ಪುಲ್ವಾಮಾ ಸತ್ಯ ಒಪ್ಪಿಕೊಂಡ ‘ಪಾಪಿ’ಸ್ತಾನ, ಪಾಕ್ ಸಂಸತ್ತಿನಲ್ಲಿ ಮೋದಿ ಜೈಕಾರ

ಈ ಸುದ್ದಿಯನ್ನು ಶೇರ್ ಮಾಡಿ

The truth is always in the last place you look (ಸತ್ಯವು ಯಾವಾಗಲೂ ನೀವು ನೋಡುವ ಕೊನೆಯ ಸ್ಥಾನದಲ್ಲಿರುತ್ತದೆ). ಈ ಮಾತು ಅಕ್ಷರಶಃ ಸತ್ಯ. ಅದರಲ್ಲೂ ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್, ಫಾರೂಕ್ ಅಬ್ದುಲ್ಲಾ, ಮಮತಾ ಬ್ಯಾನರ್ಜಿ, ರಾಮ್ ಗೋಪಾಲ್ ಯಾದವ್ ಇಂತಹ ದೊಡ್ಡ ದೊಡ್ಡ ರಾಜಕಾರಣಿಗಳು ಈ ಆಂಗ್ಲ ಭಾಷೆಯ ಗಾದೆಯನ್ನು ಎಷ್ಟು ಸಾರಿ ಓದಿದರೂ ಅವರಿಗದು ಕಡಿಮೆಯೇ ಅನಿಸುತ್ತದೆ. ಏಕೆಂದರೆ, ಅವರೆಲ್ಲರೂ ಸತ್ಯವನ್ನು ಮೊದಲ ಸ್ಥಾನದಲ್ಲಿ ಹುಡುಕುವ ಸಾಲಿನವರು.

ದಿನಾಂಕ 14-2-2019 ಗುರುವಾರ, ಇದು ನಮ್ಮ ಭಾರತದ ಇತಿಹಾಸದಲ್ಲಿ ಎಂದೂ ಮರೆಯದ ಕರಾಳ ದಿನ. ಇಡೀ 130 ಕೋಟಿ ಭಾರತೀಯರು ಕಣ್ಣೀರಿನಲ್ಲಿ ಕೈ ತೊಳೆದ ದಿನ. ಜಮ್ಮು, ಶ್ರೀನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಆರ್‍ಪಿಎಫ್ ಭದ್ರತಾ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಲು ವಾಹನದಲ್ಲಿ ಸಾಗುತ್ತಿರುತ್ತಾರೆ.

ಆದರೆ, ಇಂತಹ ಸಮಯಕ್ಕಾಗಿಯೇ ಹೊಂಚು ಹಾಕಿ ಕಾದು ಕುಳಿತಿದ್ದ ಪಾಕಿಸ್ತಾನ ಮೂಲದ ಜೈಷ್-ಎ-ಮೊಹಮ್ಮದ್ ಇಸ್ಲಾಂ ಉಗ್ರಗಾಮಿ ಸಂಘಟನೆ ಆದಿಲ್ ಅಹ್ಮದ್ ದಾರ್ ಎಂಬ ಹುಡುಗನಿಗೆ ಆತ್ಮಹತ್ಯೆ ಬಾಂಬರ್ ವಾಹನ ಕೊಟ್ಟು ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲಾಯ ಲೇಥ್ಪೊರದಲ್ಲಿ(ಆವಂತಿ ಪೋರ ಬಳಿ) ಭದ್ರತಾ ಸಿಬ್ಬಂದಿ ವಾಹನಗಳ ಮೇಲೆ ಆತ್ಮಹತ್ಯೆ ಬಾಂಬರ್ ವಾಹನದಿಂದ ದಾಳಿ ಮಾಡಿಸುತ್ತಾರೆ.

ಆ ದಾಳಿಯಲ್ಲಿ 40 ಸಿಆರ್‍ಪಿಎಫ್ ಯೋಧರ ಮುಖ, ಕೈ-ಕಾಲು, ತಲೆ, ಮೆದುಳು ಚಿದ್ರಚಿದ್ರವಾಗಿ ಸಿಡಿದು ಬಹಳ ದಾರುಣವಾಗಿ ಮೃತಪಡುತ್ತಾರೆ. 35 ಮಂದಿ ಯೋಧರು ಮಾರಣಾಂತಿಕವಾಗಿ ಗಾಯಗೊಳ್ಳುತ್ತಾರೆ. ಪುಲ್ವಾಮಾ ದಾಳಿ ಒಟ್ಟಿನಲ್ಲಿ ಇಡೀ ಭಾರತದ ಇತಿಹಾಸದಲ್ಲಿ ಪ್ರತಿಯೊಬ್ಬ ದೇಶ ಪ್ರೇಮಿಗೆ, ರಾಷ್ಟ್ರ ಭಕ್ತನಿಗೆ ಹೃದಯದಲ್ಲಿ ಎಂದೂ ಅಳಿಸದ, ಎಂದೆಂದಿಗೂ ಮರೆಯದ ಮನ ಮಿಡಿಯುವ ಮತ್ತು ಶತೃ ರಾಷ್ಟ್ರ ಪರಮ ವೈರಿ ಪಾಕಿಸ್ತಾನದ ಮೇಲೆ ರಕ್ತ ಕುದಿಯುವ ವಿಷಯವಾಗಿಯೇ ಉಳಿದಿದೆ.

ಏಕೆಂದರೆ, ಈ ಪುಲ್ವಾಮಾ ದಾಳಿಯಲ್ಲಿ ಸಂಪೂರ್ಣವಾಗಿ ಪಾಕಿಸ್ತಾನದ ಕೈವಾಡವಿತ್ತು. ಇದು ಸಂಪೂರ್ಣವಾಗಿ ಜಗತ್ತಿಗೆ ಗೊತ್ತಿತ್ತು. ಇದನ್ನು ಸ್ವತಃ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರೇ ಸ್ಪಷ್ಟಪಡಿಸಿದ್ದರು. ಅಂದಿನ ಗೃಹಮಂತ್ರಿ ರಾಜನಾಥ್ ಸಿಂಗ್ ಜಗತ್ತಿಗೆ ಕೂಗಿ ಕೂಗಿ ಹೇಳಿದ್ದರು. ಆದರೆ, ಇದ್ಯಾವುದಕ್ಕೂ ಸುತರಾಂ ಒಪ್ಪದ ಗುಳ್ಳೆನರಿ ಪಾಪಿ ಪಾಕಿಸ್ತಾನ ಮಾತ್ರ ನಾನವನಲ್ಲ ನಾನವನಲ್ಲ… ನಾನವನಲ್ಲ..! ನಮಗೂ ಪುಲ್ವಾಮಾ ದಾಳಿಗೂ ಯಾವುದೇ ಸಂಬಂಧವಿಲ್ಲ ಎಂದು ಘಂಟಾಘೋಷವಾಗಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮೈಕ್ ಮುಂದೆ ಅದೇ ಗುಳ್ಳೆ ನರಿಯ ನಾಟಕ ಕಂಪೆನಿ ಕಲಾವಿದನ ಧಾಟಿಯಲ್ಲಿ ಜಗತ್ತಿನ ಮಂದೆ ಪಾಕಿಸ್ತಾನದ ಬಣ್ಣ ಬಯಲಾಗದಂತೆ ಸಮರ್ಥನೆ ಮಾಡಿಕೊಂಡರು.

ಅಷ್ಟರ¯್ಲÁಗಲೇ ಇಡೀ ಭಾರತ ಏ.11ರಂದು ನಡೆಯಬೇಕಾಗಿದ್ದ 17ನೆ ಲೋಕಸಭಾ ಚುನಾವಣೆಯಲ್ಲಿ ಮುಳುಗಿ ಹೋಗಿತ್ತು. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಭಾಜಪ ಮತ್ತು ಪ್ರಾದೇಶಿಕ ಪಕ್ಷಗಳು ತಮ್ಮದೇ ಆದ ಸಿದ್ಧಾಂತದಲ್ಲಿ ಮತ ಬೇಟೆಗೆ ಬಲೆ ಹೆಣೆಯುತ್ತಿದ್ದವು. ಆಗಲೇ ನೋಡಿ ಪುಲ್ವಾಮಾ ದಾಳಿ ವಿರೋಧ ಪಕ್ಷಗಳಿಗೆ ಕೈಗೆ ಧಾರವಾಡದ ಪೇಡ ಸಿಕ್ಕಂತಾಗಿಬಿಟ್ಟಿತ್ತು.

ಅದರಲ್ಲೂ ಪ್ರಧಾನಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷವನ್ನು ಭರ್ಜರಿಯಾಗಿ ಸಂಘಟನೆ ಮಾಡುತ್ತಿದ್ದ ರಾಹುಲ್ ಗಾಂಧಿ ಅವರು ಉಗ್ರ ನರಸಿಂಹನ ಅವತಾರ ತಾಳಿ ಹೈ ಪಿಚ್ ಧ್ವನಿಯಲ್ಲಿ ಪುಲ್ವಾಮಾ ದಾಳಿ ಮೋದಿ ಸರ್ಕಾರದ ಭಾಗವಾಗಿ ಯಾರು ಮುಂದೆ ಬಂದು ಭದ್ರತಾ ವೈಫಲ್ಯವನ್ನು ಒಪ್ಪಿಕೊಳ್ಳುತ್ತಾರೆ..? ಈ ಪುಲ್ವಾಮಾ ದಾಳಿಯ ಪ್ರಯೋಜನ ಚುನಾವಣೆಯ ಸಂದರ್ಭದಲ್ಲಿ ಯಾರಿಗೆ ಸಿಗಬಹುದು.?

ಪುಲ್ವಾಮಾ ದಾಳಿ ಘಟನೆಯ ಬಗ್ಗೆ ಸತ್ಯಾಸತ್ಯತೆ ವಿಚಾರಣೆ ಮಾಡಿದರೆ ಇದರಲ್ಲಿ ಅಪರಾಧಿ ಯಾರಾಗಬಹುದು ಎಂದು ನರೇಂದ್ರ ಮೋದಿ ಅವರ ಮೇಲೆ ಮತ್ತು ಭಾಜಪ ಕಡೆ ಬೊಟ್ಟು ಮಾಡಿ ಬಿಡುತ್ತಾರೆ ರಾಹುಲ್ ಗಾಂಧಿ. ಆಗಲೇ ನೋಡಿ ಪ್ರಾದೇಶಿಕ ಪಕ್ಷಗಳ ವಾರಸುದಾರರೆಲ್ಲ ಮೈ ಕೊಡವಿ ದಡಕ್ಕನೇ ಎದ್ದು ಕುಳಿತುಬಿಟ್ಟರು. ಪರವಾಗಿಲ್ಲ ನಮ್ಮ ರಾಹುಲ್ ಬಾಬನು ರಾಜಕೀಯ ದಾಳ ಉರುಳಿಸಬಲ್ಲರು ಎಂದು ಮೆಚ್ಚಿಕೊಂಡ ಇವರುಗಳು ರಾಹುಲ್ ದಾರಿಯಲ್ಲೇ ದೇಶದ ಜನತೆಯ ಮುಂದೆ ಜಾತ್ಯತೀತ ಮಿತ್ರ ಮಂಡಳಿ ಕಟ್ಟಿಕೊಂಡು ಪ್ರವಚನ ಶರುವಿಟ್ಟುಕೊಳ್ಳುತ್ತಾರೆ.

ಯಾವುದೇ ಜಾಗವಿರಲಿ ಮೊದಲು ಅಲ್ಲಿ ಸ್ವಚ್ಛತೆ ಇರಬೇಕು. ಏಕೆಂದರೆ ಭಾರತವೀಗ ಸ್ವಚ್ಛ ಭಾರತ್, ಸ್ವಚ್ಛ ಮಾಡಲು ಪೊರಕೆಯೇ ಬೇಕು. ಹಾಗಾಗಿ ಮೊದಲು ನನ್ನ ಸರದಿ ಎಂದು ಕೈಗೆ ಮೈಕ್ ಎತ್ತಿಕೊಂಡ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್… ನೋಡಿ ಒಂದು ಸತ್ಯ ಹೇಳುವೆ ನರೇಂದ್ರ ಮೋದಿ ಪಾಕಿಸ್ತಾನದ ಜತೆ ಒಳಗೊಳಗೆ ಗುಪ್ತ ಸಂಬಂಧ ಇಟ್ಟುಕೊಂಡಿದ್ದಾರೆ.

ಚುನಾವಣೆ ಸಮಯದಲ್ಲೇ ಪಾಕಿಸ್ತಾನ ನಮ್ಮ 40 ಯೋಧರನ್ನು ಹತ್ಯೆ ಮಾಡಬೇಕ..! ಅಂದರೆ ಇದು ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಮತ್ತು ಭಾಜಪಗೆ ಸಹಾಯ ಮಾಡಲು ಪಾಕಿಸ್ತಾನದ ಜೊತೆ ಒಳ ಒಪ್ಪಂದವಾಗಿದೆ..? ಇದು ದೇಶದ ಜನರು ಕೇಳುತ್ತಿರುವ ಪ್ರಶ್ನೆ ಎಂದು ಯಾವಾಗ ಕೇಜ್ರಿವಾಲ್ ಬಾಂಬ್ ಸಿಡಿಸಿದರೋ ಅದೇ ಸಾಲಿನಲ್ಲಿದ್ದ ಮಮತಾ ಬ್ಯಾನರ್ಜಿ ಅವರು ನೋಡಿ, ಪುಲ್ವಾಮಾ ದಾಳಿ ನಡೆದಿರುವ ಸಮಯ ಹೇಗಿದೆ ನೋಡಿ ಇದು ಚುನಾವಣೆ ಸಮಯದಲ್ಲೇ ಈ ದಾಳಿ ನಡೆಯಬೇಕಿತ್ತಾ..? ಸಮಾಜವಾದಿ ಪಕ್ಷದ ಮುಖಂಡ ರಾಮ್ ಗೋಪಾಲ್ ಯಾದವ್, ಮೋದಿಯವರು ಮತ ಗಳಿಸುವುದಕ್ಕೆ ಈ ದಾಳಿ ಮಾಡಿಸಿದ್ದಾರೆ.

ಇನ್ನೂ ಒಂದು ಹೆಜ್ಜೆ ಮುಂದೆ ಬಂದು ನಾನೇನು ಕಮ್ಮಿ ಎಂದು ಗಡುಸು ಧ್ವನಿಯಲ್ಲಿ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಪಾರುಖ್ ಅಬ್ದು¯್ಲÁ ಅವರು ದೇಖೋ, ಮೆ ಸಚ್ ಬೋಲ್ ರಹಾ ವೋ. ಮೋದಿಜೀ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಪ್ರಧಾನಿ ಮಂತ್ರಿ ಹುದ್ದಾ ಅಲಂಕರಿಸುವುದಕ್ಕಾಗಿಯೇ ಈ ಪುಲ್ವಾಮಾ ದಾಳಿ ಮಾಡಿಸಿದ್ದಾರೆ. ಇನ್ನು ನಮ್ಮ ಕರ್ನಾಟಕದಲ್ಲಿ ಸಿದ್ದರಾಮಯ್ಯನವರು ಮೋದಿ ಅವರನ್ನು ನರಹಂತಕ ಎಂದು ಟೀಕೆ ಮಾಡುತ್ತಾರೆ.

ಇನ್ನು ಮಾಜಿ ಪ್ರಧಾನಿ ದೇವೇಗೌಡರು, ಕುಮಾರ ಸ್ವಾಮಿ ಅವರ ಹೇಳಿಕೆಗಳು ಇದಕ್ಕಿಂತ ಭಿನ್ನವಾಗಿರಲಿಲ್ಲ ಬಿಡಿ. ನಾನು ಮೊದಲ ಸಾಲಲ್ಲೇ ಹೇಳಿದ ಹಾಗೇThe truth is always in the last place you look  ಈ ಮಾತಿನಂತೆ ಸತ್ಯ ಕೊನೆಯ ಸ್ಥಾನದಿಂದ ಇಡೀ ಜಗತ್ತಿಗೆ ಈಗ ಕಾಣಿಸಿದೆ ಗುರುವಾರ ಪಾಕಿಸ್ತಾನ ನ್ಯಾಷನಲ್ ಅಸೆಂಬ್ಲಿಯಲ್ಲಿ ನಡೆದ ಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರದ ಫೆಡರಲ್ ಮಿನಿಸ್ಟರ್ ಪಾವದ್ ಚೌಧರಿ ಪುಲ್ವಾಮ ದಾಳಿ ಮಾಡಿ ಭಾರತೀಯ ಯೋಧರನ್ನು ಹತ್ಯೆ ಮಾಡಿದ್ದು ಇಮ್ರಾನ್ ಖಾನ್ ರವರ ಸಾಧನೆ ಅದಕ್ಕೆ ನಾವೆಲ್ಲ ಪಾಕಿಸ್ತಾನಿಗಳಾಗಿ ಹೆಮ್ಮೆ ಪಡಬೇಕು ಎಂದು ಸತ್ಯವನ್ನು ಹೇಳಿಬಿಟ್ಟಿದ್ದಾರೆ. ನೋಡಿ ವಿರೋಧ ಪಕ್ಷದ ಮಿತ್ರರೆಲ್ಲರು ಪುಲ್ವಾಮಾ ದಾಳಿಗೆ ಕಾರಣ ಮೋದಿ ಮೋದಿ ಮೋದಿ ಎಂದು ಮತ ಗಿಟ್ಟಿಸಲು ಅಂದು ದೇಶದ ತುಂಬಾ ಬೊಬ್ಬೆ ಹೊಡೆಯುತ್ತಿದ್ದರು.

ಜೊತೆಗೆ ನಮ್ಮ ವಾಯು ಸೇನೆ ಬಾಲ್ ಕೋಟ್ ಉಗ್ರಗಾಮಿ ಶಿಬಿರಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿ 250 ಉಗ್ರರನ್ನು ಹತ್ಯೆಗೈದಿದ್ದ ಯೋಧರ ಸಾಹಸವನ್ನು ಸುಳ್ಳು ಎಂದು ವಾದ ಮಾಡುತ್ತಾ ಸಾಕ್ಷಿ ಕೇಳುತ್ತಿದ್ದ ಇವರಿಗೆಲ್ಲ ದೊಡ್ಡ ಮುಖಭಂಗವಾಗಿರುವುದಂತೂ ಸುಳ್ಳಲ್ಲ. ಏಕೆಂದರೆ ನಿನ್ನೆ ಬಲೂಚಿಸ್ತಾನದ ಸಂಸದರು ಮೋದಿ ಮೋದಿ ಮೋದಿ ಎಂದು ಪಾಕಿಸ್ತಾನದ ಸಂಸತ್ತಿನ ಒಳಗೆ ಘೋಷಣೆ ಕೂಗಿದ್ದಾರೆ.ಈಗ ಪುಲ್ವಾಮ ದಾಳಿಯ ಸತ್ಯಾಸತ್ಯತೆ ತಿಳಿಯುವುದರ ಜೊತೆ ಜೊತೆಗೆ ವಿರೋಧಿ ರಾಷ್ಟ್ರದ ಸಂಸತ್ತಿನ ಒಳಗೂ ಮೋದಿಯವರ ಜೈಕಾರ ಕೂಗಿ ಮೊಳಗಿರುವುದು ನರೇಂದ್ರ ಮೋದಿಯವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ.

ಶತೃಗಳು ಸಹ ನಮ್ಮನ್ನು ಪ್ರೀತಿಸುವಂತೆ ಬಾಳಬೇಕು ಎಂಬ ಮಾತಿನಂತೆ ಮೋದಿಯವರು ಜನ ಮೆಚ್ಚುವ ರೀತಿಯಲ್ಲಿ ಉತ್ತಮ ಪ್ರಧಾನಿಯಾಗಿ ಜಗತ್ತಿನಲ್ಲಿ ಹೊರ ಹೊಮ್ಮಿದ್ದಾರೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ ಎಂಬುದು ಭಾಜಪದವರ ಪ್ರಶ್ನೆ. ಪುಲ್ವಾಮಾ ದಾಳಿಯಲ್ಲಿ ಮತಕ್ಕಾಗಿ ಬಾಯಿಗೆ ಬಂದಂತೆ ಹೇಳಿಕೆ ಕೊಟ್ಟು ನಂಗನಾಚಗಿರುವ ವಿರೋಧ ಪಕ್ಷಗಳ ಮುಖಂಡರೆಲ್ಲರೂ ಇದನ್ನು ಯಾವ ರೀತಿ ಸಮರ್ಥಿಸಿಕೊಳ್ಳುತ್ತಾರೋ ಗೊತ್ತಿಲ್ಲ.

ಪ್ರಾಯಶಃ ಮೋದಿಯವರೆ ಕೋಟಿಗಟ್ಟಲೇ ಹಣ ನೀಡಿ ಪಾಕಿಸ್ತಾನ ಸಚಿವ ಪಾಯದ್ ಚೌಧರಿಯವರಿಂದ ಈ ರೀತಿ ಮಾತನಾಡಿಸಿದ್ದಾರೆ. ಇದರ ಬಗ್ಗೆ ಸಿಬಿಐ ತನಿಖೆ ಆಗಬೇಕು ಎಂದು ಹೇಳಿದರೂ ಒಂದು ವೇಳೆ ಆಶ್ಚರ್ಯ ಪಡಬೇಕಾಗಿಲ್ಲ ಬಿಡಿ ಎಂಬುದು ರಾಷ್ಟ್ರ ಭಕ್ತರ ವಾದ.

#ಅನ್ವೇಷಣೆ
@ಮಹಾಂತೇಶ್ ಬ್ರಹ್ಮ
E-mail:-MahantheshBrahma@gmail.com

Facebook Comments