ಅವಧಿ ಮುಗಿಯುವವರೆಗೂ ಯಡಿಯೂರಪ್ಪನವರೇ ಸಿಎಂ : ರ್.ಆಶೋಕ್

ಈ ಸುದ್ದಿಯನ್ನು ಶೇರ್ ಮಾಡಿ

ಕೊಡಗು, ನ.29- ರಾಜ್ಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ಇಲ್ಲ. ಯಡಿಯೂರಪ್ಪ ಪೂರ್ಣಾವದಿಯ ಅಧಿಕಾರ ನಡೆಸುತ್ತಾರೆ ಎಂದು ಕಂದಾಯ ಸಚಿವ ಆರ್.ಆಶೋಕ್ ತಿಳಿಸಿದರು.

ಜಿಲ್ಲೆಯ ನೂತನ ತಾಲೂಕು ಪೊನ್ನಂಪೇಟೆಗೆ ಅಕೃತ ಚಾಲನೆ ದೊರೆತ ಸಂದರ್ಭದಲ್ಲಿ ಮಾತನಾಡಿದ ಅವರು, ನಾನು ದೆಹಲಿಗೆ ಹೋಗಿದ್ದೆ. ಮುಖ್ಯಮಂತ್ರಿಗಳ ಬದಲಾವಣೆ ಮಾಡುವ ಲಕ್ಷಣವೇ ಇಲ್ಲ ಎಂದು ಹೇಳಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತು ಕೊಟ್ಟವರಿಗೆ ಮಂತ್ರಿ ಮಾಡುತ್ತಾರೆ. ಕೇಂದ್ರ ನಾಯಕರು ಸಂಪುಟ ಪುನಾರಚನೆ ಮತ್ತು ವಿಸ್ತರಣೆ ವಿಚಾರವನ್ನು ನೋಡಿಕೊಳ್ಳುತ್ತಾರೆ. ಆ ಬಗ್ಗೆ ಅವರೇ ನಿರ್ಧರಿಸುತ್ತಾರೆ ಎಂದರು.

ಸಂತೋಷ್ ಅವರು ವೈಯಕ್ತಿಕ ಕಾರಣದಿಂದ ನೊಂದಿದ್ದರು. ಎರಡು ದಿನಗಳಲ್ಲಿ ಅವರೇ ನಿಮ್ಮ ಮುಂದೆ ಬರುತ್ತಾರೆ. ಆದರೆ, ವಿರೋಧ ಪಕ್ಷದವರು ಏನೇನೋ ಮಾತನಾಡುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಕಾರ್ಯಕ್ರಮದಲ್ಲಿ ಸಚಿವ ನಾರಾಯಣಗೌಡ, ಶಾಸಕರಾದ ಅಪ್ಪಚ್ಚು ರಂಜನ್ ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin