ಚೇತೇಶ್ವರ ಪೂಜಾರ ವಿರುದ್ಧ ವಿವಿಎಸ್ ಲಕ್ಷ್ಮಣ್ ಬೇಸರ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ , ಡಿ.5- ಭಾರತ ಟೆಸ್ಟ್ ತಂಡದ ಸ್ಪೆಷಾಲಿಸ್ಟ್ ಆಟಗಾರ ಎಂದೇ ಬಿಂಬಿಸಿಕೊಂಡಿರುವ ಬ್ಯಾಟ್ಸ್‍ಮನ್ ಚೇತೇಶ್ವರ ಪೂಜಾರ ಅವರು ಶತಕ ಗಳಿಸಲು ಸುದೀರ್ಘ ಕಾಲ ತೆಗೆದುಕೊಳ್ಳುವುದಕ್ಕೆ ಮಾಜಿ ಕ್ರಿಕೆಟಿಗ ಹಾಗೂ ಎನ್‍ಸಿಎ ಅಧ್ಯಕ್ಷ ವಿವಿಎಸ್ ಲಕ್ಷ್ಮಣ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಚೇತೇಶ್ವರ ಪೂಜಾರ ಇಂದಿಲ್ಲಿ ನಡೆಯುತ್ತಿರುವ ನ್ಯೂಜಿಲ್ಯಾಂಡ್ ವಿರುದ್ಧದ 2ನೆ ಟೆಸ್ಟ್‍ನಲ್ಲಿ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸುವ ಮೂಲಕ ಶತಕ ಗಳಿಸುವ ಭರವಸೆ ಮೂಡಿಸಿದ್ದರಾದರೂ 47ನೆ ರನ್‍ಗಳಿಗೆ ತಮ್ಮ ಆಟವನ್ನು ಮುಗಿಸುವ ಮೂಲಕ ಈ ಪಂದ್ಯದಲ್ಲೂ ಶತಕ ಗಳಿಸುವ ಅವಕಾಶವನ್ನು ಕೈಚೆಲ್ಲಿದ್ದಾರೆ.

ಚೇತೇಶ್ವರ ಪೂಜಾರ ಬ್ಯಾಟ್‍ನಿಂದ 42 ಇನ್ನಿಂಗ್ಸ್‍ನಿಂದ ಒಂದೇ ಒಂದು ಶತಕ ಕೂಡ ಹೊಮ್ಮಿಬಂದಿಲ್ಲ, 2019ರಲ್ಲಿ ಅವರು ಕೊನೆಯ ಬಾರಿಗೆ ಶತಕ ಗಳಿಸಿದ್ದರು, ಟೆಸ್ಟ್ ಸ್ಪೆಷಾಲಿಸ್ಟ್ ಆಗಿರುವ ಪೂಜಾರ ಅವರು ತಮ್ಮ ನೈಜ ಆಟವನ್ನು ಪ್ರದರ್ಶಿಸಿ ಶತಕ ಗಳಿಸುವಲ್ಲಿ ಎಡವುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದು ಲಕ್ಷ್ಮಣ್ ತಿಳಿಸಿದ್ದಾರೆ.

2019ರ ಜನವರಿಯಲ್ಲಿ ಸಿಡ್ನಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಪೂಜಾರ 193 ರನ್ ಗಳಿಸಿದ್ದರು ನಂತರ ಅವರ ಬ್ಯಾಟ್‍ನಿಂದ ಒಂದೇ ಒಂದು ಶತಕ ಕೂಡ ಹೊಮ್ಮಿಬಂದಿಲ್ಲ.

ಚೇತೇಶ್ವರ ಪೂಜಾರ ಅವರು 3ನೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿರುವುದರಿಂದ ಅವರಿಗೆ ಶತಕ ಗಳಿಸುವ ಅವಕಾಶಗಳು ಹೇರಳವಾಗಿದ್ದು ಮುಂದಿನ ದಿನದಲ್ಲಾದರೂ ಅವರ ಬ್ಯಾಟ್‍ನಿಂದ ಶತಕ ಮೂಡಿಬರಲಿ ಎಂದು ವಿವಿಎಸ್ ಲಕ್ಷ್ಮಣ್ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

Facebook Comments