ಮಂಗಳೂರು ಪಂಪ್‍ವೆಲ್ ಪ್ಲೈಓವರ್ ಗೆ ಕಡೆಗೂ ಮುಕ್ತಿ..!

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು,ಜ.31- ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆ, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಹತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಇಲ್ಲಿನ ಪಂಪ್ ವೆಲ್ ಫ್ಲೈಓವರ್ ಕೊನೆಗೂ ಉದ್ಘಾಟನೆಗೊಂಡಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ತೀವ್ರ ಟ್ರೋಲ್‍ಗೆ ಕಾರಣವಾಗಿತ್ತಲ್ಲದೆ ವಿಪಕ್ಷಗಳು ಸೇರಿದಂತೆ ಹಲವು ಸಂಘಟನೆಗಳು ಅಣುಕು ಉದ್ಘಾಟನೆ ಮಾಡಿದ್ದರು.

ದಶಕದ ಕಾಮಗಾರಿಯ ಇತಿಹಾಸ ಹೊಂದಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪಂಪ್‍ವೆಲ್ ಫ್ಲೈಓವರ್ ಕಾಮಗಾರಿ ಪೂರ್ಣಗೊಂಡು ಅಂತೂ ಇಂತು ಇಂದು ಪ್ರಾರಂಭವಾಯಿತು.
ಸಚಿವ ಶ್ರೀನಿವಾಸ ಪೂಜಾರಿ, ಸಂಸದ, ರಾಜ್ಯ ಬಿಜೆಪಿ ಅಧ್ಯಕ್ಷ ಕಟೀಲ್ ಅವರು ಬೆಳಗ್ಗೆ ಫ್ಲೈಓವರ್ ಉದ್ಘಾಟನೆ ಮಾಡಿದ್ದು, ಇಂದಿನಿಂದ ರಸ್ತೆ ಸಾರ್ವಜನಿಕ ವಾಹನಗಳಿಗೆ ಮುಕ್ತವಾಗಿದೆ.

2010ರಲ್ಲಿ ನವಯುಗ ಕಂಪನಿ ಗುತ್ತಿಗೆ ಪಡೆದು ಆರಂಭಿಸಿದ್ದ 600 ಮೀಟರ್ ಉದ್ದದ ಫ್ಲೈ ಓವರ್ ಕಾಮಗಾರಿ 2013ಕ್ಕೆ ಮುಕ್ತಾಯಗೊಳ್ಳಬೇಕಿತ್ತು. ಆದರೆ ಕಾಮಗಾರಿ 10 ವರ್ಷವಾದರೂ ಪೂರ್ಣಗೊಳ್ಳದೆ ಹತ್ತಾರು ಡೆಡ್‍ಲೈನ್‍ಗಳನ್ನು ಕಂಡಿದ್ದು, ನಿಧಾನಗತಿ ಕಾಮಗಾರಿಯಿಂದ ಫ್ಲೈ ಓವರ್ ಭಾರೀ ಸುದ್ದಿಯಾಗಿತ್ತು.

Facebook Comments