ಯುದ್ಧಕ್ಕೂ ಮುನ್ನ ಕಾಂಗ್ರೆಸ್, ಜೆಡಿಎಸ್ ಶಸ್ತ್ರ ತ್ಯಾಗ : ಆರ್.ಅಶೋಕ್

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಅ.29- ಹೈವೋಲ್ಟೇಜ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಸೋಲೊಪ್ಪಿಕೊಂಡು ಯುದ್ಧಕ್ಕೆ ಮುಂಚೆಯೇ ಶಸ್ತ್ರ ತ್ಯಾಗ ಮಾಡಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದ್ದು, ಡಿಕೆಶಿಗೆ ಸೋಲಿನ ರುಚಿ ತೋರಿಸುತ್ತೇವೆ. ಟ್ರಬಲ್ ಶೂಟರ್ ಎಂದು ಅಧಿಕಾರ ಇದ್ದಾಗ ಆಟ ಆಡಿದ್ದವರಿಗೆ ಸೋಲಿಗೆ ರುಚಿ ತೋರಿಸುತ್ತೇವೆ. ಕಾಂಗ್ರೆಸ್ ನಂಬಿಕೆ, ವಿಶ್ವಾಸವನ್ನು ಕಳೆದುಕೊಂಡಿದೆ. ವಿಷಯಾಧಾರಿತ ಚುನಾವಣೆ ಮಾಡುವ ಬದಲು ಪೆÇೀಸ್ಟ್ ಮಾರ್ಟಂ ಹೇಳಿಕೆ ನೀಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಸಿದ್ದರಾಮಯ್ಯ, ಡಿಕೆಶಿ ನಡುವೆ ಹೊಂದಾಣಿಕೆ ಇದ್ದಿದ್ದರೆ ದೇವೇಗೌಡ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಿದ್ದರು. ಇಲ್ಲದ ಕುರ್ಚಿಗೆ ಟವೆಲ್ ಹಾಕುವುದರಲ್ಲಿ ಫೇಮಸ್ ಆಗಿರುವ ಡಿಕೆಶಿ ಸುಮ್ಮನೆ ಆರೋಪಿಸುತ್ತಿz್ದÁರೆ. ಇನ್ನೂ15 ವರ್ಷ ದೇಶದಲ್ಲಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುತ್ತದೆ. ಕಾಂಗ್ರೆಸ್ ಸುಮ್ಮನೆ ಪ್ರತಿಭಟನೆ ಮಾಡುತ್ತಿದೆ. ಡಿಜೆ ಹಳ್ಳಿ ಪ್ರಕರಣದಲ್ಲಿ ಜನರು ಭಯಭೀತರಾದಾಗ ಕಾಂಗ್ರೆಸ್ ಎಲ್ಲಿ ಹೋಗಿತ್ತು, ದಲಿತ ಶಾಸಕನ ಮನೆ ಸುಟ್ಟಾಗ ಕಾಂಗ್ರೆಸ್ ಎಲ್ಲಿ ಪ್ರತಿಭಟಿಸಿತ್ತು. ಈಗ ಚುನಾವಣೆಗಾಗಿ ಪ್ರತಿಭಟನೆ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್, ಜೆಡಿಎಸ್ ಅಧಿಕಾರಾವಧಿಯಲ್ಲಿ ಏಕೆ ಮದಲೂರಿಗೆ ನೀರು ಹರಿಸಲಿಲ್ಲ. ಕಾಂಗ್ರೆಸ್ ಮುಖಂಡ ಸುರ್ಜೇವಾಲ ಟಿಬಿಜೆಗೆ ಏಕೆ ಟಿಕೆಟ್ ಕೊಟ್ರಿ ಎಂದು ಪ್ರಶ್ನಿಸಿz್ದÁರೆ, ಡಿಕೆಶಿಗೆ ಜಯಚಂದ್ರ ಅವರು ಚುನಾವಣೆಗೆ ಸ್ಪರ್ಧಿಸುವುದು ಬೇಕಿರಲಿಲ್ಲ, ಡಿಕೆಶಿ ಟೆ¸್ಟï ಡ್ರೈವ್ ಕಾರಿದ್ದ ಹಾಗೆ, ಕಾಂಗ್ರೆಸ್‍ನವರು ಬಳಸಿ ಬಿಸಾಡುತ್ತಾರೆ ಎಂದು ವ್ಯಂಗ್ಯವಾಡಿದರು. ಬಿಜೆಪಿಗೆ ದಮ್ ಇರುವುದಕ್ಕೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಿರುವುದು, ಆರ್ಟಿಕಲ್ 372 ರದ್ದು ಮಾಡಿರುವುದು, ತ್ರಿವಳಿ ತಲಾಖ್ ರದ್ದುಗೊಳಿಸಿರುವುದು, ಅಡ್ಯಾಕ್ ಅಧ್ಯಕ್ಷರನ್ನು ಇಟ್ಟುಕೊಂಡು ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಗೆ ದಮ್ ಇದ್ದರೆ ಸಿದ್ದರಾಮಯ್ಯ ಪತ್ರ ಬರೆಯಲಿ ಎಂದು ಸವಾಲು ಹಾಕಿದರು.

ಕೋಟೆ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಅನ್ನೋ ಹಾಗೆ ಜೆಡಿಎಸ್ ಈಗ ಪ್ರಚಾರ ಶುರು ಮಾಡಿದೆ. ಜೆಡಿಎಸ್ ಮುಖಂಡರು ಖಾಲಿಯಾಗಿದ್ದಾರೆ, ಇತಿಹಾಸಲ್ಲಿ ಮೊದಲ ಬಾರಿಗೆ ಶಿರಾದಲ್ಲಿ ಕೇಸರಿ ಬಾವುಟ ಹಾರಿಸಲಿದ್ದೇವೆ. ಬಿಜೆಪಿ ಗೆದ್ದರೆ ಆಡಳಿತ ಪಕ್ಷದ ಶಾಸಕರಿಂದ ಹಲವು ಜ್ವಲಂತ ಸಮಸ್ಯೆಗಳು ಬಗೆಹರಿಯಲಿವೆ ಎಂದು ಹೇಳಿದ ಅವರು 20 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಶಿರಾದಲ್ಲಿ ಗೆಲುವು ಸಾಧಿಸಲಿದ್ದೇವೆ ಎಂದರು.

ಕೊರೊನಾ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರು ಮನೆ ಮುಂದೆ ನೋ ಎಂಟ್ರಿ ಬೋರ್ಡ್ ಹಾಕಿಕೊಂಡಿದ್ದರು. ಬಿಎಸ್‍ವೈ ಏಳೆಂಟು ಸಭೆ ನಡೆಸಿ, ದೇಶದಲ್ಲಿ ಅತಿ ಹೆಚ್ಚು ಟೆ¸್ಟïಗಳನ್ನು ಮಾಡಿಸಿದ್ದು ಬಿಎಸ್‍ವೈ, ಈಗ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಮುಖಂಡರು ಬೀದಿಗೆ ಬಂದಿದ್ದಾರೆ ಎಂದು ವ್ಯಂಗ್ಯವಾಡಿದರು. ರಮೇಶ್ ಕುಮಾರ್ ಆರೋಗ್ಯ ಸಚಿವರಾಗಿದ್ದಾಗ ಖರೀದಿಸಿದ್ದ ವೆಂಟಿಲೇಟರ್ ಚಿನ್ನದ್ದ ಎಂದು ಪ್ರಶ್ನಿಸಿದರು.

ಮೋದಿ ಅವರು ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದರಿಂದ ಕಾಂಗ್ರೆಸ್‍ಅನ್ನು ಮೂಲೆಗುಂಪು ಮಾಡಿದ್ದಾರೆ. ದೇಶ, ರಾಜ್ಯ ಸಂಕಷ್ಟದಲ್ಲಿದೆ, ಪ್ರವಾಹ ಇದೆ ಇದರಿಂದ ಸಾಲ ಮಾಡಿದ್ದೇವೆಯೇ ಹೊರತು ಏನೂ ಇಲ್ಲದಾಗ ಲಕ್ಷಾಂತರ ಕೋಟಿ ಸಾಲಮಾಡಿದ್ದು ಏಕೆ? ಆ ಹಣ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.

ಕರ್ನಾಟಕದಲ್ಲಿರುವುದು ರಾಜಹುಲಿ ಯಡಿಯೂರಪ್ಪ ಸರ್ಕಾರ. ಯಾವ ನೌಕರರ ಸಂಬಳವನ್ನೂ ಕಡಿತಗೊಳಿಸಿಲ್ಲ, ಪ್ರತಿದಿನ ಕೋವಿಡ್ ಟೆ¸್ಟïಗಾಗಿ 5 ಕೋಟಿ ಖರ್ಚು ಮಾಡುತ್ತಿದ್ದು, ರಾಜ್ಯ ಸರ್ಕಾರ ದಿವಾಳಿಯಾಗಿಲ್ಲ ಎಂದ ಅವರು, ಯಡಿಯೂರಪ್ಪ ಅವರದ್ದು ಕೊಟ್ಟ ಮಾತಿಗೆ ತಪ್ಪದ ಸರ್ಕಾರ. ಹಾಗಾಗಿ ಶಿರಾ ಮತದಾರರು ಬಿಜೆಪಿಗೆ ಮತ ನೀಡಲಿದ್ದಾರೆ ಎಂದರು.

ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮಾತನಾಡಿ, ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುವ ಸಲುವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮದಲೂರಿನಲ್ಲಿ ಪ್ರಚಾರ ಮಾಡಲಿದ್ದು, ಶಿರಾ ನಗರದಲ್ಲಿ ಬಹಿರಂಗ ಪ್ರಚಾರ ಮಾಡಲಿದ್ದಾರೆ. ಅ.31ರಂದು ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿ¯್ಲÁಧ್ಯಕ್ಷ ಬಿ.ಸುರೇಶ್ ಗೌಡ, ಅಬಕಾರಿ ಸಚಿವ ನಾಗೇಶ್, ಶಾಸಕ ಜ್ಯೋತಿ ಗಣೇಶ್, ಮುಖಂಡರಾದ ಎಸ್.ಆರ್.ಗೌಡ, ಲಕ್ಷ್ಮೀಶ್ ಸೇರಿದಂತೆ ಇತರರಿದ್ದರು.

Facebook Comments