ಬಿಡಬ್ಲ್ಯೂಎಫ್ ವಲ್ರ್ಡ್ ಟೂರ್ ಫೈನಲ್ಸ್ ನಲ್ಲಿ ಸಿಂಧುಗೆ ಸೋಲು

ಈ ಸುದ್ದಿಯನ್ನು ಶೇರ್ ಮಾಡಿ

ಬಾಲಿ, ಡಿ.5- ಫೈನಲ್ಸ್‍ನಲ್ಲಿ ಸೋಲುವ ಪ್ರವತ್ತಿಯನ್ನು ಮುಂದುವರೆಸಿರುವ ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಅವರು ಇಂದಿಲ್ಲಿ ನಡೆದ ಬಿಡಬ್ಲ್ಯೂಎಫ್ ವಲ್ರ್ಡ್ ಟೂರ್ ಫೈನಲ್ಸ್‍ನ ಅಂತಿಮ ಪಂದ್ಯದಲ್ಲೂ ಸೋಲುವ ಮೂಲಕ ರನ್ನರ್‍ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದ್ದಾರೆ.

2018ರಲ್ಲಿ ನಡೆದ ಬಿಡಬ್ಲ್ಯುಎಫ್ ವಲ್ರ್ಡ್ ಟ್ರೂರ್ ಫೈನಲ್ಸ್‍ನಲ್ಲಿ ಚಾಂಪಿಯನ್ ಆದ ನಂತರ ಸಿಂಧು ಅವರು ಈ ಸರಣಿಯಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ.

ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ್ತಿಯಾಗಿ ಸಿಂಧು ಅವರು ಬಿಂಬಿಸಿಕೊಂಡಿದ್ದರಾದರೂ ಫೈನಲ್ಸ್‍ನಲ್ಲಿ 2 ಬಾರಿ ಒಲಿಂಪಿಕ್ಸ್ ವಿಜೇತೆಯಾಗಿರುವ ಸಿಂಧು ಅವರು ಕೊರಿಯಾದ 19 ವರ್ಷದ ಕೊಯಿನ್ ಆನ್ ಸಿ ಯುಂಗ್ ವಿರುದ್ಧ 16-21, 12-21 ನೇರ ಸೆಟ್‍ಗಳಿಂದ ಸೋಲು ಕಾಣುವ ಮೂಲಕ ನಿರಾಸೆ ಮೂಡಿಸಿದರು.

2018ರಲ್ಲಿ ಪಿ.ವಿ.ಸಿಂಧು ಅವರು ಜಪಾನ್‍ನ ನೊಜೊಮಿ ಒಕುಹರಾ ವಿರುದ್ಧ 21-19, 21-17 ನೇರ ಸೆಟ್‍ಗಳ ಮೂಲಕ ಗೆಲುವು ಸಾಸುವ ಮೂಲಕ ಬಿಡಬ್ಲ್ಯುಎಫ್ ವಲ್ರ್ಡ್ ಟೂರ್ ಫೈನಲ್ಸ್‍ನಲ್ಲಿ ಗೆಲುವು ಸಾಸಿದ್ದರು. ಆದರೆ ನಂತರ ಸರಣಿಗಳಲ್ಲಿ ಅವರು ಚಾಂಪಿಯನ್ ಆಗಲು ಸಾಧ್ಯವಾಗಿಲ್ಲ.

Facebook Comments