ನಾಯಂಡಹಳ್ಳಿ ವೃತ್ತದಿಂದ ಮೆಗಾಸಿಟಿ ಮಾಲ್‍ವರೆಗಿನ ವರ್ತುಲ ರಸ್ತೆಗೆ ಪುನೀತ್ ಹೆಸರು ಫೈನಲ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.29- ನಾಯಂಡಹಳ್ಳಿ ಜಂಕ್ಷನ್‍ನಿಂದ ಬನ್ನೇರುಘಟ್ಟ ರಸ್ತೆಯ ಮೆಗಾಸಿಟಿ ಮಾಲ್ ಜಂಕ್ಷನ್‍ವರೆಗಿನ ರಸ್ತೆಗೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಹೆಸರಿಡುವುದು ಫೈನಲ್ ಆಗಿದೆ.ಪುನೀತ್ ತಿಂಗಳ ತಿಥಿಯ ಕೊಡುಗೆಯಾಗಿ ಬಿಬಿಎಂಪಿ ಈ ತೀರ್ಮಾನ ಕೈಗೊಂಡಿದ್ದು, ಸಂಜೆ ವೇಳೆಗೆ ಅಕೃತ ಆದೇಶ ಹೊರಬೀಳುವ ಸಾಧ್ಯತೆಗಳಿವೆ.

ಪುನೀತ್ ಅವರ ಅಕಾಲಿಕ ನಿಧನದ ನಂತರ ಅವರ ಹೆಸರನ್ನು ಚಿರಸ್ಥಾಯಿಯನ್ನಾಗಿಸುವಂತೆ ಒತ್ತಾಯಿಸಿದ್ದ ಹಲವಾರು ಕನ್ನಡ ಪರ ಸಂಘಟನೆಗಳು ನಗರದ ಯಾವುದಾದರೂ ಒಂದು ರಸ್ತೆಗೆ ಪುನೀತ್ ಹೆಸರು ನಾಮಕರಣ ಮಾಡುವಂತೆ ಒತ್ತಾಯಿಸಿದ್ದವು.

ಪುನೀತ್ ಅಭಿಮಾನಿಗಳು ಹಾಗೂ ಕನ್ನಡ ಪರ ಸಂಘಟನೆಗಳ ಒತ್ತಾಸೆಗೆ ಮಣಿದಿರುವ ಬಿಬಿಎಂಪಿಯವರು ನಾಯಂಡಹಳ್ಳಿ ವೃತ್ತದಿಂದ 12 ಕಿ.ಮೀ ದೂರದ ಬನ್ನೇರುಘಟ್ಟದ ಮೆಗಾಸಿಟಿ ಮಾಲ್ ಜಂಕ್ಷನ್‍ವರೆಗಿನ ವರ್ತುಲ ರಸ್ತೆಗೆ ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಹೆಸರಿಡಲು ಸಮ್ಮತಿಸಿದೆ ಎಂದು ತಿಳಿದುಬಂದಿದೆ.

ಕಂಠೀರವ ಸ್ಟುಡಿಯೋದಿಂದ ನಾಯಂಡಹಳ್ಳಿ ವೃತ್ತದವರೆಗಿನ ರಸ್ತೆಗೆ ಡಾ.ರಾಜ್‍ಕುಮಾರ್ ಪುಣ್ಯಭೂಮಿ ರಸ್ತೆ ಎಂದು ನಾಮಕರಣ ಮಾಡಲಾಗಿದ್ದು, ಪುಣ್ಯಭೂಮಿ ರಸ್ತೆ ಎಂಡ್ ಆಗುವ ನಾಯಂಡಹಳ್ಳಿ ವೃತ್ತದಿಂದ ಬನ್ನೇರುಘಟ್ಟದವರೆಗಿನ ರಸ್ತೆ ಇದೀಗ ಪುನೀತ್‍ರಾಜ್‍ಕುಮಾರ್ ರಸ್ತೆಯಾಗಿ ಬದಲಾಗಲಿದೆ.

Facebook Comments

Sri Raghav

Admin