ಪವರ್ ಸ್ಟಾರ್ ಹೆಸರು ಹೇಳಿಕೊಂಡು ಪಂಗನಾಮ..!

ಈ ಸುದ್ದಿಯನ್ನು ಶೇರ್ ಮಾಡಿ

Appu--01

ಮೈಸೂರು, ಜು.12-ಪವರ್ ಸ್ಟಾರ್ ಪುನೀತ್‍ರಾಜ್‍ಕುಮಾರ್ ಹೆಸರು ಹೇಳಿಕೊಂಡು ವ್ಯಕ್ತಿಯೊಬ್ಬ ಲಕ್ಷಾಂತರ ರೂ. ಹಣ ವಸೂಲಿ ಮಾಡಿರುವ ಘಟನೆ ಟಿ.ನರಸೀಪುರದಲ್ಲಿ ಬೆಳಕಿಗೆ ಬಂದಿದೆ.  ಬೆಂಗಳೂರಿನ ಶ್ರೀನಿವಾಸ ನಗರದ ರವಿ (28) ಹಣ ಲಪಟಾಯಿಸಿರುವ ಆರೋಪಿ. ಮೂಲತಃ ಈತ ಬನ್ನೂರಿನ ಅಂಕನಹಳ್ಳಿ ವಾಸಿಯಾಗಿದ್ದು, ಕಳೆದ 20 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದನು. ಮೈಸೂರು ತಾಲೂಕಿನ ಕುಪ್ಯ ಗ್ರಾಮಕ್ಕೆ ಬಂದ ರವಿ ದೂರದ ಸಂಬಂಧಿಕರಾದ ರಮೇಶ್ ಎಂಬುವರ ಬಳಿ ತಾನು ಪುನೀತ್‍ರಾಜ್‍ಕುಮಾರ್ ಅವರ ಪಿಎ ಎಂದು ಹೇಳಿ ನಂಬಿಸಿ ತನ್ನ ಬಳಿ ಇರುವ ಆಭರಣಗಳನ್ನು ತೋರಿಸಿ ಹಣ ಪಡೆದು ವಂಚಿಸಿದ್ದಾನೆ.

ಇಷ್ಟೇ ಅಲ್ಲದೆ, ತನ್ನ ತಂಗಿ ಮದುವೆಗೆ ಹಣ ಬೇಕು ಎಂದು ಹೇಳಿಕೊಂಡು ಕೆಲವೆಡೆ ಹಣ ಪಡೆದಿರುವುದಲ್ಲದೆ, ರಮೇಶ್ ಪರಿಚಯಸ್ಥರಾದ ಗುರುಮೂರ್ತಿ ಎಂಬುವರ ಬಳಿ ತಾನು ಪುನೀತ್ ರಾಜ್‍ಕುಮಾರ್ ಕಾರು ಡ್ರೈವರ್ ಎಂದು ಹೇಳಿಕೊಂಡು 50 ಗ್ರಾಂ ತೂಕದ ಚಿನ್ನದ ಸರ ಪಡೆದುಕೊಂಡಿದ್ದನು.  ತಂಗಿ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿಯೂ ಪುನೀತ್‍ರಾಜ್‍ಕುಮಾರ್ ಹೆಸರನ್ನು ಹಾಕಿಸಿದ್ದ ರವಿ, ಕಳೆದ ಕೆಲವು ದಿನಗಳಿಂದ ಯಾರಿಗೂ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಮನೆಗೂ ಬಂದು ಆತನನ್ನು ಹುಡುಕಾಡಿದರೂ ಎಲ್ಲೂ ಆತ ಪತ್ತೆಯಾಗಿರಲಿಲ್ಲ. ರವಿ ಮೊಬೈಲ್ ಸಹ ಸ್ವಿಚ್ ಆಫ್ ಆಗಿದ್ದು, ಹಣ ಕೊಟ್ಟು ಕಳೆದುಕೊಂಡಿರುವವರು ಟಿ.ನರಸೀಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Facebook Comments

Sri Raghav

Admin