ಸಿಎಎ ವಿರುದ್ಧ ಪಂಜಾಬ್ ವಿಧಾನಸಭೆ ನಿರ್ಣಯ ಮಂಡನೆ

ಈ ಸುದ್ದಿಯನ್ನು ಶೇರ್ ಮಾಡಿ

ಛತ್ತೀಸ್‍ಗಡ, ಜ.17- ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಸಿಎಎ ರದ್ದುಗೊಳಿಸುವಂತೆ ಒತ್ತಾಯಿಸಿ ಪಂಜಾಬ್ ವಿಧಾನಸಭೆಯಲ್ಲಿಂದು ನಿರ್ಣಯವನ್ನು ಮಂಡಿಸಲಾಗಿದೆ. ಸಚಿವ ಭರಮ್‍ಮಹೇಂದ್ರ ಅವರು, ಪಂಜಾಬ್ ವಿಧಾನಸಭೆಯ ಅಧಿವೇಶನದ 2ನೇ ದಿನವಾದ ಇಂದು ಕೇಂದ್ರದ ಸಿಎಎ ವಿರುದ್ಧ ಗೊತ್ತುವಳಿ ಮಂಡಿಸಿದರು.

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ದೇಶದ ವಿವಿಧೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಹಲವೆಡೆ ಹಿಂಸಾತ್ಮಕ ಪ್ರತಿಭಟನೆ ನಡೆದಿದೆ. ಪಂಜಾಬ್‍ನಲ್ಲೂ ಸಹ ಇದನ್ನು ವಿರೋಧಿಸಿ ಅನೇಕರು ಪ್ರತಿಭಟನೆ ನಡೆಸಿದ್ದಾರೆ ಎಂದು ಸಚಿವರು ನಿರ್ಣಯವನ್ನು ಓದಿದರು.

ಮುಖ್ಯಮಂತ್ರಿ ಅಮರೇಂದರ್‍ಸಿಂಗ್ ನೇತೃತ್ವದ ಆಡಳಿತಾರೂಢ ಕಾಂಗ್ರೆಸ್, ಈಗ ಸಿಎಎ ವಿಷಯದಲ್ಲಿ ಕೇಂದ್ರದ ವಿರುದ್ಧ ಶಾಸಕಾಂಗ ಮತ್ತು ನ್ಯಾಯಾಂಗ ಸಮರಕ್ಕೆ ಸಜ್ಜಾಗಿದೆ.
ಈಗಾಗಲೇ ಕೇರಳ ವಿಧಾನಸಭೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಗೊತ್ತುವಳಿ ಮಂಡಿಸಿ ಅನುಮೋದನೆ ಪಡೆದಿದೆ.

Facebook Comments