ಬಿಎಂಟಿಸಿ ರಾಯಭಾರಿಯಾದ ಪವರ್ ಸ್ಟಾರ್ ಪುನೀತ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.13-ತಮ್ಮ ಚಿತ್ರಗಳ ಮೂಲಕ ಸಮಾಜಕ್ಕೆ ಸಂದೇಶವನ್ನು ನೀಡುತ್ತಿದ್ದ ವರನಟ ಡಾ.ರಾಜ್‍ಕುಮಾರ್‍ರ ಮಕ್ಕಳು ಅಣ್ಣಾವ್ರ ಹಾದಿಯಲ್ಲೇ ಸಾಗುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಪುನೀತ್‍ರಾಜ್‍ಕುಮಾರ್ ಕೂಡ ತಮ್ಮ ಚಿತ್ರಗಳ ಮೂಲಕ ಸಮಾಜಕ್ಕೆ ಸಂದೇಶ ನೀಡಿರುವುದೇ ಅಲ್ಲದೆ ಅನೇಕ ಅಭಿಮಾನಿಗಳು ಹೊಂದಿದ್ದಾರೆ, ಅದಕ್ಕೆ ಅವರನ್ನು ಸರ್ಕಾರಗಳು ತಮ್ಮ ನೂತನ ಯೋಜನೆಗಳಿಗೆ ರಾಯಭಾರಿಯಾಗಿ ನೇಮಿಸಿಕೊಂಡ ಅನೇಕ ನಿದರ್ಶನಗಳಿವೆ.

ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಜಾಮ್ ನಿಯಂತ್ರಿಸುವ ಸಲುವಾಗಿ ಖಾಸಗಿ ವಾಹನಗಳನ್ನು ಬಿಟ್ಟು ಸರ್ಕಾರಿ ಬಸ್‍ಗಳನ್ನು ಆಶ್ರಯಿಸಿ ಎಂದು ಹೇಳುತ್ತಲೇ ಬಂದಿದ್ದಾರೆ, ಈಗ ಜನರನ್ನು ಪ್ರೇರೇಪಿಸುವ ಸಲುವಾಗಿ ಬಿಎಂಟಿಸಿಯು ಪವರ್‍ ಸ್ಟಾರ್ ಪುನೀತ್‍ರಾಜ್‍ಕುಮಾರ್ ಅವರನ್ನು ತಮ್ಮ ರಾಯಭಾರಿಯನ್ನಾಗಿ ಆಯ್ಕೆ ಆಗಿರುವುದರಿಂದ ಬಿಎಂಟಿಸಿ ಎಂಡಿ ಶಿಖಾ ಪುನೀತ್‍ರನ್ನು ಅಭಿನಂದಿಸಿದ್ದಾರೆ.

ಈ ಹಿಂದೆ ಕೂಡ ಪುನೀತ್ ಅವರು ಸರ್ಕಾರಿ ಇಲಾಖೆಗಳು ಜಾಗೃತಿ ಮೂಡಿಸುವ ಸಲುವಾಗಿ ಪವರ್‍ಸ್ಟಾರ್ ಪುನೀತ್‍ರಾಜ್‍ಕುಮಾರ್‍ರನ್ನು ರಾಯಭಾರಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. ಎಲ್‍ಇಡಿ ಬಲ್ಪ್ ಬಳಕೆಯನ್ನು ಉತ್ತೇಜಿಸಲು ಸಲುವಾಗಿ ಕೆಪಿಟಿಸಿಎಲ್ ಹಮ್ಮಿಕೊಂಡಿದ್ದ ಹೊಸಬೆಳಕು ಜಾಹಿರಾತಿಗೆ ಪುನೀತ್‍ರ ಪವರ್ ಅನ್ನು ಬಳಸಿಕೊಂಡಿದ್ದರು.ಇದರಲ್ಲಿ ರಮ್ಯಾ ಕೂಡ ಕಾಣಿಸಿಕೊಂಡಿದ್ದರು.

ಇಷ್ಟೇ ಅಲ್ಲದೆ ಕೆಎಂಎಫ್, ಶಿಕ್ಷಣವನ್ನು ಉತ್ತೇಜಿಸುವ ಸಲುವಾಗಿ ಆರ್‍ಟಿಇ ಜಾಹೀರಾತಿನಲ್ಲಿ, ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿಯೂ ಪುನೀತ್‍ರನ್ನು ರಾಯಭಾರಿಯನ್ನಾಗಿ ನೇಮಿಸಿಕ್ಳೊಲಾಗಿತ್ತು.

Facebook Comments