ಸಂಕಷ್ಟದ ಕಾಲದಲ್ಲೂ ಸಿಎಂ ಬಿಎಸ್ವೈ ಸಮರ್ಥವಾಗಿ ರಾಜ್ಯವನ್ನು ಮುನ್ನಡೆಸಿದ್ದಾರೆ : ಆರ್.ಅಶೋಕ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.27-ರಾಜ್ಯದಲ್ಲಿ ಸಂಭವಿಸಿದ್ದ ನೆರೆ ಕಷ್ಟದ ಕಾಲದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ರಾಜ್ಯವನ್ನು ಮುನ್ನಡೆಸಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ವಾರ್ತಾ ಮತ್ತು ಸಾರ್ವಜನಿಕ‌ ಸಂಪರ್ಕ ಇಲಾಖೆ ವಿಧಾನಸೌಧದಲ್ಲಿ ಆಯೋಜಿಸಿದ್ದ ಸರ್ಕಾರದ ಒಂದು ವರ್ಷದ ಸಾಧನೆಯ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಸರ್ಕಾರದ ಪ್ರಾರಂಭದಲ್ಲೇ ನೆರೆ ಪರಿಸ್ಥಿತಿ ಉಂಟಾಗಿತ್ತು. ಯಡಿಯೂರಪ್ಪ ಹೊರತು ಪಡಿಸಿ ಬೇರೆ ಯಾರೇ ಇದ್ದಿದ್ದರೂ ಇಂತ ಪರಿಸ್ಥಿತಿ ನಿಭಾಯಿಸಲು ಆಗುತ್ತಿರಲಿಲ್ಲ. ಸಾಕಷ್ಟು ಸವಾಲುಗಳನ್ನ ಫೇಸ್ ಮಾಡುತ್ತಲೇ ನಿಂತ ಸರ್ಕಾರ‌ ಎಂದ ಅವರು, ಮುಂದಿನ ದಿನದಲ್ಲಿ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಪ್ರಯತ್ನ ಮಾಡುತ್ತೇವೆ ಎಂದರು.

ಒಂದು ವರ್ಷ ಜನಪರ ಸರ್ಕಾರವಾಗಿ ಬಿ.ಎಸ್. ವೈ. ಕೆಲಸ ಮಾಡಿದ್ದಾರೆ. ಕೊರೋನ ಸಂಧರ್ಭದಲ್ಲಿ ಕೂಡಾ ಸಮರ್ಥವಾಗಿ ನಿಭಾಯಿಸಿದ್ದಾರೆ. ಅಕ್ಕ ಪಕ್ಕದ ರಾಜ್ಯಗಳು ಸಂಬಳ ಕೊಡಲೂ ಯೋಚಿಸಬೇಕಾದಂತಹ ಸ್ಥಿತಿ ಇತ್ತು. ಆದರೆ ನಮ್ಮಲ್ಲಿ ಕಷ್ಟದ ಸಂಧರ್ಭದಲ್ಲಿ ಕೂಡಾ ಸಂಬಳ ತಡೆಯುವ ಕೆಲಸ ಮಾಡಲಿಲ್ಲ ಎಂದು ಹೇಳಿದರು.

ಈ ವರ್ಷ ದಾಖಲೆ ಪ್ರಮಾಣದಲ್ಲಿ ಕೃಷಿ ಚಟುವಟಿಕೆ ನಡೆಯುತ್ತದೆ. ಇದು ನಾವು ರೈತಪರ ಇದ್ದೇವೆ ಅನ್ನೋದಕ್ಕೆ ಸಾಕ್ಷಿ. ಸರ್ಕಾರ ರೈತ ಪರವಾಗಿದೆ ಎಂದರು.

ಕಾಂಗ್ರೆಸ್ ನವರು ವಿರೋಧ ಪಕ್ಷವಾಗಿ ಆರೋಪ ಮಾಡುತ್ತಿದ್ದಾರೆ. ಅವರು ತನಿಖೆ ಮಾಡಿ ಅಂದ ತಕ್ಷಣ ನಾವು ಮಾಡೋದಕ್ಕೆ ಆಗಲ್ಲ. ಕಾಂಗ್ರೆಸ್ ನವರು ಪತ್ರ ಬರೆದ ತಕ್ಷಣ ಉತ್ತರ ಕೊಡೋಕಾಗಲ್ಲ. ಅವರ ಸರ್ಕಾರ ಇದ್ದಾಗ ನಾವೂ ಸಾವಿರ ಪತ್ರಗಳನ್ನು ಬರೆದಿದ್ದೆವು. ಅವರು ಎಷ್ಟಕ್ಕೆ ಉತ್ತರ ಕೊಟ್ಟಿದಾರೆ.
ಸ್ವಲ್ಪ ಕಾಲಾವಕಾಶ ತೆಗೆದುಕೊಂಡು ಉತ್ತರ ಕೊಟ್ಟೇ ಕೊಡುತ್ತೇವೆ.

ಬೇಕಾದರೆ ಆರ್ ಟಿ ಐ ನಲ್ಲೂ ದಾಖಲೆಗಳನ್ನು ಪಡೆದುಕೊಳ್ಳಲಿ.
ಹಿಂದೆ ಅವರು ಸಿಎಂ ಆಗಿದ್ದಾಗ ನಾವು ಸಾವಿರಾರು ಪತ್ರ ಬರೆದಿದ್ದೇವು. ಅವರ ಪತ್ರಕ್ಕೆ ಸರ್ಕಾರ ಉತ್ತರ ಕೊಡಲಿದೆ. ಅವರ ಅಪಾದನೆಗಳಿಗೆ ನಾವು ಈಗಾಗಲೇ ಉತ್ತರ ಕೊಟ್ಟಿದ್ದೇವೆ.

ಎಸಿಬಿ ಮಾಡಿದವರೇ ಅವರು, ಅಲ್ಲಿ ಮಾಹಿತಿ ನೀಡಿ ತನಿಖೆಗೆ ದೂರು ಕೊಡಬೇಕಿತ್ತು. ಎಸಿಬಿ ಮುಚ್ಚಬೇಕಾ ಅಥವಾ ಬೇಡವಾ ಅನ್ನೋದರ ಬಗ್ಗೆ ಸಿಎಂ ತೀರ್ಮಾನ ಮಾಡುತ್ತಾರೆ ಎಂದರು.

Facebook Comments

Sri Raghav

Admin