47ನೇ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಗಮನ ಸೆಳೆದ 1006 ಕೆಜಿ ಕುಂಬಳಕಾಯಿ..!

ಈ ಸುದ್ದಿಯನ್ನು ಶೇರ್ ಮಾಡಿ

ಕ್ಯಾಲಿಫೋರ್ನಿಯಾ, ಅ.14- ಪ್ರತಿ ವರ್ಷ ಕ್ಯಾಲಿಫೋರ್ನಿಯಾದಲ್ಲಿ ನಡೆಯುವ ಚಾಂಪಿಯನ್‍ಶಿಪ್ ಸ್ಪರ್ಧೆಯಲ್ಲಿ ಈ ಬಾರಿ 1006 ಕೆಜಿ ತೂಕದ ಕುಂಬಳಕಾಯಿ ನೋಡುಗರ ಗಮನ ಸೆಳೆದಿದ್ದಲ್ಲದೆ ಮೊದಲ ಬಹುಮಾನಕ್ಕೆ ಭಾಜನವಾಗಿದೆ.

ಕ್ಯಾಲಿಫೋರ್ನಿಯಾದಲ್ಲಿ ನಡೆಯುತ್ತಿರುವ 47ನೆ ಚ ವಿಶ್ವ ಚಾಂಪಿಯನ್‍ಶಿಪ್ ಕುಂಬಳಕಾಯಿಗಳ ಸ್ಪರ್ಧೆಯನ್ನು ವೀಕ್ಷಿಸಲು ಸಾಗರೋಪಾದಿಯಲ್ಲಿ ಜನರು ಹರಿದು ಬರುತ್ತಿದ್ದು ಇಲ್ಲಿ ದೊಡ್ಡ ದೊಡ್ಡ ಅಜಾನುಬಾಹು ಗಾತ್ರಗಳ ಕುಂಬಳಕಾಯಿಯನ್ನು ನೋಡುವುದೇ ಸೋಜಿಗ..!

ಈ ಬಾರಿ ಸ್ಪರ್ಧೆಯಲ್ಲಿ ತೋಟಗಾರಿಕೆ ಶಿಕ್ಷಕರಾಗಿರುವ ಗಿಯೆಂಜರ್ (40) ಬೆಳೆಸಿದ್ದ 2350 (1006ಕೆಜಿ) ಪೌಂಡ್ ಕುಂಬಳಕಾಯಿ ಎಲ್ಲರ ಚಿತ್ತ ಸೆಳೆಯುವ ಮೂಲಕ ಹಾಫ್ ಮೂನ್ ಬೇ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಸೂರೆಗೊಂಡಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಗಿಯೆಂಜರ್, ಕೊರೊನಾದ ಲಾಕ್‍ಡೌನ್ ಸಮಯದಲ್ಲಿ ನಮ್ಮ ಮನೆಯ ಹಿತ್ತಲಿನಲ್ಲಿ ಕುಂಬಳಕಾಯಿ ಬೆಳೆಸಲು ಆರಂಭಿಸಿದೆ, ಪ್ರತಿದಿನ ಅದಕ್ಕೆ 10ಕ್ಕೂ ಹೆಚ್ಚು ಬಾರಿ ನೀರು ಹಾಕುವ ಮೂಲಕ ಅದರ ಹಾರೈಕೆ ಮಾಡುತ್ತಿದ್ದೆ,

ಅದು ದೊಡ್ಡ ಗಾತ್ರದಲ್ಲಿ ಬೆಳೆಯಲಾರಂಭಿಸಿತು ಅದನ್ನು ನೋಡಿ ನನಗೆ ಆಶ್ಚರ್ಯವಾಗಿ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ನಡೆಯುವ ಹಾಫ್ ಮೂನ್ ಬೇ ಸ್ಪರ್ಧೆಯಲ್ಲಿ ಪ್ರದರ್ಶನಕ್ಕಿಡಲು ನಿಶ್ಚಯಿಸಿದೆ, ಅದಕ್ಕೆ ಈಗ ಬಹುಮಾನ ಬಂದಿರು ವುದು ಸಂತಸ ತಂದಿದೆ ಎಂದರು.
ಹೇಳಿದರು.

Facebook Comments

Sri Raghav

Admin