ಪಂಜಾಬ್ ಕಳ್ಳಭಟ್ಟಿ ದುರಂತದಲ್ಲಿ ಸತ್ತವರ ಸಂಖ್ಯೆ 38ಕ್ಕೇರಿಕೆ, 8 ಮಂದಿ ಅರೆಸ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

ಅಮೃತ್‍ಸರ, ಆ.1-ಮಾದಕ ವಸ್ತು ದಂಧೆಯಲ್ಲಿ ಕುಖ್ಯಾತಿ ಪಡೆದಿರುವ ಪಂಬಾಬ್‍ನ ಮೂರು ಜಿಲ್ಲೆಗಳಲ್ಲಿ ಸಂಭವಿಸಿದ ಕಳ್ಳಭಟ್ಟಿ ದುರಂತಗಳಲ್ಲಿ ಸತ್ತವರ ಸಂಖ್ಯೆ 38ಕ್ಕೇರಿದೆ.

ಈ ದುರ್ಘಟನೆಗಳಲ್ಲಿ ಅನೇಕರು ತೀವ್ರ ಅಸ್ವಸ್ಥರಾಗಿದ್ದು, ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ಅಮೃತ್‍ಸರ, ತರ್ನ್ ತರಣ್ ಮತ್ತು ಬಟಾಲಾ ಜಿಲ್ಲೆಗಳಲ್ಲಿ ವಿಷಪೂರಿತ ಮದ್ಯ ಸೇವನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಈವರೆಗೆ 8 ಜನರನ್ನು ಬಂಧಿಸಲಾಗಿದೆ.

ಈ ದುರ್ಘಟನೆ ಬಗ್ಗೆ ಪಂಬಾಜ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದಾರೆ. ಈ ಮೂರು ಜಿಲ್ಲೆಗಳಲ್ಲಿ ಕಳ್ಳಭಟ್ಟಿ ಸೇವನೆಯಿಂದ ನಿನ್ನೆ 21 ಮಂದಿ ಸಾವಿಗೀಡಾಗಿದ್ದರು. ನಿನ್ನೆ ಸಂಜೆಯಿಂದ ಸತ್ತವರ ಸಂಖ್ಯೆ 38ಕ್ಕೇರಿದೆ.

ವಿಷಪೂರಿತ ಮದ್ಯ ಸೇವಿಸಿದ ಇನ್ನೂ ಅನೇಕರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೆಲವರ ಸ್ಥಿತಿ ಶೋಚನೀಯವಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

ಈ ದುರ್ಘಟನೆ ನಡೆದ ನಂತರ ಈ ಮೂರು ಜಿಲ್ಲೆಗಳ 40ಕ್ಕೂ ಹೆಚ್ಚು ಸ್ಥಳಗಳಲ್ಲಿ ಪೊಲೀಸರು ದಾಳಿ ನಡೆಸಿ ಕಳ್ಳಭಟ್ಟಿ ಖದೀಮ ಬಲ್ವಿಂದರ್ ಸಿಂಗ್ ಸೇರಿದಂತೆ 8 ಜನರನ್ನು ಬಂಧಿಸಿ ಭಾರೀ ಪ್ರಮಾಣದ ಕಳ್ಳಭಟ್ಟಿ ವಶಪಡಿಸಿಕೊಂಡಿದ್ದಾರೆ.

ಈ ದುರಂತದ ಬಗ್ಗೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿರುವ ಅವರು ವಿಭಾಗೀಯ ಆಯುಕ್ತರಿಂದ ಈ ಘಟನೆ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದಾರೆ.

Facebook Comments

Sri Raghav

Admin