ಬ್ಯಾಡ್ಮಿಂಟನ್ ತಾರೆ ಸಿಂಧುಗೆ ವಿಜಯ

ಈ ಸುದ್ದಿಯನ್ನು ಶೇರ್ ಮಾಡಿ

ಒಡೆನ್ಸ್, ಅ.20- ಡೆನ್ಮಾರ್ಕ್ ಓಪನ್ ಮಹಿಳಾ ಸಿಂಗಲ್ಸ್ನ ಮೊದಲ ಪಂದ್ಯದಲ್ಲೇ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ವಿಜಯ ಗಳಿಸಿದ್ದಾರೆ.
ಟರ್ಕಿಯ ನೆಸ್ಲಿಹನ್ ಯಿಗಿಟ್ರ ಸವಾಲನ್ನು ಎದುರಿಸಿದ ಭಾರತದ ಹೆಮ್ಮೆಯ ಪುತ್ರಿ ಪಿ.ವಿ.ಸಿಂಧು ಅವರು 21-12, 21-10 ನೇರ ಸೆಟ್ಗಳಿಂದ ಗೆಲುವು ಸಾಸಿದ್ದರು, ಟೊಕಿಯೊ ಒಲಿಂಪಿಕ್ಸ್ನಲ್ಲೂ ಕೂಡ ಸಿಂಧು ಅವರು ನೇರ ಸೆಟ್ಗಳಿಂದಲೇ ಗಮನ ಸೆಳೆದಿದ್ದರಲ್ಲದೆ ಸೆಮಿಫೈನಲ್ನಲ್ಲೂ ನೇರ ಸೆಟ್ಗಳಿಂದ ಸೋಲು ಕಂಡು ಫೈನಲ್ಗೇರುವಲ್ಲಿ ಎಡವಿದ್ದರು.

ವಿಶ್ವದ 4ನೆ ಶ್ರೇಯಾಂಕಿತ ಆಟಗಾರ್ತಿ ಪಿ.ವಿ.ಸಿಂಧು ತಮ್ಮ ಎರಡನೇ ಸುತ್ತಿನಲ್ಲಿ ಥಾಯ್ಲೆಂಡ್ನ ಬುಸಾನನ್ ಒಂಗ್ಬಾಮ್ರುಂಗ್ಫಾನ್ರ ವಿರುದ್ಧ ಸೆಣಸಲಿದ್ದಾರೆ. ನಡೆಸಲಿದ್ದಾರೆ.

Facebook Comments