ಸಂಪುಟಕ್ಕೆ ಸೇರ್ಪಡೆಯಾಗುವವರ ಹೆಸರು ಅಂತಿಮವಾಗಿಲ್ಲ: ಆರ್.ಅಶೋಕ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.5- ನಾಳೆ ವಿಸ್ತರಣೆಯಾಗಲಿರುವ ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವವರ ಹೆಸರು ಇನ್ನೂ ಅಂತಿಮವಾಗಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಸಂಪುಟ ಸೇರಲಿರುವವರ ಹೆಸರುಗಳನ್ನು ಬಿಜೆಪಿಯ ರಾಷ್ಟ್ರೀಯ ನಾಯಕರು ಅಂತಿಮಗೊಳಿಸಬೇಕಾಗಿದೆ.

ಇಂದು ರಾತ್ರಿಯೊಳಗಾಗಿ ಪಕ್ಷದ ಹೈಕಮಾಂಡ್ ಸಂಪುಟ ಸೇರುವವರ ಹೆಸರನ್ನು ಅಂತಿಮಗೊಳಿಸುತ್ತಾರೆ. ಅದಕ್ಕೆ ನಾವೆಲ್ಲರೂ ಒಪ್ಪಲೇಬೇಕಾಗಿದೆ. ನಮ್ಮಲ್ಲಿ ಮೂಲ ಹಾಗೂ ವಲಸಿಗ ಬಿಜೆಪಿ ಎಂಬ ಯಾವುದೇ ಭೇದಭಾವ ಇಲ್ಲ. ನಾವೆಲ್ಲರೂ ಒಂದೇ ಪಕ್ಷದವರು. ಒಟ್ಟಿಗೆ ಇದ್ದೇವೆ ಎಂದು ಹೇಳಿದರು.

Facebook Comments