ಪಿಯುಸಿ ಪೂರಕ ಪರೀಕ್ಷೆ ಕುರಿತು ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.14- ಪಿಯುಸಿ ಉತ್ತರ ಪತ್ರಿಕೆಯ ಮರುಮೌಲ್ಯಮಾಪನ ಮತ್ತು ಮರುಎಣಿಕೆಗಾಗಿ ಆಗಸ್ಟ್ 4ರಿಂದ 10ರ ನಡುವೆ ಅರ್ಜಿ ಸಲ್ಲಿಸಬಹುದಾಗಿದೆ.

ಉತ್ತರಪತ್ರಿಕೆಯ ಸ್ಕ್ಯಾನಿಂಗ್ ಪ್ರತಿಗಾಗಿ ಜು.16ರಿಂದ 30ರ ನಡುವೆ ಅರ್ಜಿ ಸಲ್ಲಿಸಬಹುದು. ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಪ್ರತಿ ಡೌನ್‍ಲೋಡ್ ಮಾಡಿಕೊಳ್ಳಲು ಆ.3ರಿಂದ 7ರವರೆಗೆ ಅವಕಾಶವಿದೆ.

ಸ್ಕ್ಯಾನಿಂಗ್ ಪ್ರತಿ ಪಡೆಯಲು 530 ರೂ. ಮರುಮೌಲ್ಯಮಾಪನದ ಪ್ರತಿ ವಿಷಯಕ್ಕೆ 1670 ರೂ. ಶುಲ್ಕ ಪಾವತಿಸಬೇಕಿದೆ. ಪೂರಕ ಪರೀಕ್ಷೆಗೆ ಜು.31ರೊಳಗೆ ವಿದ್ಯಾರ್ಥಿಗಳು ಶುಲ್ಕ ಪಾವತಿಸಬೇಕು.

ಕಾಲೇಜಿನವರು ಆ.5ರೊಳಗೆ ಉಪನಿರ್ದೇಶಕರ ಕಚೇರಿಗೆ ಚಲನ್ ಸಹಿತ ಶುಲ್ಕ ಪಾವತಿಸಬೇಕು. ಪ್ರತಿ ವಿಷಯಕ್ಕೆ 140 ರೂ, ಎರಡು ವಿಷಯಕ್ಕೆ 270, ಮೂರಕ್ಕಿಂತ ಹೆಚ್ಚಿನ ವಿಷಯಗಳಿಗೆ 470 ರೂ.ಗಳು. ಎಸ್ಸಿ-ಎಸ್ಟಿ ಪ್ರವರ್ಗ 1ರ ವಿದ್ಯಾರ್ಥಿಗಳು 50 ರೂ. ಶುಲ್ಕ ಪಾವತಿಸಬೇಕು.

Facebook Comments

Sri Raghav

Admin