin