ಪಂಜಾಬ್ ಕಾಂಗ್ರೆಸ್ ಭಿನ್ನಮತ ನಿವಾರಣೆ ಆಖಾಡಕ್ಕಿಳಿದ AICC

ಈ ಸುದ್ದಿಯನ್ನು ಶೇರ್ ಮಾಡಿ

ಚಂಡಿಘಡ,ಸೆ.18-ಪಂಜಾಬ್ ಕಾಂಗ್ರೆಸ್‍ನಲ್ಲಿ ಉಲ್ಬಣಗೊಂಡಿರುವ ಭಿನ್ನಮತ ಶಮನಕ್ಕೆ ಎಐಸಿಸಿ ಮುಂದಾಗಿದೆ. ನಾಳೆ ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದ್ದು, ಎಲ್ಲರೂ ಸಭೆಯಲ್ಲಿ ಭಾಗವಹಿಸುವಂತೆ ಎಐಸಿಸಿ ಸೂಚನೆ ನೀಡಿದೆ.

ಪಂಜಾಬ್ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹರೀಶ್ ರಾವತ್ ಅವರು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವಜೋತ್ ಸಿಧು ನಡುವಿನ ಬಿಕ್ಕಟ್ಟು ಶಮನದ ಹೊಣೆ ಹೊತ್ತಿದ್ದಾರೆ.

ನಾಳಿನ ಸಭೆಗೆ ಪ್ರತಿಯೊಬ್ಬರೂ ತಪ್ಪದೆ ಹಾಜರಾಗಬೇಕು ಎಂದು ರಾವತ್ ಅವರು ರಾಹುಲ್‍ಗಾಂಧಿ, ಅಮರಿಂದರ್ ಸಿಂಗ್ ಹಾಗೂ ಸಿಧು ಅವರನ್ನು ಟ್ಯಾಗ್ ಮಾಡಿ ಟ್ವಿಟ್ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಬಹುತೇಕ ಶಾಸಕರು ಸಿಧು ಬೆನ್ನಿಗೆ ನಿಂತಿರುವ ಹಿನ್ನಲೆಯಲ್ಲಿ ಪಂಜಾಬ್ ಕಾಂಗ್ರೆಸ್‍ನಲ್ಲಿ ಭಿನ್ನಮತ ತೀವ್ರಗೊಂಡಿರುವುದರಿಂದ ಈ ಸಭೆ ಕರೆಯಲಾಗಿದೆ.

ಕಾಂಗ್ರೆಸ್‍ನಲ್ಲಿ ಬಿಕ್ಕಟ್ಟು ಶಮನಗೊಳ್ಳದಿದ್ದರೆ ಮುಂದೆ ನಡೆಯಲಿರುವ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನೆಡೆಯಾಗಬಾರದು ಎಂಬ ಉದ್ದೇಶದಿಂದ ಎಐಸಿಸಿ ಅಖಾಡಕ್ಕೆ ಧುಮುಕಿದೆ.

Facebook Comments