ಯರವಾಡ ಜೈಲಿನಿಂದ ಐವರು ಖೈದಿಗಳು ಪರಾರಿ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಜು.15- ಯರವಾಡದಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಜೈಲಿನಿಂದ ಐದು ಮಂದಿ ಖೈದಿಗಳು ಪರಾರಿಯಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಹೆಚ್ಚಾಗಿದ್ದು, ಈಗಾಗಲೇ ಯರವಾಡ ಜೈಲಿನಲ್ಲಿರುವ ಖೈದಿಗಳಿಗೆ ಸೋಂಕು ತಗುಲುವುದನ್ನು ತಪ್ಪಿಸಲು ಮಹಾರಾಷ್ಟ್ರ ಸರ್ಕಾರ ಹೊಸ ಖೈದಿಗಳಿಗೆ ತಾತ್ಕಾಲಿಕವಾಗಿ ಜೈಲನ್ನು ಸ್ಥಾಪಿಸಿತ್ತು.

ಈ ಜೈಲುಗಳಲ್ಲಿ ಇರಿಸಲಾಗಿದ್ದ ಐದು ಮಂದಿ ಖೈದಿಗಳು ಇಂದು ಬೆಳಗ್ಗೆ ಕಿಟಕಿಯ ಕಂಬಿ ಮುರಿದು ಪರಾರಿಯಾಗಿದ್ದಾರೆ.

ಪರಾರಿಯಾಗಿರುವ ಹೊಸ ಖೈದಿಗಳನ್ನು ಪತ್ತೆ ಹಚ್ಚಿ ಮತ್ತೆ ಕೃಷ್ಣ ಜನ್ಮಸ್ಥಳಕ್ಕೆ ರವಾನಿಸಲು ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ.

Facebook Comments

Sri Raghav

Admin