ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ
ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಮುಂದಿನ ರ್ಷದ ಮಾರ್ಚ್ 4ರಿಂದ ಪರೀಕ್ಷೆ ಆರಂಭಗೊಳ್ಳಲಿದೆ.
ಪಿಯುಸಿ ಶಿಕ್ಷಣ ಮಂಡಳಿ ಸೋಮವಾರ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿದೆ.
ಬಹುದಿನಗಳಿಂದ ವಿದ್ಯರ್ಥಿಗಳು ಪರೀಕ್ಷೆಯ ವೇಳಾಪಟ್ಟಿಗೆ ಕಾಯುತ್ತಿದ್ದರು. ಪರೀಕ್ಷಾ ಸಮಯ ಲಭ್ಯವಾಗಿದ್ದು, ಸಮಯಕ್ಕನುಗುಣವಾಗಿ ಅಭ್ಯಾಸದಲ್ಲಿ ತೊಡಗಿಕೊಳ್ಳಬೇಕಿದೆ.
ಮಾರ್ಚ್ 4ರಿಂದ ಮರ್ಚ್ 23ರವರೆಗೆ ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ಪರೀಕ್ಷೆ ನಡೆಯಲಿದೆ ಎಂದು ಪಿಯು ಇಲಾಖೆಯ ನರ್ದೇಶಕ ಎಂ.ಕಂಗವಲ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
# ವೇಳಾಪಟ್ಟಿ ಹೀಗಿದೆ:
ಮಾರ್ಚ್ 4 – ಇತಿಹಾಸ, ಭೌತಶಾಸ್ತ್ರ, ಬೇಸಿಕ್ ಗಣಿತ
ಮಾರ್ಚ್ 5 – ತಮಿಳು, ತೆಲಗು, ಮಲೆಯಾಳಂ, ಮರಾಠಿ, ಅರೇಬಿಕ್, ಫ್ರೆಂಚ್
ಮಾರ್ಚ್ 6 – ರ್ನಾಟಕ ಸಂಗೀತ, ಹಿಂದುಸ್ಥಾನಿ ಸಂಗೀತ
ಮಾರ್ಚ್7 – ಬಿಸಿನೆಸ್ ಸ್ಟಡೀಸ್, ಸಮಾಜಶಾಸ್ತ್ರ, ರಸಾಯನಶಾಸ್ತ್ರ,
ಮಾರ್ಚ್9ರಂದು ಇನ್ಫರ್ಮೇಶನ್ ಟೆಕ್ನಾಲಜಿ, ರಿಟೇಲ್, ಆಟೋಮೊಬೈಲ್, ಹೆಲ್ತ್ ಕೇರ್ ಹಾಗೂ ಬ್ಯುಟಿ ಅಂಡ್ ವೆಲ್ನೆಸ್
ಮಾರ್ಚ್ 10 – ರ್ದು
ಮಾರ್ಚ್ 11 – ಐಚ್ಛಿಕ ಕನ್ನಡ, ಅಕೌಂಟೆನ್ಸಿ, ಗಣಿತ
ಮಾರ್ಚ್ 12 – ಭೂಗೋಳಶಾಸ್ತ್ರ
ಮಾರ್ಚ್ 13 – ಎಜುಕೇಶನ್ (ಶಿಕ್ಷಣ)
ಮಾರ್ಚ್ 14 – ಮನಃಶಾಸ್ತ್ರ, ಎಲೆಕ್ಟ್ರಾನಿಕ್, ಕಂಪ್ಯೂಟರ್ ಸೈನ್ಸ್
ಮಾರ್ಚ್ 16 – ಲಾಜಿಕ್, ಹೋಮ್ ಸೈನ್ಸ್, ಭೂ ವಿಜ್ಞಾನ
ಮಾರ್ಚ್ 17 – ರ್ಥಶಾಸ್ತ್ರ, ಜೀವಶಾಸ್ತ್ರ
ಮಾರ್ಚ್ 18 – ಹಿಂದಿ
ಮಾರ್ಚ್ 19 – ಕನ್ನಡ
ಮಾರ್ಚ್ 20 – ಸಂಸ್ಕೃತ
ಮಾರ್ಚ್ 21 – ರಾಜ್ಯಶಾಸ್ತ್ರ, ಲೆಕ್ಕಶಾಸ್ತ್ರ
ಮಾರ್ಚ್ 23 – ಇಂಗ್ಲಿಷ್