ಜಯದೇವ್-ರೀನಿಗೆ ಶುಭ ಕೋರಿದ ಪೂಜಾರ

ಈ ಸುದ್ದಿಯನ್ನು ಶೇರ್ ಮಾಡಿ

ಜೈಪುರ,ಮಾ.16- ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟಿಗ ಮ್ಯಾಕ್ಸ್‍ವೆಲ್ ತನ್ನ ಬಾಲ್ಯದ ಗೆಳತಿ ವಿನಿ ರಾಮನ್‍ರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ಬೆನ್ನಲ್ಲೇ ಭಾರತದ ಖ್ಯಾತ ಆಟಗಾರ ಹಾಗೂ ಚೊಚ್ಚಲ ರಣಜಿ ಚಾಂಪಿಯನ್ಸ್ ನಾಯಕ ಜಯದೇವ್ ಉನಾದ್ಕಟ್ ಅವರ ನಿಶ್ಚಿತಾರ್ಥ ನಡೆದಿದೆ.

ಪ್ರಸಕ್ತ ರಣಜಿ ಸರಣಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಸೌರಾಷ್ಟ್ರ ತಂಡದ ನಾಯಕ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್‍ಗಳನ್ನು ಕೆಡವಿದ ಕೀರ್ತಿಗೆ ಭಾಜನರಾಗಿದ್ದರೆ ಅಲ್ಲದೆ ಸೌರಾಷ್ಟ್ರಕ್ಕೆ ಚೊಚ್ಚಲ ರಣಜಿ ಕಪ್ ಗೆದ್ದು ಕೊಟ್ಟ ಸಂಭ್ರಮದಲ್ಲಿದ್ದ ಉನಾದ್ಕಟ್ ರಿನೀ ಎಂಬುವವರಿಗೆ ರಿಂಗ್ ತೊಡಿಸುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ರಿನೀ ಟೆಸ್ಟ್ ಸ್ಪೆಷಾಲಿಸ್ಟ್ ಚೇತೇಶ್ವರ ಪೂಜಾರರ ಶುಭ ಹಾರೈಸಿದ್ದು, ನೀವು ನನ್ನ ಸಹೋದರ ಜಯದೇವ್‍ರ ಹೃದಯ ಗೆದ್ದು ನಿಶ್ಚಿತಾರ್ಥ ಮಾಡಿಕೊಂಡಿದ್ದಿರಿ, ನಮ್ಮ ಕುಟುಂಬಕ್ಕೆ ಸೇರ್ಪಡೆ ಯಾಗುತ್ತಿರುವ ನಿಮಗೆ ಸ್ವಾಗತ ಎಂದು ಟ್ವಿಟ್ಟರ್‍ನಲ್ಲಿ ಶುಭ ಕೋರಿದ್ದಾರೆ. ಕ್ರಿಕೆಟಿಗರಾದ ಮಂದೀಪ್‍ಸಿಂಗ್, ಸಿದ್ದಾರ್ಥಕೌಲ್, ರಾಹುಲ್ ಶರ್ಮಾ ಸೇರಿದಂತೆ ಅನೇಕ ಕ್ರಿಕೆಟಿಗರು ಜಯದೇವ್ ಹಾಗೂ ರೀನಿ ಜೋಡಿಗೆ ಶುಭ ಹಾರೈಸಿದ್ದಾರೆ.

Facebook Comments