ಕ್ವಾರಂಟೈನ್‍ನಲ್ಲಿರುವವರ ಗೋಳಾಟದ ಕಥೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 28- ಕೊರೊನಾ ನಿಯಂತ್ರಣ ಸಂಬಂಧ ಅನ್ಯ ರಾಜ್ಯಗಳಿಂದ ಬಂದವರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ. ಆದರೆ ಅಲ್ಲಿ ಸರಿಯಾದ ವ್ಯವಸ್ಥೆಗಳಿಲ್ಲದೆ ಪರಿತಪಿಸುವಂತಾಗಿದೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ಮೈಸೂರು, ಬೆಳಗಾವಿ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಇತರೆಡೆಗಳಲ್ಲಿ ಕ್ವಾರಂಟೈನ್‍ನಲ್ಲಿ ಇರಿಸಿರುವವರಿಗೆ ಸರ್ಕಾರದ ಅಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಸ್ವಚ್ಛತೆ ಮಾಹಿತಿಗಳು ಕೂಡ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ದೆಹಲಿಯಿಂದ ಬಂದು ಬೆಂಗಳೂರಿನ ಹೊಟೇಲೊಂದರಲ್ಲಿ ತಂಗಿರುವ ವೈದ್ಯೆಯೊಬ್ಬರು ತಮಗಾಗುತ್ತಿರುವ ಸಂಕಷ್ಟವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದು , ಆರೋಗ್ಯ ಇಲಾಖೆ ಯಾವ ರೀತಿ ಕೆಲಸ ಮಾಡುತ್ತಿದೆ ಎಂಬುದೇ ಈಗ ಪ್ರಶ್ನೆಯಾಗಿದೆ.

ನಾನು ವೈದ್ಯಳಾಗಿದ್ದು, ಪ್ರಸ್ತುತ ಕೊರೊನಾ ಸಂಕಷ್ಟವನ್ನು ಅರಿತಿದ್ದೇನೆ. ನಿಯಮಗಳನ್ನು ಪಾಲಿಸಲು ಸಹಮತ ವ್ಯಕ್ತಪಡಿಸಿ ಹೊಟೇಲ್‍ನಲ್ಲಿ ಇದ್ದೇನೆ. ನನ್ನ ಜತೆಯಲ್ಲಿ ಸುಮಾರು 50 ರಿಂದ 60 ಮಂದಿ ಇದ್ದಾರೆ.

ಇವರೆಲ್ಲರಿಗೂ ಆರೋಗ್ಯ ತಪಾಸಣೆಯಾಗಲಿ ಅಥವಾ ಮಾಹಿತಿ ನೀಡಲು ಯಾವ ವೈದ್ಯರ ತಂಡವಾಗಲಿ ಅಕಾರಿಗಳು ಬರುತ್ತಿಲ್ಲ. ಯಾರು ರೂಂನಲ್ಲಿ ಕಾಲ ಕಳೆಯುತ್ತಿದ್ದೇನೆ. ಯಾರು ಕ್ಯಾರೆ ಎನ್ನುತ್ತಿಲ್ಲ ಎಂದು ದೂರಿದ್ದಾರೆ.

ಇನ್ನು ಚಿಕ್ಕಮಗಳೂರಿನಲ್ಲಿ ಕ್ವಾರಂಟೈನ್ ಅವ ಮುಗಿದರೂಕೂಡ ನಮ್ಮನ್ನು ಬಿಡುತ್ತಿಲ್ಲ. ಕೊರೊನಾ ಪರೀಕ್ಷೆ ಮಾಡಿ ಎಂದು ಕೇಳಿಕೊಂಡರು ಅದಕ್ಕೆ ಯಾರು ಕೇಳುತ್ತಿಲ್ಲ. ದೂರವಾಣಿ ಕರೆ ಮಾಡಿದರೂ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಹೀಗೆ ಆದರೆ ಏನು ಮಾಡುವುದು ಎಂದು ನಮ್ಮ ನೋವು ತೋಡಿಕೊಂಡಿದ್ದಾರೆ.

ಇನ್ನು ಉತ್ತರ ಕರ್ನಾಟಕದಲ್ಲಿರುವವರ ಕಥೆಯೇ ಬೇರೆ. ನಮ್ಮ ಖರ್ಚಿನಲ್ಲೇ ಕ್ವಾರಂಟೈನ್‍ನಲ್ಲಿಯೇ ಇದ್ದೇವೆ. ಆದರೆ ಸ್ವಚ್ಛತೆಯನ್ನು ಪಾಲಿಸುತ್ತಿಲ್ಲ.ಐದಾರು ಮಂದಿಗೆ ಒಂದೇ ಸೋಪು ನೀಡಲಾಗುತ್ತಿದೆ.

ಆಗಾಗ ಕೈ ತೊಳೆಯಲು ಸ್ಯಾನಿಟೈಸರ್‍ಗಳನ್ನು ಬಳಸಲು ಕೂಡ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮನ್ನು ನೇರವಾಗಿ ಇಲ್ಲಿಗೆ ತಂದು ಕುರಿಗಳಂತೆ ತುಂಬಿದ್ದಾರೆ. ಏನು ಮಾಡುವುದೋ ತಿಳಿಯುತ್ತಿಲ್ಲ ಎಂದು ಹೇಳುತ್ತಿದ್ದಾರೆ.

ಕ್ವಾರಂಟೈನ್‍ನಿಂದ ಹೊರಗೆ ಸ್ವಯಂ ಪ್ರೇರಣೆಯಿಂದ ಬರೋಣ ಎಂದು ಹೇಳಿದರೂ ಕೂಡ ಹೊಟೇಲ್‍ನ ಸಿಬ್ಬಂದಿಗಳು ಬಿಡುತ್ತಿಲ್ಲ. ಪೊಲೀಸ್ ಕೇಸ್‍ನ ಭಯ ಹುಟ್ಟಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ನಡುವೆ ಬೆಂಗಳೂರಿನ ಕೆಲ ಕ್ವಾರಂಟೈನ್ ಕೇಂದ್ರಗಳಿಗೆ ಭೇಟಿ ನೀಡಿರುವ ಬಿಬಿಎಂಪಿ ಆಯುಕ್ತ ಅನಿಲ್‍ಕುಮಾರ್ ಅವರು ಅಲ್ಲಿರುವವರಿಗೆ ಧೈರ್ಯ ತುಂಬಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಕ್ವಾರಂಟೈನ್ ಅವ ಮುಗಿದವರನ್ನು ಪರೀಕ್ಷೆ ಮಾಡಿ ಬಿಡುಗಡೆ ಮಾಡುತ್ತೇವೆ. ಅಕಾರಿಗಳಿಗೆ ಈ ಕುರಿತು ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

Facebook Comments

Sri Raghav

Admin