ಕಪೋಲಕಲ್ಪಿತ ಆರೋಪ ಮಾಡುವುದರಲ್ಲಿ ಡಿಕೆಶಿ‌ ನಿಸ್ಸೀಮ : ಆರ್ .ಅಶೋಕ್

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ: ರಾಜ್ಯದಲ್ಲಿ ವಿರೋಧ ಪಕ್ಷ ಎಂಬುದೇ ಇಲ್ಲ; ಕಾಂಗ್ರೆಸ್ ಪಕ್ಷದಲ್ಲಿ ಬಣ ರಾಜಕೀಯ ಶುರುವಾಗಿ ಅದು ಒಡೆದ ಮನೆಯಾಗಿದೆ ಎಂದು ಕಂದಾಯ ಸಚಿವ ಆರ್ .ಅಶೋಕ್ ಟೀಕಿಸಿದರು. ಚನ್ನರಾಯಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ಗೊಂದಲದ ಗೂಡಾಗಿದ್ದು ಡಿ.ಕೆ. ಶಿವಕುಮಾರ್- ಸಿದ್ದರಾಮಯ್ಯ- ಪರಮೇಶ್ವರ್ -ದಿನೇಶ್ ಗುಂಡೂರಾವ್ ಪಕ್ಷದಲ್ಲಿ ಬಣ ರಾಜಕೀಯ ಮಾಡಿ ಕೊಂಡು ಹೊಡೆದಾಡುತ್ತಿದ್ದಾರೆ ಎಂದರು .

ಈ ನಾಯಕರ ಹೊಡೆದಾಟದ ಕಾರಣ ಕರ್ನಾಟಕದಲ್ಲಿ ವಿರೋಧಪಕ್ಷವೇ ಇಲ್ಲದಂತಾಗಿದೆ ಅವರ ಪಕ್ಷದಲ್ಲಿಯೇ ಇಂತಹ ಬೆಳವಣಿಗೆ ನಡೆಯುತ್ತಿದ್ದರು ಬಿಜೆಪಿ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು .

ಕಾಂಗ್ರೆಸ್ ನಾಯಕರು ಬಿಜೆಪಿ ಸರ್ಕಾರದಲ್ಲಿ ಖಜಾನೆ ಖಾಲಿಯಾಗಿದೆ ಎಂದು ಸುಳ್ಳು ಆಪಾದನೆ ಮಾಡುತ್ತಾ ಜನರ ದಾರಿ ತಪ್ಪಿಸುತ್ತಿದ್ದಾರೆ ಇದೆಲ್ಲಾ ಕೇವಲ ಆರೋಪಗಳಾಗಿದ್ದು ಸತ್ಯಾಂಶವಿಲ್ಲ ಎಂದು ಅಶೋಕ್ ಅಲ್ಲಗೆಳೆದರು.ಹಾಸನ ಜಿಲ್ಲೆಯೊಂದರಲ್ಲೇ ಜಿಲ್ಲಾಧಿಕಾರಿಗಳ ತುರ್ತು ಪರಿಹಾರ ನಿಧಿಯಾಗಿ 22 ಕೋಟಿಗೂ ಅಧಿಕ ಹಣ ಲಭ್ಯವಿದೆ ಎಂದು ಹೇಳಿದ ಅವರು ಸರ್ಕಾರದಲ್ಲಿ ಹಣದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿಯಲ್ಲಿ ಯಾವುದೇ ಭಿನ್ನಮತವಿಲ್ಲ ಬಿಎಸ್ ಯಡಿಯೂರಪ್ಪ ಅವರೇ ಮುಂದಿನ ಅವಧಿಗೆ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದು ನಾಯಕತ್ವ ಹಾಗೂ ಸಿಎಂ ಸ್ಥಾನದ ಬದಲಾವಣೆ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ .

ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಬಿ.ಎಲ್ ‌.ಸಂತೋಷ್ ಆತ್ಮಹತ್ಯೆ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ದೆಹಲಿ ಪ್ರವಾಸದಲ್ಲಿದ್ದ ನನಗೆ ಹಾಸನ ಪ್ರವಾಸದ ವೇಳೆ ಸೋಮಶೇಖರ್ ಮಾಹಿತಿ ನೀಡಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದರು .

ಎನ್.ಆರ್. ಸಂತೋಷ್ ಅವರು ಚಿಕಿತ್ಸೆಯಲ್ಲಿದ್ದ ಇನ್ನು ಅವರಿಗೆ ಪೂರ್ಣಪ್ರಜ್ಞ ಬಂದ ನಂತರ ಹೇಳಿಕೆಯ ಆಧಾರದ ಮೇಲೆ ಪ್ರತಿಕ್ರಿಯೆ ನೀಡಲು ಸಾಧ್ಯ…..!! ವಿಡಿಯೋ ವಿಷಯವಾಗಿ ಸಂತೋಷ್ ಆತ್ಮಹತ್ಯೆಗೆ ಪ್ರಯತ್ನ ನಡೆಸಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಆರೋಪಿಸಿರುವುದು ಸುಳ್ಳಿನ ಆಪಾದನೆ ಆಗಿದ್ದು ಕಪೋಲಕಲ್ಪಿತ ಹೇಳಿಕೆ ನಿಡುವುದರಲ್ಲಿ ಡಿಕೆಶಿ ನಿಸ್ಸೀಮರು ಎಂದು ಅಶೋಕ್ ಲೇವಡಿ ಮಾಡಿದರು.

Facebook Comments

Sri Raghav

Admin