ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಬೋರ್‍ವೆಲ್ ಕೊರೆಸಲು ಸೂಚನೆ : ಆರ್.ಅಶೋಕ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.10- ಬೀದರ್ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಬೋರ್‍ವೆಲ್‍ಗಳನ್ನು ಕೊರೆಸಲು ಸೂಚನೆ ನೀಡುವುದಾಗಿ ಕಂದಾಯ ಸಚಿವ ಆರ್.ಅಶೋಕ್ ಭರವಸೆ ನೀಡಿದರು.  ವಿಧಾನಸಭೆಯ ಶೂನ್ಯವೇಳೆಯಲ್ಲಿ ಈಶ್ವರ್ ಖಂಡ್ರೆ,ಬಸವರಾಜ್ ಪಾಟೀಲ್ ಹುಮ್ನಾಬಾದ್ ಸೇರಿದಂತೆ ಹಲವಾರು ಮಂದಿ ವಿಷಯ ಪ್ರಸ್ತಾಪ ಮಾಡಿ ಬೀದರ್ ಜಿಲ್ಲೆಯಲ್ಲಿ ಯಾವುದೇ ಶಾಶ್ವತ ನೀರಾವರಿ ಯೋಜನೆಗಳಿಲ್ಲ.

ಕುಡಿಯುವ ನೀರು ರಕ್ಷಣೆಗೆ ಬೋರ್‍ವೆಲ್ ಕೊರೆಸಬೇಕೆಂದರೆ ಪೂರ್ವ ಅನುಮತಿ ಅಗತ್ಯ ಎಂದು ಆದೇಶ ಹೊರಡಿಸಿದ್ದಾರೆ. ಇದರಿಂದ ಭ್ರಷ್ಟಾಚಾರ ಹೆಚ್ಚಾಗುತ್ತದೆ. ಕೂಡಲೇ ಜಿಲ್ಲಾಧಿಕಾರಿಗಳು ತಮ್ಮ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಅಶೋಕ್, ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು ಇದಕ್ಕೆ ಹಾರಿಕೆಯ ಉತ್ತರ ಬೇಡ , ಆದೇಶವನ್ನು ಹಿಂಪಡೆಯಲೇಬೇಕು ಎಂದು ಒತ್ತಾಯ ಮಾಡಿದಾಗ ಪರಿಶೀಲಿಸಿದ ಬಳಿಕ ಕ್ರಮ ಕೈಗೊಳ್ಳುವುದಾಗಿ ಅಶೋಕ್ ಭರವಸೆ ನೀಡಿದರು.  ಸಭಾಧ್ಯಕ್ಷರು ಚರ್ಚೆಯನ್ನು ಮೊಟಕು ಗೊಳಿಸಿದರು.

Facebook Comments