ಜಲಪಾತ್ಸೋತ್ಸವ ಪರಂಪರೆ ಉಳಿಸುವ ಜವಾಬ್ದಾರಿ ನಮ್ಮದು: ಅಶೋಕ್

ಈ ಸುದ್ದಿಯನ್ನು ಶೇರ್ ಮಾಡಿ

ಮಳವಳ್ಳಿ,ಜ.19- ಜಲಪಾತ್ಸೋತ್ಸವ ಒಂದು ಹಬ್ಬ. ಈ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿ ನಮ್ಮದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಹೇಳಿದರು. ಶಿವನಸಮುದ್ರದ ಗಗನಚುಕ್ಕಿಯಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಜಂಟಿಯಾಗಿ ನಡೆಸಿದ ಪ್ರಸಿದ್ಧ ಜಲಪಾತೋತ್ಸವದಲ್ಲಿ ಮಾತನಾಡಿ, ಈ ಕಾರ್ಯಕ್ರಮದ ಮೂಲಕ ಸ್ಥಳೀಯ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಹಾಗೂ ಕನ್ನಡದ ಕಂಪು, ಸಾಂಸ್ಕøತಿಯನ್ನು ಇಡೀ ವಿಶ್ವಕ್ಕೆ ಪರಿಚಯಿಸುವ ಕೆಲಸ ಮಾಡಬೇಕಿದೆ ಎಂದರು.

ನೀರು ಮತ್ತು ಪ್ರಕೃತಿಯ ಬೆಲೆ ನಮಗೆ ಅರಿವಾಗುತ್ತಿಲ್ಲ. ನೀರಿಲ್ಲದೆ ಮಾನವನ ಬದುಕಿಲ್ಲ. ಕೆಆರ್‍ಎಸ್‍ನಲ್ಲಿ ಜನವರಿ ತಿಂಗಳಲ್ಲಿ ಇಷ್ಟು ಪ್ರಮಾಣದ ನೀರಿರುವುದು 100 ವರ್ಷಗಳಲ್ಲೇ ಇದೇ ಮೊದಲು. ಈ ಅಮೂಲ್ಯವಾದ ನೀರನ್ನು ಸದ್ಬಳಕೆ ಮಾಡಿಕೊಳ್ಳೋಣ ಎಂದು ಸಲಹೆ ಮಾಡಿದರು. ಕನ್ನಡ ನಾಡು ಹಿಂದೆಂದೂ ಕಾಣದ ಪ್ರವಾಹದಿಂದ ನಿರಾಶ್ರಿತರಾದ ಲಕ್ಷಾಂತರ ಜನರಿಗೆ ಸ್ಪಂದಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಪ್ರತಿ ತಿಂಗಳು ಒಂದು ದಿನ ಸರ್ಕಾರವೇ ರೈತರ ಮನೆಗಳಿಗೆ ತೇರಳಿ ಅವರ ಸಮಸ್ಯೆ ಅರಿತು ಕೆಲಸ ಮಾಡಲು ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು. ಜಲಪಾತೋತ್ಸವ ಆಯೋಜನೆಗೆ ಜಿಲ್ಲಾದ್ಯಂತ ಟೀಕೆಗಳು ಬಂದಿವೆ. ಎಲ್ಲ ಟೀಕೆಗಳನ್ನು ಸ್ವಾಗತಿಸುವುದಾಗಿ ಹೇಳಿದ ಅವರು,ಕೆಆರ್‍ಎಸ್ ಜಲಾಶಯದ ನೀರನ್ನು ಜಲಪಾತೋತ್ಸವಕ್ಕೆ  ಬಳಸಿಕೊಳ್ಳದೆ ಖಾಸಗಿ ಜಲ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ಬಳಸುವ ನೀರನ್ನೇ ಉತವಕ್ಕೆ ಬಳಸಲಾಗುತ್ತಿದೆ ಎಂದು ಶಾಸಕ ಡಾ.ಕೆ.ಅನ್ನದಾನಿ ತಿಳಿಸಿದರು.

ತಾಲ್ಲೂಕಿನ ಶಿವನಸಮುದ್ರದ ಪ್ರಕೃತಿ ವೈಭವವನ್ನು ನಾಡಿನಾದ್ಯಂತ ಪಸರಿಸುವ ಹಾಗೂ ಪ್ರವಾಸಿ ಸ್ಥಳಗಳನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು. ಪ್ರಕೃತಿಯ ವೈ¨sವ ಪ್ರತಿಧ್ವನಿಸಲು ಜಲಪಾತಕ್ಕೆ ಹಾಕಲಾಗಿದ್ದ ಲೇಸರ್ ಲೈಟ್ಸ್‍ಗೆ ಕನ್ನಡ ಪ್ರಾಧಿಕರದ ಅಧ್ಯಕ್ಷ ಟಿ.ಎನ್.ನಾಗಭರಣ ,ಜಿಲಾಧಿಕಾರಿ ಡಾ.ವೆಂಕಟೇಶ್ ಚಾಲನೆ ನೀಡಿದರು, ವೇದಿಕೆಯಲ್ಲಿ ಸುಗಮ ಸಂಗೀತ ,ನೃತ್ಯ,ಜಾನಪದ ಗಾಯನಗಳು,ಹಿಂದೂಸ್ತಾನಿ ಸಂಗೀತ ವಿವಿಧ ಶಾಲೆಮಕ್ಕಳು ನಡೆಸಿಕೊಂಡ ನೃತ್ಯ ಪ್ರದೇಶ ನೋಡಗರನ್ನು ಸೆಳೆಯಿತು.

ಲೇಸರ್ ಬೆಳಕಿನ ಕಿರಣಗಳ ನಡುವೆ ಹಾಲಿನ ನೊರೆಯಾಗಿ ಧಮ್ಮಿಕ್ಕುತ್ತಿದ್ದ ಗಗನಚುಕ್ಕಿ ಜಲಪಾತವನ್ನು ಜನ  ಕಣ್ತುಂಬಿ ಕೊಂಡರು. ಕತ್ತಲು-ಬೆಳಕಿನ ನಡುವೆ ಬೆಸೆದು ಕೊಂಡಿದ್ದ ಜಲರಾಶಿ ನೋಡುಗರಲ್ಲಿ ಸಂಭ್ರಮ ಮೂಡಿಸಿತು.

ಪ್ರಕೃತಿ ಸೌಂದರ್ಯ ಸವಿಯಲು ಮೊದಲ ಭಾರಿಗೆ ಪ್ರವಾಸೋದ್ಯಮ ಇಳಾಖೆ ಸಹಯೋಗದಲ್ಲಿ ಹೆಲಿಟೊರಿಸಂ ವ್ಯವಸ್ಥೆ ಕಲ್ಪಿಸಲಾಗಿತ್ತು. ತಾಲ್ಲೂಕಿನ ಪ್ರಸಿದ್ಧ ತಾಣವಾದ ಮುತ್ತತ್ತಿ ದೇವಾಲಯ ಎಲ್ಲಾರ ಗಮನ ಸೆಳೆದವು.

Facebook Comments