ಬ್ಯಾಡ್ಮಿಂಟನ್ : 16 ಸುತ್ತಿಗೆ ಪಿ.ವಿ.ಸಿಂಧು ಲಗ್ಗೆ

ಈ ಸುದ್ದಿಯನ್ನು ಶೇರ್ ಮಾಡಿ

ಟೋಕಿಯೋ, ಜು. 28- ಪದಕ ಗೆಲ್ಲುವ ಭರವಸೆ ಮೂಡಿಸಿರುವ ಭಾರತದ ಬ್ಯಾಡ್ಮಿಂಟನ್‍ನ ಮಹಾತಾರೆ ಪಿ.ವಿ.ಸಿಂಧು ಅವರು ತಮ್ಮ ಗೆಲುವಿನ ಅಭಿಯಾನವನ್ನು ಮುಂದುವರೆಸುವ ಮೂಲಕ ರೌಂಡ್ 16ಕ್ಕೆ ಲಗ್ಗೆ ಇಟ್ಟಿದ್ದಾರೆ. ತಮ್ಮ ಆರಂಭಿಕ ಪಂದ್ಯದಲ್ಲೇ ಇಸ್ರೇಲ್‍ನ ಆಟಗಾರ್ತಿ ಪುಲಿಕಪೆರ್ವಾಪೋ ವಿರುದ್ಧ ಗೆದ್ದು ಶುಭಾರಂಭ ಮಾಡಿದ್ದ ಪಿ.ವಿ.ಸಿಂಧು ಇಂದು ತಾವು ಎದುರಿಸಿದ ಎರಡನೇ ಪಂದ್ಯದಲ್ಲಿ ಹಾಂಕ್‍ಗಾಂಗ್‍ನ ಆಟಗಾರ್ತಿ ಚ್ಯುಂಗ್ ಗಾನ್ ಯಿ ವಿರುದ್ಧ ಗೆಲುವು ಸಾಧಿಸಿದ್ದಾರೆ.

ಮೊದಲ ಸುತ್ತಿನಿಂದಲೂ ಆಕ್ರಮಣಕಾರಿ ಆಟ ಪ್ರದರ್ಶಿಸಿ ಗೆಲುವಿನ ಸೂಚನೆ ನೀಡಿದ ಪಿ.ವಿ.ಸಿಂಧು 21-9 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿದರು. ಎರಡನೇ ಸುತ್ತಿನಲ್ಲಿ ಮತ್ತೆ ಹೋರಾಟದ ಹಾದಿಗೆ ಮರಳಿದ ಚ್ಯುಂಗ್ ಗಾನ್ ಯಿ ಸಿಂಧುಗೆ ಭಾರೀ ಪೈಪೋಟಿ ನೀಡಿದರು.

ಒಂದು ಹಂತದಲ್ಲಿ 15-14ರ ಅಂಕ ಗಳಿಸಿದ್ದ ಸಿಂಧು ನಂತರ ತಮ್ಮ ತೀವ್ರ ಹೋರಾಟದಿಂದಾಗಿ ಚ್ಯುಂಗ್ ವಿರುದ್ಧ 21-16 ರ ಅಂತರದಿಂದ ಗೆಲುವು ಕಾಣುವ ಮೂಲಕ 16ರ ಸುತ್ತಿಗೆ ಲಗ್ಗೆ ಇಟ್ಟಿz್ದÁರೆ.

Facebook Comments