ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ ಶಿಪ್ ಕಿರೀಟ ಮುಡಿಗೇರಿಸಿಕೊಂಡು ಇತಿಹಾಸ ಬರೆದ ಪಿ.ವಿ.ಸಿಂಧು..!

ಈ ಸುದ್ದಿಯನ್ನು ಶೇರ್ ಮಾಡಿ

ಬಾಸೆಲ್ : ಭಾರತದ ಶೇಟ್ಲರ್ ಪಿ.ವಿ.ಸಿಂಧು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ಗೆ ಮುತ್ತಿಟ್ಟಿದ್ದಾರೆ. ಪಿ.ವಿ.ಸಿಂಧು ಅವರು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ ಪ್ರಶಸ್ತಿ ಗೆದ್ದ ಭಾರತದ ಮೊದಲ ಆಟಗಾರ್ತಿ ಎಂಬ ದಾಖಲೆಯನ್ನು ಬರೆದಿದ್ದಾರೆ.

ಈ ಹಿಂದೆ ಎರಡು ಬಾರಿ ಫೈನಲ್ ಪ್ರವೇಶ ಮಾಡಿದ್ದರು. ಆದರೆ ಪ್ರಶಸ್ತಿಯಿಂದ ವಂಚಿತರಾಗಿದ್ದ ಅವರು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದರು. ಇಂದು ನಡೆದ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಜಪಾನ್ ನ ನೋಜೊಮಿ ಓಕುಹರಾ ಅವರನ್ನು 21-7, 21-7ರ ಅಂತರದಿಂದ ಮಣಿಸುವ ಮೂಲಕ ಇತಿಹಾಸ ಪುಟ ಸೇರಿದ್ದಾರೆ.

ಈ ಜೋಡಿ ತಮ್ಮ ಭರ್ಜರಿ ಆಟದಿಂದಲೇ ಅಭಿಮಾನಿಗಳ ಮನ ಗೆದ್ದಿದ್ದು, 2017ರಲ್ಲಿ ಇದೇ ಟೂರ್ನಿಯ ಫೈನಲ್ ನಲ್ಲಿ ಸಿಂಧು ಅವರನ್ನು ಮಣಿಸಿ ಒಕುಹರಾ ಪ್ರಶಸ್ತಿ ಎತ್ತಿ ಸಂಭ್ರಮಿಸಿದ್ದರು. ಕಳೆದ ವರ್ಷ ಸಿಂಧು ಅವರು ಸ್ಪೇನ್ ಸ್ಟಾರ್ ಆಟಗಾರ್ತಿ ಕರೋಲಿನಾ ಮರಿನ್ ವಿರುದ್ಧ ಸೋತು ನಿರಾಸೆಯನ್ನು ಅನುಭವಿಸಿದ್ದರು.

ಈ ಬಾರಿ ಸತತ ಮೂರನೇ ಬಾರಿಗೆ ವಿಶ್ವ ಚಾಂಪಿಯನ್ ಶಿಪ್ ಫೈನಲ್ ಪ್ರವೇಶಿಸಿದ್ದ ಸಿಂಧು, ಚೊಚ್ಚಲ ಬಂಗಾರದ ಕನಸು ನನಸು ಮಾಡಿಕೊಂಡಿದ್ದಾರೆ.

ಈ ಜೋಡಿ ತಮ್ಮ ಭರ್ಜರಿ ಆಟದಿಂದಲೇ ಅಭಿಮಾನಿಗಳ ಮನ ಗೆದ್ದಿದ್ದು, 2017ರಲ್ಲಿ ಇದೇ ಟೂರ್ನಿಯ ಫೈನಲ್ ನಲ್ಲಿ ಸಿಂಧು ಅವರನ್ನು ಮಣಿಸಿ ಒಕುಹರಾ ಪ್ರಶಸ್ತಿ ಎತ್ತಿ ಸಂಭ್ರಮಿಸಿದ್ದರು.

ಭಾರತದ ದಂತಕತೆ ಪ್ರಕಾಶ್ ಪಡುಕೋಣೆ ಅವರು 1983ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಈ ಪ್ರಶಸ್ತಿ ಗೆದ್ದ ಭಾರತದ ಮೊದಲ ಆಟಗಾರ ಎನಿಸಿದ್ದರು. ಸದ್ಯ 26 ವರ್ಷಗಳ ನಂತರ ಭಾರತಕ್ಕೆ ಒಲಿದ ಮೊದಲ ಪದಕ ಇದಾಗಿದೆ.

# ತಾಯಿಗೆ ಜನ್ಮದಿನದ ಗಿಫ್ಟ್ :
ಇವತ್ತು ನನ್ನ ತಾಯಿಯ ಜನ್ಮದಿನ. ಹಾಗಾಗಿ ನಾನು ಈ ಸ್ವರ್ಣ ಪದಕವನ್ನು ತಾಯಿಗೆ ಅರ್ಪಿಸುತ್ತಿದ್ದೇನೆ’ – ಎಂದು ಸಿಂಧು ಅವರು ತನ್ನ ಈ ಐತಿಹಾಸಿಕ ಗೆಲುವಿನ ಬಳಿಕ ಹೆಳಿದರು.

ಇನ್ನು ತನ್ನ ಈ ಗೆಲುವಿನ ಹಿಂದನ ರೂವಾರಿ ತನ್ನ ತರಬೇತುದಾರ ಪುಲ್ಲೇಲ ಗೋಪಿಚಂದ್ ಅವರ ಶ್ರಮವನ್ನು ನೆನಪಿಸಿಕೊಳ್ಳಲು ಸಿಂಧು ಮರೆಯಲಿಲ್ಲ. ಗೋಪಿಚಂದ್ ಮತ್ತು ತನ್ನ ಬೆಂಬಲ ಸಿಬ್ಬಂದಿಗಳಿಗೂ ಸಹ ಸಿಂಧು ಕೃತಜ್ಞತೆ ಸಲ್ಲಿಸಿದ್ದಾರೆ.

Facebook Comments

Sri Raghav

Admin