ಐತಿಹಾಸಿಕ ಟೆಸ್ಟ್ ಗೆದ್ದು ವಾಪಸ್ಸಾದ ಟೀಮ್ ಇಂಡಿಯಾ ಆಟಗಾರರಿಗೆ ಕ್ವಾರಂಟೈನ್

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಜ. 21- ಆಸ್ಟ್ರೇಲಿಯಾ ನೆಲದಲ್ಲೇ ಕೆಚ್ಚೆದೆಯ ಹೋರಾಟ ಪ್ರದರ್ಶಿಸಿ ಐತಿಹಾಸಿಕ ಗೆಲುವು ಕಂಡ ನಾಯಕ ಎಂಬ ಖ್ಯಾತಿಗೆ ಪಾತ್ರರಾಗಿರುವ ಅಜೆಂಕ್ಯಾರಹಾನೆ ಇಂದು ಸ್ವದೇಶಕ್ಕೆ ಆಗಮಿಸಿದ ಬೆನ್ನಲ್ಲೇ 7 ದಿನಗಳ ಕಾಲ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ. ಇಂದು ಬೆಳಗ್ಗೆ ಮುಂಬೈನ ಛತ್ರಪತಿ ಶಿವಾಜಿ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಭಾರತ ತಂಡದ ನಾಯಕ ಅಜೆಂಕ್ಯಾರಹಾನೆ, ಉಪನಾಯಕ ರೋಹಿತ್‍ಶರ್ಮಾ, ಯುವ ಆಟಗಾರರಾದ ರೋಹಿತ್ ಶರ್ಮಾ, ಶಾರ್ದೂಲ್ ಠಾಕೂರ್, ಪೃಥ್ವಿಶಾ ಹಾಗೂ ತರಬೇತುದಾರ ರವಿಶಾಸ್ತ್ರಿ ಅವರನ್ನು ವಿಮಾನ ಅಧಿಕಾರಿಗಳು ಆರ್‍ಟಿ ಮತ್ತು ಪಿಸಿಆರ್ ಪರೀಕ್ಷೆ ಮಾಡಲಾಗಿದ್ದು ಅವರುಗಳಿಗೆ 7 ದಿನಗಳ ಕಾಲ ಹೋಂಕ್ವಾರಂಟೈನ್‍ಗೆ ಒಳಗಾಗಲು ಸೂಚಿಸಲಾಗಿದೆ ಎಂದು ಮುಂಬೈ ಮಹಾನಗರ ಪಾಲಿಕೆಯ ಅಧಿಕಾರಿ ಇಕ್ಬಾಲ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

# ಅದ್ಧೂರಿ ಸ್ವಾಗತ:
ಆಸ್ಟ್ರೇಲಿಯಾ ನೆಲದಲ್ಲಿ ಗಾಯಾಳುಗಳ ಸಮಸ್ಯೆಯ ಸವಾಲನ್ನು ಯಶಸ್ವಿಯಾಗಿ ಎದುರಿಸಿದ ಭಾರತ ತಂಡದ ನಾಯಕ ಹಾಗೂ ಉಪನಾಯಕ ರೋಹಿತ್ ಶರ್ಮಾ ಅವರು ಕೂಡ ಮುಂಬೈ ಆಟಗಾರರಾಗಿದ್ದರಿಂದ ಇಂದು ಟೀಂ ಇಂಡಿಯಾ ಆಟಗಾರರಿಗೆ ಅದ್ಧೂರಿ ಸ್ವಾಗತವನ್ನು ಕೋರಲಾಯಿತು.

# ಇಂಗ್ಲೆಂಡ್ ಸರಣಿಗೆ ತಯಾರಿ:
ಆಸ್ಟ್ರೇಲಿಯಾ ನೆಲದಲ್ಲಿ ಅದ್ಭುತ ಪ್ರದರ್ಶನ ನೀಡಿ ಸರಣಿಯನ್ನು 2-1 ರಿಂದ ವಶಪಡಿಸಿಕೊಳ್ಳುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದ್ದು ಈಗ ಫೆಬ್ರವರಿಯಿಂದ ಆರಂಭ ವಾಗಲಿರುವ ಇಂಗ್ಲೆಂಡ್ ಸರಣಿಗೆ ಪೂರ್ವ ತಯಾರಿ ನಡೆಸಲು ಆಟಗಾರರು ನಿರತ ರಾಗಲು ಮುಂದಾಗಿದ್ದು ಕ್ವಾರಂಟೈನ್ ಅವಧಿ ಮುಗಿದ ನಂತರ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಲಿ ದ್ದಾರೆ.

Facebook Comments