ನಾಳೆ ಪಂಜಾಬ್‍ನ ನೂತನ ಸಿಎಂ ಚೆನ್ನಿ ಸಂಪುಟದ ವಿಸ್ತರಣೆ

ಈ ಸುದ್ದಿಯನ್ನು ಶೇರ್ ಮಾಡಿ

ಅಮೃತಸರ,ಸೆ.25- ಪಂಜಾಬ್‍ನ ನೂತನ ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಚೆನ್ನಿ ನಾಳೆ ತಮ್ಮ ಸಂಪುಟದ ವಿಸ್ತರಣೆ ಮಾಡುತ್ತಿದ್ದು, ಸುಮಾರು 15 ಮಂದಿಗೆ ಅವಕಾಶ ಕಲ್ಪಿಸಲಿದ್ದಾರೆ. ನಿನ್ನೆ ತಡರಾತ್ರಿವರೆಗೂ ಎಐಸಿಸಿ ಮುಖಂಡರಾದ ರಾಹುಲ್‍ಗಾಂಧಿ, ಕೆ.ಸಿ.ವೇಣುಗೋಪಾಲ್, ಹರೀಶ್‍ಚೌದ್ರಿ, ಅಜಯ್‍ಮಖೇನ್ ಅವರೊಂದಿಗೆ ನಡೆದ ಸುದೀರ್ಘ ಚರ್ಚೆಯ ಬಳಿಕ ಸಂಪುಟ ವಿಸ್ತರಣೆಯ ನಿರ್ಧಾರ ಕೈಗೊಂಡ ಮುಖ್ಯಮಂತ್ರಿಯವರು, ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರನ್ನು ಭೇಟಿ ಮಾಡಿ ನಾಳೆ ಸಂಜೆ 4.30ಕ್ಕೆ 15 ಸಚಿವರಿಗೆ ಪ್ರಮಾಣವಚನ ಬೋಧಿಸುವಂತೆ ಮನವಿ ಮಾಡಿದ್ದಾರೆ.

ಪಕ್ಷದ ಮೂಲಗಳ ಪ್ರಕಾರ 7 ಮಂದಿ ಹೊಸಬರನ್ನು ಸೇರಿಸಿಕೊಳ್ಳಲಾಗುತ್ತಿದೆ. ಈ ಹಿಂದೆ ಅಮರೇಂದರ್‍ ಸಿಂಗ್ ಸಂಪುಟದಲ್ಲಿ ಆರೋಗ್ಯ ಸಚಿವರಾಗಿದ್ದ ಬಲ್ಬೀರ್‍ ಸಿಂಧು, ಕಂದಾಯ ಸಚಿವ ಗುರುಪ್ರಿತ್‍ಸಿಂಗ್ ಕಂಗರ್, ಕೈಗಾರಿಕಾ ಸಚಿವ ಸುಂದರ್‍ಶರ್ಮಾ ಅರೋರ, ಸಮಾಜ ಕಲ್ಯಾಣ ಸಚಿವ ಸದ್ದುಸಿಂಗ್ ಧರ್ಮೋಸ್ತ್, ಕ್ರೀಡಾ ಸಚಿವ ರಾಣಾಗುರ್ಮಿತ್ ಅವರನ್ನು ಕೈ ಬಿಡಲಾಗುತ್ತಿದೆ.

ಅಮರೆಂದರ್ ಸಿಂಗ್ ಸಂಪುಟದಲ್ಲಿ ಸಚಿವರಾಗಿ ಹಗರಣವೊಂದರಲ್ಲಿ ಸಿಲುಕಿ ರಾಜೀನಾಮೆ ನೀಡಿದ್ದ ರಾನಾಗುರ್ಜಿತ್‍ಸಿಂಗ್ ಅವರನ್ನು ಮರುಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ.

ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಕುಲ್ಜಿತ್‍ನಗ್ರಾ, ಶಾಸಕರಾದ ಅಮರೇಂದರ್‍ಸಿಂಗ್ ರಾಜಾ ಅವರುಗಳ ಆಯ್ಕೆಯ ಚರ್ಚೆ ನಡೆಯುತ್ತಿದೆ.
ಸಂಭವನೀಯ ಸಚಿವರ ಪಟ್ಟಿಯನ್ನು ಈಗಾಗಲೇ ರಾಜ್ಯಪಾಲರಿಗೆ ಸಲ್ಲಿಸಿದ್ದು, ಅದರಲ್ಲಿ ಬ್ರಹ್ಮಮೊಹಿಂದರ್, ಮನ್‍ಪ್ರೀತ್‍ಬಾದಲ್, ಸುಖ್ವಿಂದರ್ ಸರ್ಕಾರಿಯಾ, ತ್ರಿಪಟ್ ರಜೇಂದರ್‍ಸಿಂಗ್ ಬಜ್ವಾ, ವಿಜಯ್‍ಇಂದರ್ ಸಿಂಗ್ಲಾ, ಅರುಣ್‍ಚೌದ್ರಿ, ರಜಿಯಾಸುಲ್ತಾನಾ, ಭರತ್‍ಭೂಷಣ್ ಅಶು ಅವರು ಸಂಪುಟ ಸೇರುವ ನಿರೀಕ್ಷೆಗಳಿವೆ.

Facebook Comments