6 ಸಾವಿರ ಮೈಲಿಗಲ್ಲು ದಾಟಿದ ಪೂಜಾರ

ಈ ಸುದ್ದಿಯನ್ನು ಶೇರ್ ಮಾಡಿ

ಸಿಡ್ನಿ, ಜ.11- ಟೀಂ ಇಂಡಿಯಾದ ಖ್ಯಾತ ಟೆಸ್ಟ್ ಸ್ಪೆಷಾಲಿಸ್ಟ್ ಚೇತೇಶ್ವರ ಪೂಜಾರ ಅವರಿಂದು 6 ಸಾವಿರ ಟೆಸ್ಟ್ ಮೈಲಿಗಲ್ಲು ದಾಟಿದ 11ನೇ ಭಾರತೀಯ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಸಿಡ್ನಿ ಟೆಸ್ಟ್‍ನ ಪ್ರಥಮ ಇನ್ನಿಂಗ್ಸ್‍ನಲ್ಲಿ ಅರ್ಧಶತಕ ಗಳಿಸಿದ್ದ ಪೂಜಾರ ಇಂದ ಕೂಡ ತಾಳ್ಮೆಯುತ ಆಟ ಪ್ರದರ್ಶಿಸಿ 77 ರನ್ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು.

ಭಾರತ ಪರ 6 ಸಾವಿರ ಪೂರೈಸಿದ ಆಟಗಾರರು: ಸಚಿನ್ ತೆಂಡೂಲ್ಕರ್(15921ರನ್, 51ಶತಕ, 68 ಅರ್ಧಶತಕ), ರಾಹುಲ್ ದ್ರಾವಿಡ್(13265ರನ್, 36ಶತಕ, 63 ಅರ್ಧಶತಕ), ಸುನೀಲ್ ಗವಾಸ್ಕರ್(10122ರನ್ , 34ಶತಕ, 45 ಅರ್ಧಶತಕ),ವಿವಿಎಸ್ ಲಕ್ಷ್ಮಣ್ (8781 ರನ್ , 17ಶತಕ, 56ಅರ್ಧಶತಕ), ವೀರೇಂದ್ರ ಸೆಹ್ವಾಗ್ (8503 ರನ್ , 23ಶತಕ, 32 ಅರ್ಧಶತಕ), ವಿರಾಟ್ ಕೊಹ್ಲಿ (7318ರನ್ , 27ಶತಕ,22 ಅರ್ಧಶತಕ), ಸೌರವ್ ಗಂಗೂಲಿ (7212 ರನ್, 16 ಶತಕ, 35 ಅರ್ಧಶತಕ), ದಿಲೀಪ್ ವೆಂಗಾಸ್ಕರ್(6868ರನ್, 17 ಶತಕ, 35 ಅರ್ಧಶತಕ), ಮೊಹಮ್ಮದ್ ಅಜರುದ್ದೀನ್(6215ರನ್ 22 ಶತಕ, 21 ಅರ್ಧಶತಕ), ಗುಂಡಪ್ಪ ವಿಶ್ವನಾಥ್ (6080ರನ್ 14 ಶತಕ, 35 ಅರ್ಧಶತಕ), ಚೇತೇಶ್ವರ ಪೂಜಾರ (6000, 18 ಶತಕ, 25 ಅರ್ಧಶತಕ).

ಕಡಿಮೆ ಪಂದ್ಯಗಳಲ್ಲಿ 6 ಸಾವಿರ ಪೂರೈಸಿದ ಆಟಗಾರರು:
ಸುನೀಲ್‍ಗವಾಸ್ಕರ್-117 ಪಂದ್ಯ, ವಿರಾಟ್ ಕೊಹ್ಲಿ-119 ಪಂದ್ಯ, ಸಚಿನ್‍ತೆಂಡೂಲ್ಕರ್-120 ಪಂದ್ಯ, ರಾಹುಲ್‍ದ್ರಾವಿಡ್-125, ಚೇತೇಶ್ವರ ಪೂಜಾರ- 134 ಪಂದ್ಯ. ಚೇತೇಶ್ವರ ಪೂಜಾರ ಇಂದು 77 ರನ್ ಗಳಿಸುವ ಮೂಲಕ ನಾಲ್ಕನೇ ಇನ್ನಿಂಗ್ಸ್‍ನಲ್ಲಿ ಅತಿ ಹೆಚ್ಚು ರನ್ ಗಳಿಸಿದ 3ನೇ ಆಟಗಾರ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ.

ಇದಕ್ಕೂ ಮುನ್ನ 1979ರಲ್ಲಿ ಓವಲ್‍ನಲ್ಲಿ ಇಂಗ್ಲೆಂಡ್ ವಿರುದ್ಧ ಸುನೀಲ್ ಗವಾಸ್ಕರ್ 221ರನ್, 2018ರಲ್ಲಿ ಓವಲ್‍ನಲ್ಲಿ ಇಂಗ್ಲೆಂಡ್ ವಿರುದ್ಧ ಕನ್ನಡಿಗ ರಾಹುಲ್‍ದ್ರಾವಿಡ್ 149 ರನ್ ಗಳಿಸಿದ್ದರು. ಎರಡು ಇನ್ನಿಂಗ್ಸ್‍ನಲ್ಲಿ ಚೇತೇಶ್ವರ ಪೂಜಾರ ಅರ್ಧಶತಕ ಗಳಿಸಿರುವುದು ಇದು ಐದನೇ ಬಾರಿ.

Facebook Comments