ಬಾಂಗ್ಲಾ ಕೋಮುಗಲಭೆಗೆ ಕಾರಣವಾದ ಆರೋಪಿ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ.22- ಬಾಂಗ್ಲಾದೇಶದಲ್ಲಿ ಕೋಮು ಗಲಭೆಗೆ ಕಾರಣವಾಗಿದ್ದ ಪ್ರಮುಖ ಆರೋಪಿಯನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ.
ಬಾಂಗ್ಲಾದೇಶದ ಕೊಮಿಲ್ಲಾ ಪ್ರದೇಶದ ನಾನುವ ದಿಘೀರ್ ದುರ್ಘಾ ಪೂಜೆ ಪೆಂಡಾಲ್‍ನಲ್ಲಿ ಆಂಜನೇಯ ಪ್ರತಿಮೆಯ ಹಿಂದೆ ಕುರಾನ್ ಅನ್ನು ಇಟ್ಟಿದ್ದ ಇಕ್ಬಾಲ್ ಹುಸೇನ್ (35)ನನ್ನು ಕಾಕ್ಸ್ ಬಝಾರ್‍ನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಪೆಂಡಾಲ್ ಹೊರಗಡೆ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಇಕ್ಬಾಲ್ ಹುಸೇನ್‍ನ್ನು ಆರೋಪಿ ಎಂದು ಗುರುತಿಸಿದ್ದಾರೆ. ಆರೋಪಿ ನಿಧಾನವಾಗಿ ಬಂದು ದುರ್ಗಾ ಪೂಜೆಗಾಗಿ ಹಾಕಲಾಗಿದ್ದ ಪೆಂಡಾಲ್‍ನಲ್ಲಿದ್ದ ಆಂಜನೇಯ ಪ್ರತಿಮೆಯ ಹಿಂಭಾಗದಲ್ಲಿ ಪವಿತ್ರ ಕುರಾನ್ ಪುಸ್ತಕವನ್ನು ಅಡಗಿಸಿಟ್ಟು, ಮತ್ತೆ ಏನು ಆಗಿಲ್ಲ ಎಂಬಂತೆ ನಡೆದು ಹೋಗಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ.

ಈ ಘಟನೆಯ ಬಳಿಕ ಬಾಂಗ್ಲಾದೇಶದಲ್ಲಿ ಹಿಂಸಾಚಾರ ಭುಗಿಲೇದ್ದು, ಮೂರು ಮಂದಿ ಹತ್ಯೆಯಾಗಿತ್ತು. ಹಲವಾರು ಮಂದಿ ಗಾಯಗೊಂಡಿದ್ದರು. ದುಷ್ಕರ್ಮಿಗಳು ದುರ್ಗಾ ಪೂಜೆಯ ಪೆಂಡಾಲ್ ಅನ್ನು ಧ್ವಂಸ ಮಾಡಿದ್ದರು. ಚಂದಪುರ್, ಹಜಿಗಾಂಜ್, ಚಟ್ಟೋಗ್ರಾಮ್ಸ್, ಕಾಕ್ಸ್ ಬಝಾರ್ ಪೆಕುವಾ, ರಂಗ್‍ಪುರನ ಪ್ರಿಗಂಜ್ ಸೇರಿದಂತೆ ಅನೇಕ ಕಡೆಗಳಲ್ಲಿ ಕೋಮು ಗಲಭೆ ನಡೆದಿತ್ತು. ಕೋಮಿಲ್ಲಾ ಪೊಲೀಸರು ನಾಲ್ಕು ಪ್ರಕರಣಗಳನ್ನು ದಾಖಲಿಸಿ 41 ಮಂದಿಯನ್ನು ಬಂಸಿದ್ದಾರೆ.

ಈಗ ಇಕ್ಬಾಲ್ ಬಂಧನದ ಮೂಲಕ ಘಟನೆಗೆ ಮೂಲ ಕಾರ್ಯಕರ್ತ ಸಿಕ್ಕಿ ಬಿದ್ದಂತಾಗಿದೆ. ಆರೋಪಿಯ ತಾಯಿ ಅಮೀನಾ ಬೇಗಂ ಮಾತನಾಡಿದ್ದು, ಇಕ್ಬಾಲ್ ಮಾದಕ ವ್ಯಸನಿಯಾಗಿದ್ದಾನೆ, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ. ಹತ್ತು ವರ್ಷಗಳ ಹಿಂದೆ ನೆರೆ ಮನೆಯವರಿಗೆ ಚಾಕುವಿನಿಂದ ಹೊಟ್ಟೆಗೆ ಇರಿದಿದ್ದ ಎಂದು ಹೇಳಿದ್ದಾರೆ.

Facebook Comments